– ಡಿಕೆಶಿ ಕ್ರೀಡೆಯಲ್ಲಿ ಪದಕ ಗೆದ್ದು ಬಂದಿದ್ದರಾ?
ಶಿವಮೊಗ್ಗ: ಯಾವ ಮುಸಲ್ಮಾನರು ಟಿಪ್ಪು ಜಯಂತಿ ಮಾಡಿ ಎಂದು ಹೇಳಿರಲಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಇಂದು ನಗರದಲ್ಲಿ ಮಾತನಾಡಿದ ಅವರು, ಟಿಪ್ಪು ಜಯಂತಿಯನ್ನು ಕಾಂಗ್ರೆಸ್ ನವರು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನವರು ಟಿಪ್ಪು ಜಯಂತಿ ರಾಜಕೀಯಕ್ಕೆ ಬಳಸಿಕೊಳ್ಳುವುದನ್ನು ಮೊದಲು ಬಿಡಲಿ. ಯಾರಿಗೆ ಬೇಕೋ ಅವರು ಅವರವರ ಮನೆಯಲ್ಲಿ ಆಚರಣೆ ಮಾಡಿಕೊಳ್ಳುತ್ತಾರೆ. ಟಿಪ್ಪು ಹೆಸರಿನಲ್ಲಿ ಮುಸಲ್ಮಾನರ ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ ಎಂದು ಗುಡುಗಿದು.
ಇದೇ ವೇಳೆ ಅನರ್ಹ ಶಾಸಕರ ಬಗ್ಗೆ ಮಾತನಾಡಿದ ಅವರು, ಅನರ್ಹ ಶಾಸಕರ ಬಗ್ಗೆ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುವುದು ಅವಶ್ಯಕತೆ ಇಲ್ಲ. ರೇಣುಕಾಚಾರ್ಯ ಒಂದು ಹೇಳುವುದು, ಸವದಿ ಮತ್ತೊಂದು ಹೇಳುವುದು ಸರಿಯಲ್ಲ. ಇದನ್ನು ನಮ್ಮ ರಾಜ್ಯಾಧ್ಯಕ್ಷರು ನೋಡಿಕೊಳ್ಳುತ್ತಾರೆ. ಅನರ್ಹ ಶಾಸಕರ ಬಗ್ಗೆ ಚರ್ಚೆ ಅವಶ್ಯಕತೆ ಇಲ್ಲ. ಅನರ್ಹ ಶಾಸಕರು ರಾಜೀನಾಮೆ ಕೊಟ್ಟು ಬರಲಿಲ್ಲ ಅಂದ್ರೆ ನಮ್ಮ ಸರ್ಕಾರನೇ ಇರುತ್ತಿರಲಿಲ್ಲ. ಅವರು ಏನು ಅಪೇಕ್ಷೆ ಪಡುತ್ತಾರೋ ಅದನ್ನು ಬೆಂಬಲ ಮಾಡೋದು ನಮ್ಮ ಕರ್ತವ್ಯ ಎಂದರು.
ಕಾಂಗ್ರೆಸ್‍ನಲ್ಲಿ ಡಿಕೆಶಿ ಒಂದು ಕಡೆ, ಸಿದ್ದರಾಮಯ್ಯ ಒಂದು ಕಡೆ ಇದ್ದಾರೆ. ಡಿಕೆಶಿ ಬಿಡುಗಡೆ ನಂತರ ನಡೆಯುತ್ತಿರುವ ಮೆರವಣಿಗೆ ನೋಡಿ ರಾಜ್ಯದ ಜನರಿಗೆ ಅಸಹ್ಯ ಆಗುತ್ತಿದೆ. ಡಿಕೆಶಿ ಜೈಲಿನಲ್ಲಿದ್ದ ಸಂದರ್ಭದಲ್ಲಿ ಅವರ ತಾಯಿ, ಪತ್ನಿ, ಮಗಳು ನೋಡಿ ನನಗು ನೋವು ಆಯ್ತು. ಡಿಕೆಶಿ ಏನಾದರು ಕ್ರೀಡೆಯಲ್ಲಿ ಪದಕ ಗೆದ್ದು ಬಂದಿದ್ದರಾ. ಪಾಕಿಸ್ತಾನದ ಯುದ್ಧ ಗೆದ್ದು ಬಂದರ ಮೆರವಣಿಗೆ ಮಾಡೋದಕ್ಕೆ. ಜೈಲಿನಲ್ಲಿ ಇದ್ದು ಹೊರಗೆ ಬಂದ ವ್ಯಕ್ತಿಗೆ ಮೆರವಣಿಗೆ, ವಿಜಯೋತ್ಸವ ಮಾಡುತ್ತಿರುವುದು ನಾಚಿಕೆಗೇಡು ಎಂದು ವಾಗ್ದಾಳಿ ಮಾಡಿದ್ದಾರೆ.