ನವದೆಹಲಿ : ಶಿವಮೊಗ್ಗದಲ್ಲಿ (Shivamogga) ಭಯೋತ್ಪಾದನಾ ಚಟುವಟಿಕೆಗೆ ಸಂಚು, 2020 ರ ಮಂಗಳೂರು ಗೀಚುಬರಹ ಪ್ರಕರಣಗಳಿಗೆ ಸಂಬಂಧಿಸಿದ ಪ್ರಮುಖ ಆರೋಪಿ, ಐಸಿಸ್ ಭಯೋತ್ಪಾದಕ ಅರಾಫತ್ ಅಲಿಯನ್ನು (Arafath Ali) ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ಬಂಧಿಸಿದ್ದಾರೆ. ಕಿನ್ಯಾದ ನೈರೋಬಿಯಿಂದ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Indira Gandhi Airport) ಆಗಮಿಸಿದ್ದ ವೇಳೆ ಅಧಿಕಾರಿಗಳು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಶಿವಮೊಗ್ಗ (Shivamogga) ಜಿಲ್ಲೆಯ ನಿವಾಸಿ ಅರಾಫತ್ ಅಲಿ 2020 ರಿಂದ ತಲೆಮರೆಸಿಕೊಂಡಿದ್ದ, ವಿದೇಶಗಳಲ್ಲಿ ಕೂತು ಭಯೋತ್ಪಾದಕ ಚಟುವಟಿಕೆಗಳಿಗೆ ಪ್ರೇರಣೆ ನೀಡುವುದು ಮತ್ತು ಹಣಕಾಸಿನ ನೆರವು ನೀಡುವ ಕೆಲಸ ಮಾಡುತ್ತಿದ್ದ, ಈತನ ಮೇಲೆ ನಿಗಾ ವಹಿಸಿದ್ದ ಎನ್‌ಐಎ ಅಧಿಕಾರಿಗಳು ದೆಹಲಿಗೆ ಆಗಮಿಸುತ್ತಿರುವ ಖಚಿತ ಮಾಹಿತಿ ಮೇಲೆ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಪಾಕ್ ಜೊತೆ ಭಾರತೀಯ ಸೇನೆಯ ಮಾಹಿತಿ ಹಂಚಿಕೊಳ್ಳುತ್ತಿದ್ದ ಯೋಧ ಅರೆಸ್ಟ್
Advertisement
Advertisement
ಕೆಲಸಕ್ಕೆಂದು ವಿದೇಶಕ್ಕೆ ತೆರಳಿದ್ದ ಅರಾಫತ್ ಅಲಿ ಐಸಿಸ್ ಸಂಘಟನೆ ಸೇರಿಕೊಂಡಿದ್ದ, ಶಿವಮೊಗ್ಗದಲ್ಲಿ ನಡೆದ ಭಯೋತ್ಪಾದನೆ ಸಂಚು ಪ್ರಕರಣದ ಭಾಗವಾಗಿದ್ದ, ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಪ್ರೆಶರ್ ಕುಕ್ಕರ್ ಐಇಡಿ ಅಳವಡಿಸಲು ಹೋಗುತ್ತಿದ್ದಾಗ ಆಟೋ ರಿಕ್ಷಾದಲ್ಲಿ ಆಕಸ್ಮಿಕವಾಗಿ ಐಇಡಿ ಸ್ಫೋಟಗೊಂಡಿತ್ತು ಇದರ ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್ ಜೊತೆಗೂ ಅರಾಫತ್ ಅಲಿ ಸಂಪರ್ಕದಲ್ಲಿದ್ದ, ಈ ಪಿತೂರಿಯ ಯೋಜನೆಯನ್ನ ಕಾರ್ಯಗತಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ.
Advertisement
Advertisement
ಇಷ್ಟೇ ಅಲ್ಲದೇ ಎನ್ಐಎ ತನಿಖೆಯ ಪ್ರಕಾರ 2020 ರ ಎರಡು ಮಂಗಳೂರು ಗೀಚುಬರಹ ಪ್ರಕರಣಗಳಿಗೆ ಅರಾಫತ್ ಅಲಿ ಜವಾಬ್ದಾರನಾಗಿದ್ದಾನೆ, ಈತನ ನಿರ್ದೇಶನದ ಮೇಲೇಯೇ ಮೊಹಮ್ಮದ್ ಶಾರಿಕ್ ಮತ್ತು ಮಾಜ್ ಮುನೀರ್ ಅಹ್ಮದ್ DON’T FORCE US TO INVITE LASHKAR- E-TAIBA, TALIBAN TO DEAL WITH SANGHIS AND MANVEDIS LASHKAR ZINDABAD ಎಂದು ಬರೆದಿದ್ದರು ಎಂದು ಎನ್‌ಐಎ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
Web Stories