ಸಿದ್ದರಾಮಯ್ಯ ಸರ್ಕಾರ ಹಿಂದೂಗಳಿಗೆ ಸುರಕ್ಷಿತ ಅಲ್ಲ- ಕೋಟಾ ಶ್ರೀನಿವಾಸ ಪೂಜಾರಿ

Public TV
2 Min Read
kota shrinivas poojari

ಬೆಂಗಳೂರು : ಸಿದ್ದರಾಮಯ್ಯ ಸರ್ಕಾರ (Siddaramaiah) ಹಿಂದೂಗಳಿಗೆ (Hindu) ಸುರಕ್ಷಿತ ಅಲ್ಲ ಎಂದು ಬಿಜೆಪಿ ಮಾಜಿ ಸಚಿವ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ (Kota Srinivas Poojary) ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗ ಗಲಭೆ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಅವರು, ಗುರುವಾರ ಸತ್ಯ ಶೋಧನ ಸಮಿತಿ ಶಿವಮೊಗ್ಗಗೆ (Shivamogga) ಹೋಗಿತ್ತು.ನೊಂದ ಹಿಂದೂಗಳು ಸಮಿತಿ ಮುಂದೆ ಬದುಕಲಿ ಬಿಡಿ ಅಂತ ಹೇಳ್ತಿದ್ದಾರೆ. ನಾವು ಪಾಠ ಕಲಿಸಿದ ಮಕ್ಕಳು ಶಿಕ್ಷಕರಾದ ನಮ್ಮ ಮನೆಗೆ ಕಲ್ಲಿನಿಂದ ಹೊಡೆಯುವ ದುರಂತ ನೋಡಬೇಕಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ. ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ (Kashmiri Pandits) ಊರು ಬಿಟ್ಟು ಹೋಗೋ ಸ್ಥಿತಿ ನಿರ್ಮಾಣ ಆಗಿತ್ತು. ಈಗ ಅದೇ ನೋವನ್ನು ರಾಗಿಗುಡ್ಡದಲ್ಲಿ ಇರುವ ಹಿಂದೂಗಳು ಅನುಭವಿಸುತ್ತಿದ್ದಾರೆ ಎಂದು ಸರ್ಕಾರದ ವಿರುದ್ದ ಕಿಡಿಕಾರಿದರು.

 

ಹಿಂದೂಗಳಿಗೆ ಕರ್ನಾಟಕ ಸೇಫ್ (Karnataka Safe) ಅಲ್ಲ ಎಂಬ ಭಾವನೆ ಬರುವ ವಾತಾವರಣವನ್ನು ಸರ್ಕಾರ ನಿರ್ಮಾಣ ಮಾಡಿದೆ. ದುರಾದೃಷ್ಟಕ್ಕೆ ಹಿರಿಯ ಸಚಿವರು ವೇಷ ಮರೆಸಿಕೊಂಡು ಬಂದಿದ್ದಾರೆ ಅಂತ ಹಿಂದೂಗಳ ಮೇಲೆ ಆರೋಪ ಮಾಡ್ತಾರೆ. ತ್ರಿಶೂಲ ಇಟ್ಟುಕೊಂಡಿದ್ದಕ್ಕೆ ತಳವಾರ್ ಹಿಡಿದ್ದಾರೆ ತಪ್ಪೇನು ಅಂತ ಉಸ್ತುವಾರಿ ಮಂತ್ರಿ ಕೇಳ್ತಾರೆ. ಗಣೇಶೋತ್ಸವದಲ್ಲಿ ಯಾರಾದರೂ ತ್ರಿಶೂಲ ಹಿಡಿದುಕೊಂಡಿರುವುದನ್ನು ತೋರಿಸಲಿ ನೋಡೋಣ ಎಂದು ಸವಾಲ್ ಹಾಕಿದರು.

ನೋವಿನ ಸಂಗತಿ ಅಂದರೆ 75 ಸಾವಿರ ರೂ. ನಷ್ಟ ಅಂತ ಜಿಲ್ಲಾಡಳಿತ ವರದಿ ಕೊಟ್ಟಿದೆ. 6-7 ಕಾರು ಜಖಂ ಆಗಿದೆ. ಮನೆಗಳ ಗಾಜು ಒಡೆದು ಹೋಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಕೇವಲ 75 ಸಾವಿರ ರೂ. ನಷ್ಟ ಅಂತ ತೋರಿಸಿ ಇಷ್ಟು ದೊಡ್ಡ ಗಲಟೆಯನ್ನು ಏನು ಇಲ್ಲ ಅಂತ ಸರ್ಕಾರ ತೋರಿಸಲು ಹೊರಟಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಹಿಂದೂಗಳು ಸುರಕ್ಷಿತ ಅಲ್ಲ ಅನ್ನೋ ಸ್ಥಿತಿ ಆಗಿದೆ ವಾಗ್ದಾಳಿ ನಡೆಸಿದರು.

 

ರಾಗಿಗುಡ್ಡದ ಜನರು ಕಣ್ಣೀರು ಹಾಕುತ್ತಿದ್ದಾರೆ. ಹೀಗಿದ್ದರೂ ಸಿಎಂ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ಕೊಡುತ್ತೇನೆ ಎಂದು ಹೇಳಿಲ್ಲ. ಏನೇ ನಷ್ಟ ಆದರೂ ನಮಗೂ ಸರ್ಕಾರಕ್ಕೂ ಸಂಬಂಧ ಇಲ್ಲ ಎಂಬ ರೀತಿ ಇದ್ದಾರೆ. ಎಸ್‌ಪಿ, ‌ಡಿಸಿಗೆ ಈ ಸರ್ಕಾರ ಕೆಲಸ ಮಾಡಲು ಬಿಡುತ್ತಿಲ್ಲ. ಸರ್ಕಾರದ ನಡೆಯನ್ನು ನಾವು ಖಂಡಿಸುತ್ತೇವೆ. ಗೃಹ ಸಚಿವರು ಸ್ಥಳಕ್ಕೆ ಹೋಗಿ ಸಮಸ್ಯೆ ಆಲಿಸುತ್ತಾರೆ ಅಂದರೆ ಅವರು ರಾಜ್ಯದಲ್ಲಿ ಇಲ್ಲ ಅನ್ನೋ ಮಾಹಿತಿ ಇದೆ. ಸಿದ್ದರಾಮಯ್ಯ ಇಂತಹ ಆಡಳಿತ ನೀಡುತ್ತಿರುವುದು ನೋವಿನ ಸಂಗತಿ ಅಂತ ಕಿಡಿಕಾರಿದರು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article