ಶಿವಮೊಗ್ಗ: ಮೂಕನಂತೆ ನಟಿಸಿ, ಕಚೇರಿಗಳಿಗೆ ಭೇಟಿ ಸಹಾಯ ಕೇಳುವ ನೆಪದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಮೊಬೈಲ್ ಎಗರಿಸುತ್ತಿದ್ದ ಐನಾತಿ ಕಳ್ಳನನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ವೆಲ್ಲೂರಿನ ನಿವಾಸಿ ಮುರುಗನ್ ಬಂಧಿತ ಆರೋಪಿ. ಇತನು ದುಬಾರಿ ಬೆಲೆಯ ಮೊಬೈಲ್‍ಗಳನ್ನು ಕಳ್ಳತನ ಮಾಡುತ್ತಿದ್ದ. ನಗರದ ಬಿ.ಎಚ್.ರಸ್ತೆಯಲ್ಲಿನ ಕಚೇರಿಯೊಂದರಲ್ಲಿ ಕೈಚಳಕ ತೋರಿಸಲು ಹೋದಾಗ ಮುರುಗನ್ ಸಿಕ್ಕಿಬಿದ್ದಿದ್ದು, ಸ್ಥಳೀಯರು ಧರ್ಮದೇಟು ನೀಡಿ ಕೋಟೆ ಠಾಣೆ ಪೊಲೀಸರು ವಶಕ್ಕೆ ನೀಡಿದ್ದಾರೆ.
ಏನಿದು ಪ್ರಕರಣ?:
ನಾನು ಮೂಕ, ನನಗೆ ನಿಮ್ಮ ಕೈಲಾದ ಸಹಾಯ ಮಾಡಿ ಎಂದು ಮುದ್ರಿಸಿದ್ದ ಪೇಪರ್ ಗಳನ್ನು ಹಿಡಿದುಕೊಂಡು ಬ್ಯಾಂಕ್, ಸರ್ಕಾರಿ ಹಾಗೂ ಕಚೇರಿಗಳಿಗೆ ಹೋಗುತ್ತಿದ್ದ. ಮೊಬೈಲ್ ಪಕ್ಕದಲ್ಲಿ ಇಟ್ಟುಕೊಂಡು ಅಥವಾ ಟೆಬಲ್ ಮೇಲೆ ಇಡುತ್ತಿದ್ದ ಸಿಬ್ಬಂದಿಯೇ ಮುರುಗನ್ ಟಾರ್ಗೆಟ್ ಆಗಿರುತ್ತಿದ್ದರು. ಸಹಾಯಧನ ಕೇಳು ನೆಪದಲ್ಲಿ ಪತ್ರಿಕೆ ನೀಡಿ, ಅವರ ಗಮನವನ್ನು ಬೇರೆ ಕಡೆಗೆ ಸೆಳೆದು ಮೊಬೈಲ್‍ಗಳನ್ನು ಮುರುಗನ್ ಕಳ್ಳತನ ಮಾಡುತ್ತಿದ್ದ.
ನಗರದಲ್ಲಿ ಶನಿವಾರ ಒಂದೇ ದಿನಕ್ಕೆ ಮುರುಗನ್ ವಿವಿಧ ಕಚೇರಿಯಲ್ಲಿ ಐದು ಮೊಬೈಲ್ ಕಳ್ಳತನ ಮಾಡಿದ್ದಾನೆ. ಕೊನೆಯದಾಗಿ ಐದನೇ ಮೊಬೈಲ್ ಅನ್ನು ಬ್ಯಾಂಕ್ ಅಧಿಕಾರಿಯೊಬ್ಬರಿಂದ ಎಗರಿಸಿ ಪರಾರಿಯಾಗಿದ್ದಾನೆ. ತಕ್ಷಣವೇ ಅಧಿಕಾರಿ ಮೊಬೈಲ್ ಕಾಣೆಯಾಗಿರುವುದು ಗಮನಕ್ಕೆ ಬಂದು ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಮುರುಗನ್ ಕೈಚಳಕ ಬೆಳಕಿಗೆ ಬಂದಿದೆ.
ಬ್ಯಾಂಕ್‍ನಿಂದ ಮುಂದೆ ಸಾಗಿದ್ದ ಮುರುಗನ್‍ನನ್ನು ಹಿಡಿದು ಕೋಟೆ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಚಾರಣೆಯ ವೇಳೆಯೂ ಮುರುಗನ್ ಮೂಕನಂತೆ ನಟಿಸಿದ್ದಾನೆ. ಆತನ ವರ್ತನೆಯಿಂದ ತೀವ್ರ ವಿಚಾರಣೆಗೆ ಒಳಪಡಿಸಿದಾಗ. ಬಾಯಿ ಬಿಟ್ಟು ಮಾತನಾಡಿ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆರೋಪಿಯಿಂದ ಮೊಬೈಲ್‍ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv