ಶಿವಮೊಗ್ಗ: ಕೊರೊನಾ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಎನ್‍ಸಿಸಿ ಕೆಡೆಟ್‍ಗಳಿಗೆ, ಅಧಿಕಾರಿಗಳಿಗೆ, ಎಐಒ ಮತ್ತು ಪಿಐ ಸಿಬ್ಬಂದಿಗೆ ಆನ್‍ಲೈನ್ ತರಬೇತಿಯನ್ನು ನೀಡಿ ಸೇವಾ ಕಾರ್ಯಗಳಿಗೆ ಸಜ್ಜುಗೊಳಿಸುವ ಪ್ರಕ್ರಿಯೆ ನಡೆಸಲಾಗಿದೆ.
ಈ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರ ಹೊರ ತಂದಿರುವ ದಿಶಾ ಆ್ಯಪ್ ಕುರಿತು 20 ಎನ್‍ಸಿಸಿ ಬೆಟಾಲಿಯನ್ ಶಿವಮೊಗ್ಗ ಕೆಡೆಟ್‍ಗಳಿಗೆ ಕಮಾಂಡಿಂಗ್ ಆಫೀಸರ್ ಕರ್ನಲ್ ನರೀಂದರ್ ಸಿಂಗ್ ಮಹಾರಾ ಅವರ ನೇತೃತ್ವದಲ್ಲಿ ಆನ್‍ಲೈನ್ ತರಬೇತಿಯನ್ನು ನೀಡಲಾಯಿತು.
Advertisement
Advertisement
ಜಿಲ್ಲೆಯಲ್ಲಿ ಈಗಾಗಲೇ ತರಬೇತಿಯನ್ನು ಪಡೆದಿರುವ ಕೆಡೆಟ್‍ಗಳು ಇತರ ಕೆಡೆಟ್‍ಗಳಿಗೆ ತರಬೇತಿಯನ್ನು ನೀಡಬೇಕು. ಈಗಾಗಲೇ ಬಹುತೇಕ ಎಲ್ಲಾ ಎನ್‍ಸಿಸಿ ಕೆಡೆಟ್‍ಗಳಿಗೆ ತರಬೇತಿಯನ್ನು ನೀಡಲಾಗಿದ್ದು, ಎಲ್ಲರೂ ಸನ್ನದ್ಧ ಸ್ಥಿತಿಯಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಕೊರೊನಾ ಎದುರಿಸಲು ಬೆಟಾಲಿಯನ್ ಸನ್ನದ್ಧವಾಗಿದ್ದು, ಅಗತ್ಯಕ್ಕೆ ಅನುಗುಣವಾಗಿ ಜಿಲ್ಲಾಡಳಿತ ಸೂಚಿಸುವ ಕಾರ್ಯವನ್ನು ಮಾಡಲಾಗುವುದು ಎಂದು ಕರ್ನಲ್ ನರೀಂದರ್ ಸಿಂಗ್ ತಿಳಿಸಿದ್ದಾರೆ.
Advertisement
Advertisement
ತರಬೇತಿ ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್ ಕರ್ನಲ್ ಶಶಿಧರ ಎಸ್, ಆಡಳಿತಾಧಿಕಾರಿ ಲೆಫ್ಟಿನೆಂಟ್ ಶೇಖರ್ ನಾಯ್ಕ್ ಮತ್ತಿತರ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.