-ಮದ್ವೆ ಆಗಿದ್ರೂ ಅಪ್ರಾಪ್ತೆಗೆ ಮೋಸ
-ಬೆಂಗ್ಳೂರಿಗೆ ಕರೆತಂದು ಅತ್ಯಾಚಾರ
ಶಿವಮೊಗ್ಗ: ವಿವಾಹಿತನೋರ್ವ ಮನೆಗೆ ಬರುತ್ತಿದ್ದ ತಂಗಿಯ ಸ್ನೇಹಿತೆಗೆ ಮೋಸ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಶಿವಮೊಗ್ಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Advertisement
23 ವರ್ಷದ ವಿವಾಹಿತನ ಮನೆಗೆ ಬಾಲಕಿ ಬರುತ್ತಿದ್ದಳು. ತಂಗಿಯ ಗೆಳತಿಯಾಗಿದ್ದರಿಂದ ಪರಿಚಯ ಮಾಡಿಕೊಂಡಿದ್ದಾನೆ. ಮೊದಲು ನಿನ್ನನ್ನೇ ಪ್ರೀತಿ ಮಾಡ್ತೀನಿ ಎಂದು ಬಣ್ಣದ ಮಾತುಗಳನ್ನಾಡಿದ್ದಾನೆ. ನಿನ್ನನ್ನು ಬಿಟ್ಟು ಬೇರೆಯವರ ಜೊತೆ ಮದುವೆ ಆಗಲ್ಲ ಎಂದು ಸುಳ್ಳು ಭರವಸೆಗಳನ್ನು ನೀಡುತ್ತಾ ಬಂದಿದ್ದಾನೆ. ಈ ನಡುವೆ ಕುಟುಂಬಸ್ಥರು ತೋರಿಸಿದ ಯುವತಿಯನ್ನ ಮದುವೆ ಆಗಿದ್ದಾನೆ. ಮದುವೆ ಬಳಿಕ ಅಪ್ರಾಪ್ತೆ ಬಳಿ ಎರಡ್ಮೂರು ತಿಂಗಳು ಸುಳಿದಿಲ್ಲ. ಸದ್ಯ ಪ್ರಿಯತಮನ ಗರ್ಭಿಣಿಯಾಗಿದ್ದಾಳೆ.
Advertisement
Advertisement
ಮದುವೆಯಾದ ಎರಡ್ಮೂರು ತಿಂಗಳು ನಂತರ ಮತ್ತೆ ಅಪ್ರಾಪ್ತೆ ಹಿಂದೆ ಬಿದ್ದಿದ್ದಾನೆ. ಪತ್ನಿ ನನಗೆ ಇಷ್ಟವಿಲ್ಲ. ಹಾಗಾಗಿ ವಿಚ್ಛೇದನ ನೀಡಿದ್ದು, ನಿನ್ನೊಂದಿಗೆ ಜೀವನ ನಡೆಸುತ್ತೇನೆ ಎಂದು ಮೋಹದ ಮಾತುಗಳನ್ನಾಡಿದ್ದಾನೆ. ವಿವಾಹಿತ ಮಾತಿನ ಮೋಡಿಗೆ ಮರಳಾದ ಅಪ್ರಾಪ್ತೆ ಆತ ಬೀಸಿದ ಪ್ರೀತಿಯ ಬಲೆಗೆ ಸಿಲುಕಿದ್ದಾಳೆ.
Advertisement
ಮಾರ್ಚ್ 3ರಂದು ಅಪ್ರಾಪ್ತೆಯನ್ನು ಶಿವಮೊಗ್ಗದಿಂದ ಬೆಂಗಳೂರಿಗೆ ಕರೆತಂದಿದ್ದಾನೆ. ಸ್ನೇಹಿತನ ಕೊಠಡಿಯಲ್ಲಿ ಏಳು ದಿನ ಉಳಿದುಕೊಂಡು ಅತ್ಯಾಚಾರ ಎಸಗಿದ್ದಾನೆ. ತದನಂತರ ಮಾರ್ಚ್ 10ಕ್ಕೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ರೈಲಿನ ಮೂಲಕ ಕರೆತಂದಿದ್ದಾನೆ. ಬೆಳಗಿನ ಜಾವ ಸುಮಾರು 4.30ಕ್ಕೆ ಆಕೆಯ ಮನೆಯ ಮುಂಭಾಗ ಬಿಟ್ಟು ಹೋಗಿದ್ದಾನೆ. ಅಲ್ಲಿಂದ ಹೋದವನು ನಾಪತ್ತೆಯಾಗಿದ್ದಾನೆ. ಇತ್ತ ಯುವತಿ ಸಹ ಮನೆಯವರಿಂದ ತಿರಸ್ಕಾರಕ್ಕೆ ಒಳಗಾಗಿದ್ದಾಳೆ.
ಅಪ್ರಾಪ್ತೆಯನ್ನು ಕುಟುಂಬಸ್ಥರು ಕೈ ಬಿಟ್ಟಿದ್ದು, ಕಣ್ಣಂಚಲಿ ನೀರು ತುಂಬಿಕೊಂಡು ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾಳೆ. ಕೊನೆಗೆ ಶಿವಪ್ಪನಾಯಕ ಕರ್ನಾಟಕ ಸಂರಕ್ಷಣಾ ವೇದಿಕೆ ಅಧ್ಯಕ್ಷ ಸಂಜೀವ್ ಕುಮಾರ್ ಬಳಿ ಅವಲತ್ತುಕೊಂಡಿದ್ದಾಳೆ. ಸಂಜೀವ್ ಕುಮಾರ್ ಅವರ ಸಹಾಯದಿಂದ ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಪತ್ತೆಯಾಗಿರುವ ವಿವಾಹಿತನ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
ನಾಲ್ಕೈದು ದಿನಗಳಿಂದ ಅಪ್ರಾಪ್ತೆಯನ್ನು ಕುಟುಂಬಸ್ಥರು ಮನೆಗೆ ಸೇರಿಸಿಕೊಂಡಿರಲಿಲ್ಲ. ಇಂದು ಪೊಲೀಸ್ ಠಾಣೆಗೆ ಆಗಮಿಸಿದ ಅಪ್ರಾಪ್ತೆ ತಾಯಿ ಮಗಳನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.