ಬೆಂಗಳೂರು: ನಿನ್ನೆ ಘೋಷಣೆ ಮಾಡಿದ್ದ 2 ಲಕ್ಷ ರೂ.ಗಳೊಂದಿಗೆ ಮತ್ತೆ 4 ಲಕ್ಷ ರೂ. ಸೇರಿಸಿ ಒಟ್ಟು 6 ಲಕ್ಷ ರೂ. ವನ್ನು ಮೃತ ಹರ್ಷ ಕುಟುಂಬಕ್ಕೆ ಕೊಟ್ಟು ಬರುತ್ತೇನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಅಪ್ರತಿಮ ದೇಶಭಕ್ತನ ಕೊಲೆಯಾಗಿದೆ. ಇನ್ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು. ರಾಜ್ಯದಲ್ಲಿ ಮತ್ತು ದೇಶದಲ್ಲಿ ನಮ್ಮದೇ ಸರ್ಕಾರವಿದೆ. ಪ್ರಕರಣದ ತನಿಖೆಯನ್ನು ಎನ್‍ಐಎಗೆ ವಹಿಸಬೇಕು. ಹರ್ಷನ ಕುಟುಂಬಕ್ಕೆ ನಾನು ವೈಯಕ್ತಕವಾಗಿ 2 ಲಕ್ಷ ರೂ. ಕೊಟ್ಟಿದ್ದೇನೆ ಎಂದರು. ಇದನ್ನೂ ಓದಿ: ಹರ್ಷ ಕುಟುಂಬಕ್ಕೆ 1 ಲಕ್ಷ ರೂ. ನೆರವು ಘೋಷಿಸಿದ ಶಾಸಕ ಅರವಿಂದ ಲಿಂಬಾವಳಿ
Advertisement
Advertisement
ಆರೋಪಿಗಳನ್ನು ಬಂಧಿಸಿದರೆ ಸಾಲದು ಅವರನ್ನು ಎನ್‍ಕೌಂಟರ್ ಮಾಡಬೇಕು. ಅವರ ಕುಟುಂಬದ ಕಣ್ಣೀರನ್ನು ನೋಡಲು ಆಗುತ್ತಿಲ್ಲ. ಅವನಿಗೆ ಇಬ್ಬರು ಸಹೋದರಿಯರಿದ್ದಾರೆ. ನಿನ್ನೆ ಘೋಷಣೆ ಮಾಡಿದ್ದ 2 ಲಕ್ಷ ರೂ.ಗಳೊಂದಿಗೆ ಮತ್ತೆ 4 ಲಕ್ಷ ರೂ. ಸೇರಿಸಿ ಒಟ್ಟು 6 ಲಕ್ಷ ರೂ. ಕೊಟ್ಟು ಬರುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹರ್ಷ ಸಾವಿಗೆ ಸ್ಯಾಂಡಲ್ ವುಡ್, ಬಾಲಿವುಡ್ ಕಲಾವಿದರ ಆಕ್ರೋಶ
Advertisement
Advertisement
ಮೃತ ಹರ್ಷನ ದೇಹದಲ್ಲಿ ನಮ್ಮದೇ ಹಿಂದೂ ರಕ್ತ ಹರಿಯುತ್ತಿತ್ತು. ಎಲ್ಲ ಮುಸ್ಲಿಮರು ಭಯೋತ್ಪಾದಕರಲ್ಲ. ಘಟನೆಗೆ ಸಂಬಂಧಿಸಿದಂತೆ ನಾನು ಮುಸ್ಲಿಮರ ಬಗ್ಗೆ ಮಾತನಾಡುವುದಿಲ್ಲ. ನಮ್ಮ ಮೃದುಧೋರಣೆ ತೋರಿದ್ದೇವೆ. ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಹರ್ಷನ ಒಂದೊಂದು ರಕ್ತದ ಹನಿಯೂ ವ್ಯರ್ಥವಾಗದಂತೆ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಶಪಥ ಮಾಡ್ತೇವೆ: ಪ್ರಮೋದ್ ಮುತಾಲಿಕ್
ಸರ್ಕಾರದ ವೈಫಲ್ಯದಿಂದ ಘಟನೆ ಆಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಡಿಕೆಶಿ, ಸಿದ್ದರಾಮಯ್ಯ, ಕುಮಾರಸ್ವಾಮಿ ಅವರ ಪ್ರಚೋದನಕಾರಿ ಹೇಳಿಕೆಗಳು ಇದಕ್ಕೆ ಕಾರಣ. ಇಂತಹ ಸಂದರ್ಭದಲ್ಲಿ ಸರ್ಕಾರದ ಜೊತೆ ನಿಲ್ಲಬೇಕಿತ್ತು. ನನಗೆ ಶಾಸಕ ಸ್ಥಾನ, ಹುದ್ದೆ ಮುಖ್ಯವಲ್ಲ. ನನಗೆ ಹಿಂದುತ್ವ ಮುಖ್ಯ. ಸವಾಲು ಹಾಕ್ತೇನೆ, ಇನ್ಮುಂದೆ ಅಟ್ಯಾಕ್ ಮಾಡಿದ್ರೆ ಸುಮ್ಮನಿರಲ್ಲ ಎಂದು ಖಡಕ್ ವಾರ್ನಿಂಗ್ ನೀಡಿದರು. ಇದನ್ನೂ ಓದಿ: ಹರ್ಷ ಸಾವಿಗೆ ಸ್ಯಾಂಡಲ್ ವುಡ್, ಬಾಲಿವುಡ್ ಕಲಾವಿದರ ಆಕ್ರೋಶ