– ವಿವಿಧ ಬ್ರ್ಯಾಂಡ್‍ನ 25 ಬಾಕ್ಸ್ ಮದ್ಯ ವಶಕ್ಕೆ
ಶಿವಮೊಗ್ಗ: ತಾನು ಕೆಲಸ ಮಾಡುತ್ತಿದ್ದ ಅಂಗಡಿಯಲ್ಲಿ ಮದ್ಯ ಕದ್ದು ಪರಾರಿಯಾಗುತ್ತಿದ್ದವನನ್ನು ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿನ ವಿನಯ್ ವೈನ್ಸ್‍ನ ಬೀಗ ಮುರಿದು ಅದೇ ಮದ್ಯದಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ದೇವರಾಜ್ ಈ ಕೃತ್ಯ ಎಸಗಿದ್ದಾನೆ. ಅಬಕಾರಿ ಇಲಾಖೆಯಿಂದ ಸೀಜ್ ಮಾಡಲಾಗಿದ್ದ ಮದ್ಯದಂಗಡಿಯ ಬೀಗ ಮುರಿದು ಮದ್ಯ ಸಾಗಿಸಲು ಯತ್ನಿಸಿದ್ದ ಎಂದು ಹೇಳಲಾಗಿದೆ.
Advertisement
Advertisement
ವಿವಿಧ ಬ್ರ್ಯಾಂಡ್‍ನ 25 ಬಾಕ್ಸ್ ಮದ್ಯವನ್ನು ಈ ವೇಳೆ ವಶಪಡಿಸಿಕೊಳ್ಳಲಾಗಿದ್ದು, ಮದ್ಯ ಸಾಗಿಸುತ್ತಿದ್ದ ಆಲ್ಟೋ ಕಾರನ್ನು ಕೂಡ ವಶಕ್ಕೆ ಪಡೆದುಕೊಳ್ಳಲಾಗಿದೆ. ಅಂಗಡಿಯಲ್ಲಿ ಇನ್ನಿಬ್ಬರು ಇದ್ದು ಅವರಿಬ್ಬರು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಖಚಿತ ಮಾಹಿತಿ ಮೇರೆಗೆ ಶಿವಮೊಗ್ಗ ಅಬಕಾರಿ ಉಪ ಆಯುಕ್ತ ಕ್ಯಾ.ಅಜಿತ್ ನೇತೃತ್ವದಲ್ಲಿ ದಾಳಿ ನಡೆಸಿ ಲಕ್ಷಾಂತರ ರೂ. ಮೌಲ್ಯದ ಮದ್ಯ, ಆಲ್ಟೋ ಕಾರು ಸೇರಿದಂತೆ ಸುಮಾರು 2 ಲಕ್ಷದ 25 ಸಾವಿರ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.