ಶಿವಮೊಗ್ಗ: ಜಿಲ್ಲೆಯಿಂದ ವೈದ್ಯರೊಬ್ಬರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯುವ ಮೂಲಕ ಸಾರಿಗೆ ಇಲಾಖೆ ಅಧಿಕಾರಿಗಳ ಮೈ ಚಳಿ ಬಿಟ್ಟು ಕೆಲಸಮಾಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕೇಂದ್ರ ಸರ್ಕಾರದ ಜೆನರ್ಮ್ ಯೋಜನೆಯಡಿ ಶಿವಮೊಗ್ಗಕ್ಕೆ ನಗರ ಸಂಚಾರಕ್ಕೆ ನೂರು ಬಸ್ ಗಳು ಮಂಜೂರು ಆಗಿದ್ದವು. ಆದರೆ ಸರ್ಕಾರಿ ಜಾಗದಲ್ಲಿ ಡಿಪೋ ಸ್ಥಾಪನೆ ಮಾಡಬೇಕಿದ್ದ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದರು.
Advertisement
Advertisement
ಈ ಜಾಗ ಬೇರೆಯವರ ಪಾಲಾಗುವ ಸಾಧ್ಯತೆ ಕೂಡಾ ಇತ್ತು. ಇದನ್ನು ಮನಗಂಡ ಶಿವಮೊಗ್ಗದ ವೈದ್ಯ ಡಾ.ರವೀಂದ್ರ ನೇರವಾಗಿ ಮೋದಿ ಅವರ ಪೋರ್ಟಲ್ ನಲ್ಲಿ ದೂರು ದಾಖಲಿಸಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿದ ಪ್ರಧಾನಿ ಕಚೇರಿಯ ಅಧಿಕಾರಿಗಳು ರಾಜ್ಯ ಸಾರಿಗೆ ಇಲಾಖೆಗೆ ಕಟ್ಟು ನಿಟ್ಟಿನ ಪತ್ರ ಬರೆದಿದ್ದರು. ಸಾರಿಗೆ ಇಲಾಖೆಗೆ ಈ ಪತ್ರ ಬಂದ ಬಳಿಕ ಡಿಪೋ ನಿರ್ಮಾಣ ಕಾರ್ಯ ಚುರುಕಾಗಿ ನಡೆಯುತ್ತಿರುವುದಾಗಿ ವೈದ್ಯರು ಹೇಳಿದ್ದಾರೆ.
Advertisement
ಇಲ್ಲಿ ಹೆಚ್ಚಾಗಿ ಖಾಸಗಿ ಬಸ್ ಗಳೇ ಓಡಾಡುತ್ತಿದ್ದವು. ನನ್ನ ಪತ್ರಕ್ಕೆ ಪ್ರಧಾನಿ ಕಚೇರಿ ಪ್ರತಿಕ್ರಿಯಿಸಿದ್ದು, ಉಚಿತವಾಗಿ ಭೂಮಿ ನೀಡುವುದಾಗಿ ತಿಳಿಸಿದ್ದರು. ನಮ್ಮ ದೇಶದಲ್ಲಿ ಈ ತರ ಸಿಸ್ಟಮ್ ಚೆನ್ನಾಗಿ ಕಾರ್ಯ ನಿರ್ವಹಿಸುತ್ತೆ ಅಂತ ನನಗೆ ಅಚ್ಚರಿಯೇ ಆಗಿದೆ ಅಂತ ವೈದ್ಯ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.