ಕಲಾವಿದನ ಕೈಯಲ್ಲಿ ಅರಳಿದ ಪವರ್ ಸ್ಟಾರ್ ಶಿಲ್ಪಕಲೆ

Public TV
1 Min Read
SMG APPU 2

ಶಿವಮೊಗ್ಗ: ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ, ಯುವರತ್ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಕಾಲಿಕ ನಿಧನ ಅವರ ಅಭಿಮಾನಿಗಳ ಮನಸ್ಸಿಗೆ ಸಾಕಷ್ಟು ನೋವು ತರಿಸಿದೆ. ಹೀಗಾಗಿಯೇ ಅಭಿಮಾನಿಗಳು ಪುನೀತ್ ಅಗಲಿಕೆ ನಂತರ ವಿಭಿನ್ನವಾಗಿ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.

SMG APPU

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮೇಲಿನ ಕುರುವಳ್ಳಿ ನಿವಾಸಿ, ಕಲಾವಿದ ಜಗದೀಶ್ ಅವರು ಪುನೀತ್ ರಾಜ್‍ಕುಮಾರ್ ಅವರ ಮಣ್ಣಿನ ಪುತ್ಥಳಿಯನ್ನು ನಿರ್ಮಿಸಿ ಅಗಲಿದ ಕರುನಾಡ ಕುವರನಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ತಮ್ಮ ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಅವರ ನೆನಪು ತಮ್ಮೊಂದಿಗೆ ಸದಾ ಶಾಶ್ವತವಾಗಿ ಇರಲಿ, ಅವರು ಎಲ್ಲಿಗೂ ಹೋಗಿಲ್ಲ, ನಮ್ಮೊಂದಿಗೆ ಇದ್ದಾರೆ. ಎನ್ನುವ ಭಾವನೆಯಿಂದ ಅಪ್ಪು ಅವರ ಮಣ್ಣಿನ ಮೂರ್ತಿ ಮಾಡುವ ಮೂಲಕ ನಟನಿಗೆ ಅಂತಿಮ ವಿದಾಯ ಹೇಳಿದ್ದಾರೆ. ಇದನ್ನೂ ಓದಿ: ತಾನು ನೆಟ್ಟ ಗಿಡಕ್ಕೆ ಪುನೀತ್ ರಾಜ್ ಕುಮಾರ್ ಅಂತ ಹೆಸರಿಟ್ಟ ವಿಶಾಲ್

SMG APPU 1

ತೀರ್ಥಹಳ್ಳಿ ತಾಲೂಕಿನ ಕುರುವಳ್ಳಿಯ ಶಿಲ್ಪಕಲಾ ಕೇಂದ್ರದ ಶಿಲ್ಪಿ ಜಗದೀಶ್ ಅವರು ಅಪ್ಪಟ ಪುನೀತ್ ರಾಜ್‍ಕುಮಾರ್ ಅಭಿಮಾನಿ. ನಟನ ಅಗಲಿಕೆ ನನಗೆ ಸಹಿಸಲಾಸಾಧ್ಯ ಬೇಸರ ತಂದಿದೆ. ನಾನು ಬಹಳ ನೊಂದಿದ್ದೇನೆ. ಅವರ ಮೂರ್ತಿ ಮಾಡುವ ಮೂಲಕ ಅವರಿಗೆ ಅಂತಿಮ ನಮನ ಸಲ್ಲಿಸುತ್ತೇನೆ. ಅವರನ್ನು ಭೇಟಿ ಮಾಡುವ ಕನಸು ಕಂಡಿದ್ದೆ. ಆದರೆ ಆ ಕನಸು ಕನಸಾಗಿಯೇ ಉಳಿಯಿತು ಎಂದು ಭಾವುಕರಾಗಿ ಅಪ್ಪುಗೆ ನಮನ ಸಲ್ಲಿಸಿದ್ದಾರೆ.

Share This Article