Monday, 16th July 2018

Recent News

ಅಕ್ರಮವಾಗಿ ಇಸ್ಪೀಟ್ ಆಡ್ತಿದ್ದ ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಸೇರಿ 15 ಮಂದಿ ಅರೆಸ್ಟ್

ಶಿವಮೊಗ್ಗ: ಇಲ್ಲಿನ ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಮೋಹನ್ ರೆಡ್ಡಿ ಕ್ಲಬ್‍ನಲ್ಲಿ ಅಕ್ರಮವಾಗಿ ಇಸ್ಪೀಟ್ ಆಡಿ ಸಿಕ್ಕಿಬಿದ್ದಿದ್ದಾರೆ.

ಸಾಗರ ರಸ್ತೆಯಲ್ಲಿರುವ ಪ್ರತಿಷ್ಠಿತ ಮಂಡಿ ಮರ್ಚೆಂಟ್ಸ್ ಕ್ಲಬ್ ನಲ್ಲಿ ಇಸ್ಪೀಟ್ ಜೂಜು ನಡೆಯುತ್ತಿತ್ತು. ಈ ಹಿನ್ನೆಲೆ ಯಲ್ಲಿ ಡಿಸಿಬಿ ಪೆÇಲೀಸರು ದಾಳಿ ಮಾಡಿದಾಗ ಮೋಹನ್ ರೆಡ್ಡಿ ಸೇರಿ ಹದಿನೈದು ಮಂದಿ ಬಂಧಿತರಾಗಿದ್ದರು. ಬಂಧಿತರಿಂದ 2.17 ಲಕ್ಷ ಹಣ, 16 ಮೊಬೈಲ್ ವಶಕ್ಕೆ ಪಡೆದು ಠಾಣೆಗೆ ಕರೆತರಲಾಗಿತ್ತು.

ಪ್ರತೀಕ್, ಭಾಸ್ಕರ್, ಮಧು, ಕಾಮೇಶ್, ಮಂಜುನಾಥ, ಅರುಣ್, ಲಕ್ಷ್ಮೀಕಾಂತ ಶೆಟ್ಟಿ, ಪ್ರದೀಪ, ಪ್ರಶಾಂತ ಮತ್ತಿತರರು ಬಂಧಿತರಲ್ಲಿ ಪ್ರಮುಖರು. ಮಧ್ಯರಾತ್ರಿವರೆಗೂ ಡಿಸಿಬಿ ಠಾಣೆಯಲ್ಲಿ ಬಂಧಿತರ ಹೇಳಿಕೆ ಪಡೆದು ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಹೊರಗೆ ಮಾಧ್ಯಮದವರು ಕಾಯುತ್ತಿದ್ದರು. ಇದನ್ನು ಗಮನಿಸಿದ ಮೋಹನ್ ರೆಡ್ಡಿ ಠಾಣೆಯ ಹಿಂಬಾಗಿಲ ಮೂಲಕ ಮಾಧ್ಯಮಗಳ ಕಣ್ತಪ್ಪಿಸಿ ಪರಾರಿಯಾಗಿದ್ದಾರೆ.

ಎಸ್‍ಪಿ ಅಭಿನವ್ ಖರೆ ಮಾರ್ಗದರ್ಶನದಲ್ಲಿ ಡಿವೈಎಸ್‍ಪಿ ಮಂಜುನಾಥ ಶೆಟ್ಟಿ ಹಾಗೂ ಇನ್ಸ್ ಪೆಕ್ಟರ್ ಕೆ. ಕುಮಾರ್ ಮತ್ತು 25ಕ್ಕೂ ಹೆಚ್ಚು ಸಿಬ್ಬಂದಿಯಿಂದ ಈ ದಾಳಿ ನಡೆದಿದೆ.

Leave a Reply

Your email address will not be published. Required fields are marked *