ಬೆಂಗಳೂರು: ಶಿವಮೊಗ್ಗದಲ್ಲಿ ಕೊಲೆಯಾಗಿರುವ ಹಿಂದೂ ಕಾರ್ಯಕರ್ತ ಹರ್ಷನ ಮೇಲೆ ಕೊತ್ತಂಬರಿ ಸೊಪ್ಪು ತರಲು ಅಥವಾ ಹುಡುಗಿ ಜೊತೆ ಹೋದ ಕೇಸ್ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಹೇಳಿದ್ದಾರೆ.
Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಯಾರ ಹತ್ಯೆ ಆದ್ರೂ ಕೂಡ ಎಲ್ಲಾ ಪಕ್ಷ ಹೇಳೋದು ಒಂದೇ ಮಾತು ಕಠಿಣ ಶಿಕ್ಷೆ ಆಗಬೇಕು ಅಂತ. ಹರ್ಷನ ಜೀವನ ನಾನು ಹತ್ತಿರದಿಂದ ನೋಡಿದ್ದೇನೆ. ಅವರ ಮೇಲೆ ಅನೇಕ ಕೇಸ್ ಇತ್ತು. ಹರ್ಷ ಮೇಲೆ ವೈಯಕ್ತಿಕ ಕೇಸ್ ಇಲ್ಲ. ಹರ್ಷ ಮೇಲೆ ಕೊತ್ತಂಬರಿ ಸೊಪ್ಪು ತರಲು, ಹುಡುಗಿ ಜೊತೆ ಹೋದ ಕೇಸ್ ಇಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹರ್ಷ ಕುಟುಂಬಕ್ಕೆ 1 ಲಕ್ಷ ರೂ. ನೆರವು ಘೋಷಿಸಿದ ಶಾಸಕ ಅರವಿಂದ ಲಿಂಬಾವಳಿ
Advertisement
Advertisement
ಗಣೇಶ ಮೂರ್ತಿ ಕೂರಿಸೋ ಸಂದರ್ಭದಲ್ಲಾದ ಸಂಘರ್ಷದ ಬಗ್ಗೆ ಮಾತ್ರ ಕೇಸ್ ಇರೋದು. ಮದುವೆ ಆಗು ಮಗನೆ ಅಂತ ಅವರ ತಾಯಿ ಹೇಳ್ತಿದ್ರು. ಆಗ ಅವನು ಎಲ್ಲರೂ ಮದುವೆ ಆದ್ರೆ ದೇಶಕ್ಕಾಗಿ ಕೆಲಸ ಮಾಡೋರು ಯಾರು ಅಂತ ಹೇಳುತ್ತಿದ್ದ. ಓಂ ಅನ್ನೋದ್ರ ಮೇಲೆ ಚುಚ್ಚಿ ಚುಚ್ಚಿ ಕೊಂದಿದ್ದಾರೆ ಪಾಪಿಗಳು. ಕೇಸರಿ ಶಾಲು ಅಲ್ಲಿಂದ, ಇಲ್ಲಿಂದ ತಂದ್ರು ಅನ್ನೋ ಮಾಹಿತಿ ಇರೋ ಕಾಂಗ್ರೆಸ್ ನವರಿಗೆ ಕೊಲೆ ಮಾಡೋ ಬಗ್ಗೆ ಮಾಹಿತಿ ಇರಲಿಲ್ವಾ ಎಂದು ಪ್ರಶ್ನಿಸಿ ಭಾರತಿ ಶೆಟ್ಟಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಶಿವಮೊಗ್ಗದಲ್ಲಿ ಹಿಂಸಾಚಾರ, ಶಾಲಾ- ಕಾಲೇಜುಗಳಿಗೆ ರಜೆ: ಸೋಮವಾರ ನಡೆದಿದ್ದು ಏನು?
Advertisement
ಹರ್ಷಗೆ ನ್ಯಾಯ ಸಿಗಬೇಕು. ಅಪರಾಧಿಗಳಿಗೆ ಕಠಿಣ ಕಠಿಣ ಶಿಕ್ಷೆ ನೀಡಬೇಕು ಎಂದು ಇದೇ ವೇಳೆ ಅವರು ಒತ್ತಾಯಿಸಿದರು.