Connect with us

Districts

ಕಾಂಪೌಂಡ್ ಹಾರಿ ಮನೆಗೆ ನುಗ್ಗಿ ನಾಯಿ ಹೊತ್ತೊಯ್ದ ಚಿರತೆ

Published

on

ಶಿವಮೊಗ್ಗ: ಮನೆಯ ಒಳಗಿದ್ದ ಡ್ಯಾಶ್‍ಹಾಂಡ್ ಜಾತಿಯ ನಾಯಿಯನ್ನು ಚಿರತೆಯೊಂದು ಎತ್ತರದ ಕಾಂಪೌಂಡ್ ಹಾರಿ ಹೊತ್ತೊಯ್ದ ಘಟನೆ ತೀರ್ಥಹಳ್ಳಿ ತಾಲೂಕಿನ ಹೊಳೆಕೊಪ್ಪ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಹೊಳೆಕೊಪ್ಪ ಗ್ರಾಮದ ರಘುನಾಥ್ ಎಂಬುವವರ ಮನೆಯಲ್ಲಿ ಶುಕ್ರವಾರ ರಾತ್ರಿ 1.27 ರ ಸಮಯದಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿ ಎರಡು ನಾಯಿಗಳಿದ್ದು ಒಂದು ತಪ್ಪಿಸಿಕೊಂಡಿದೆ. ಅದರಲ್ಲಿ ಒಂದು ನಾಯಿಯನ್ನು ಚಿರತೆ ಹೊತ್ತೊಯ್ಯುತ್ತಿರುವ ದೃಶ್ಯ ಮನೆಯ ಹೊರ ಆವರಣದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮನೆಯ ಮುಂಭಾಗದ 5 ಅಡಿ ಎತ್ತರದ ಕಾಂಪೌಂಡಿನಲ್ಲಿ ಕುಳಿತು ಎರಡು ನಿಮಿಷದಲ್ಲಿ ಹೊಂಚು ಹಾಕಿದ ಚಿರತೆ ಮನೆಯ ಒಳಗೆ ನುಗ್ಗಿ ನಾಯಿಯನ್ನು ಎತ್ತಿಕೊಂಡು ಹೋಗಿದೆ. ಈ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚುತ್ತಿದ್ದು ಜನರು ಕೂಡಾ ಭಯಭೀತರಾಗಿದ್ದಾರೆ. ರಾತ್ರಿ ಹೊತ್ತಿನಲ್ಲಿ ತಿರುಗಾಡುವುದಕ್ಕೆ ಆತಂಕವಾಗುತ್ತಿದೆ. ಈ ಕುರಿತು ಅರಣ್ಯ ಇಲಾಖೆಗೆ ದೂರನ್ನೂ ನೀಡಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಅರಣ್ಯ ಸಿಬ್ಬಂದಿ ಶೀಘ್ರವಾಗಿ ಚಿರತೆಯನ್ನು ಸೆರೆ ಹಿಡಿಯುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in