ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ (Thirthahalli) ತಾಲೂಕಿನ ಭಾವೈಕ್ಯತೆ ಕೇಂದ್ರವಾಗಿರುವ ಹಣಗೆರೆಕಟ್ಟೆಯ ಹಜರತ್ ಸೈಯದ್ ಸಾದತ್ ದರ್ಗಾ ಮತ್ತು ಭೂತರಾಯ ಚೌಡೇಶ್ವರಿ ದೇವಸ್ಥಾನದ ಹುಂಡಿ ಎಣಿಕೆಯ ಹಣಕ್ಕೂ ಅಧಿಕಾರಿಗಳು ಖನ್ನಾ ಹಾಕಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಗುರುವಾರ (ನ.7) ರಂದು ನಡೆದ ಹುಂಡಿ ಎಣಿಕೆಯಲ್ಲಿ ದೋಖಾ ನಡೆದಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಶುಕ್ರವಾರ ಮತ್ತೊಮ್ಮೆ ಮರು ಎಣಿಕೆ ಮಾಡಲಾಯಿತು. ಮರು ಎಣಿಕೆ ವೇಳೆ 77,000 ರೂ. ಹಣ ವ್ಯತ್ಯಾಸ ಕಂಡುಬಂದಿದೆ.ಇದನ್ನೂ ಓದಿ: ಅಬಕಾರಿ ಪೊಲೀಸರ ಭರ್ಜರಿ ಬೇಟೆ – 40,000ಕ್ಕೂ ಅಧಿಕ ಕಲಬೆರಕೆ ಮದ್ಯ ಜಪ್ತಿ
Advertisement
Advertisement
ಹುಂಡಿಯ ಹಣ ಎಣಿಕೆಯಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಹಣಗೆರೆಕಟ್ಟೆ ದೇವಸ್ಥಾನದ ಆಡಳಿತ ಮಂಡಳಿ ತಹಶೀಲ್ದಾರ್‌ಗೆ ದೂರು ಸಲ್ಲಿಸಿದ್ದರು. ದೂರು ಆಧರಿಸಿ ಗುರುವಾರವೇ ಮೇಲ್ನೋಟಕ್ಕೆ ಹಣದ ಕಂತುಗಳನ್ನು ಎಣಿಸಿದಾಗ ಹೆಚ್ಚುವರಿ ನೋಟುಗಳು ಕಂಡು ಬಂದಿದ್ದವು. ನಂತರ ಆ ಹಣವನ್ನು ತಾಲ್ಲೂಕು ಕಚೇರಿಯ ಖಜಾನೆಯಲ್ಲಿ ಇಡಲಾಗಿತ್ತು.
Advertisement
ಶುಕ್ರವಾರ ಬೆಳಗ್ಗೆ ತಹಶೀಲ್ದಾರ್, ಡಿವೈಎಸ್‌ಪಿ ಸಮ್ಮುಖದಲ್ಲಿ ಬಿಗಿ ಬಂದೋಬಸ್ತ್ ಮೂಲಕ ಹಣವನ್ನು ಹಣಗೆರೆಕಟ್ಟೆಯ ದೇವಸ್ಥಾನಕ್ಕೆ ಸಾಗಿಸಿ ಮರುಎಣಿಕೆ ನಡೆಸಲಾಯಿತು. ಒಟ್ಟು 66 ಲಕ್ಷದ 4 ಸಾವಿರದ 950 ರೂ. ಹಣ ಕಾಣಿಕೆ ರೂಪದಲ್ಲಿ ದೇವಸ್ಥಾನಕ್ಕೆ ಸಂದಾಯವಾಗಿದೆ. ಹಣದ ಕಂತೆಯಲ್ಲಿ ಸರಿಯಾಗಿ ಎಣಿಕೆ ಮಾಡದ ಹಿನ್ನೆಲೆಯಲ್ಲಿ ಮೊದಲು ಎಣಿಸಿದ ಹಣಕ್ಕಿಂತ 77,930 ರೂಪಾಯಿ ಹಣ ಜಾಸ್ತಿ ಬಂದಿದೆ. ಈ ಸಂಬಂಧ ತಹಶೀಲ್ದಾರ್ ಅವರ ಮುಂದಿನ ನಡೆ ಏನಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
Advertisement
ಇಂತಹ ಕೃತ್ಯ ನಡೆಸಿದ ಹಾಗೂ ಅದಕ್ಕೆ ಸಹಕಾರ ನೀಡಿದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಆಡಳಿತ ಮಂಡಳಿಯಿಂದ ಧಾರ್ಮಿಕ ದತ್ತಿ ಇಲಾಖೆ ಆಯುಕ್ತಕರಿಗೆ ದೂರು ನೀಡಲು ತೀರ್ಮಾನಿಸಿದ್ದು, ಒಟ್ಟಿನಲ್ಲಿ ಹುಂಡಿ ಹಣದ ಮರು ಎಣಿಕೆ ಪ್ರಕರಣದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನಲೆಯಲ್ಲಿ ಇನ್ನು ಯಾವ ತಿರುವು ಪಡೆಯಲಿದೆ ಎಂದು ಕಾದು ನೋಡಬೇಕಿದೆ.ಇದನ್ನೂ ಓದಿ: ಬಲ್ಲಾಳದೇವ ರಾಣಾ ಜೊತೆ ಕಾಂತಾರದ ಶಿವ