ಶಿವಮೊಗ್ಗ: ಹಿಂದೂ ಕಾರ್ಯಕರ್ತ ಹರ್ಷ ಹತ್ಯೆಯ ಬಳಿಕ ಮನೆಯಲ್ಲಿ ನೀರವಮೌನ ಆವರಿಸಿದೆ. ಮಗನನ್ನು ಕಳೆದುಕೊಂಡು ಹರ್ಷ ಕುಟುಂಬ ಕಣ್ಣೀರಾಕುತ್ತಿದೆ.
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಹರ್ಷ ತಾಯಿ ಪದ್ಮಾ, ನನ್ನ ಮಗ ಕೇಸರಿ ಶಾಲು, ಕುಂಕುಮವನ್ನು ಮಾತ್ರ ಬಿಟ್ಟು ಹೋಗಿದ್ದಾನೆ. ಪ್ರತಿ ಮನೆಯಲ್ಲಿ ಕೂಡ ನನ್ನ ಮಗ ಹರ್ಷ ಹುಟ್ಟಲಿ. ನಿನ್ನೆ ನನ್ನ ಮಗನ ಅಂತ್ಯಸಂಸ್ಕಾರಕ್ಕೆ ಬಂದವರೇ ನನ್ನ ಮಕ್ಕಳು. ಅವರಲ್ಲಿಯೇ ಹರ್ಷನನ್ನು ನೋಡುತ್ತೇನೆ ಎಂದು ಹೇಳುತ್ತಾ ಬಿಕ್ಕಿ ಬಿಕ್ಕಿ ಅತ್ತರು. ಇದನ್ನೂ ಓದಿ: ಶಿವಮೊಗ್ಗ ಒಳ್ಳೆಯ ನಾಡು, ಯಡಿಯೂರಪ್ಪ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ: ಡಿಕೆಶಿ
Advertisement
Advertisement
ನನ್ನ ತಮ್ಮ ಇಷ್ಟೊಂದು ಜನರ ಪ್ರೀತಿ ಗಳಿಸಿದ್ದಾನೆ ಎಂದು ನನಗೆ ಗೊತ್ತಿರಲಿಲ್ಲ. ಆತನನ್ನು ನಾನು ಚಿಕ್ಕ ಮಗು ಎಂದುಕೊಂಡಿದ್ದೆ. ಈ ರೀತಿಯಾಗಿ ಪ್ರೀತಿಯನ್ನು, ಸ್ನೇಹವನ್ನು ಪಡೆದಿದ್ದಾನೆ ಎಂದರೆ ನಮಗೂ ಗೊತ್ತಿರಲ್ಲಿಲ್ಲ. ಈ ಮನೆಯಲ್ಲಿ ಕೇವಲ ಕೇಸರಿ, ಕುಂಕುಮ ಮಾತ್ರ ಇದೆ. ನಿನ್ನೆ ಮಣ್ಣು ಮಾಡಿ ಬಂದಾಗ ನನ್ನ ಮಡಿಲಲ್ಲಿ ಕೇವಲ ಕುಂಕುಮ ಮಾತ್ರ ಇತ್ತು. ಅದೇ ನನ್ನ ತಮ್ಮ ಎಂದು ನೋಡಿಕೊಳ್ಳುತ್ತೇನೆ ಎಂದು ಹರ್ಷ ಸಹೋದರಿ ಅಶ್ವಿನಿ ದುಃಖಿತರಾದರು. ಇದನ್ನೂ ಓದಿ: ಕೊಲೆಯಾದ ಹರ್ಷನನ್ನು ಭಯೋತ್ಪಾದಕ ಎಂದ ವಿದೇಶಿ ಪತ್ರಕರ್ತ- ಡಿಜಿಪಿ ಸ್ಪಷ್ಟನೆ
Advertisement
ಭಾನುವಾರ ರಾತ್ರಿ ಐವರು ದುಷ್ಕರ್ಮಿಗಳು ಹರ್ಷನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಆ ಬಳಿಕದಿಂದ ಶಿವಮೊಗ್ಗ ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಹರ್ಷ ಮೃತದೇಹದ ಮೆರವಣಿಗೆ ವೇಳೆ ಕಲ್ಲು ತೂರಾಟ. ಬೈಕಿಗೆ ಬೆಂಕಿ ಹಚ್ಚಿರುವ ಮೂಲಕ ಹಿಂಸಾಚಾರಕ್ಕೆ ತಿರುಗಿತ್ತು. ಘಟನೆ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಪೊಲೀಸರು ಅಲರ್ಟ್ ಆಗಿದ್ದು, ಸದ್ಯ ಶಿವಮೊಗ್ಗದಲ್ಲಿ ಸೆಕ್ಷನ್ 144 ಅನ್ನು ನಾಳೆವರೆಗೂ ಜಾರಿ ಮಾಡಲಾಗಿದೆ.