ಚೆನ್ನೈ: ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಶತಾಯುಷಿ ಶ್ರೀ ಸಿದ್ದಗಂಗಾ ಶ್ರೀ ಏರ್ ಅಂಬುಲೆನ್ಸ್ ಮೂಲಕ ಚೆನ್ನೈಗೆ ಬಂದಿಳಿದಿದ್ದಾರೆ.
ತುಮಕೂರಿನ ಸಿದ್ದಗಂಗಾ ಮಠದಿಂದ ಬೆನ್ಜ್ ಕಾರಲ್ಲಿ ಹೆಚ್‍ಎಎಲ್ ಏರ್ ಪೋರ್ಟ್ ತಲುಪಿದ್ದ ಶ್ರೀಗಳನ್ನು ಅಲ್ಲಿಂದ ಏರ್ ಅಂಬುಲೆನ್ಸ್ ಮೂಲಕ ಚೆನ್ನೈನಲ್ಲಿರುವ ಪ್ರತಿಷ್ಠಿತ ರೆಲಾ ವೈದ್ಯಕೀಯ ಸಂಸ್ಥೆಗೆ ಕರೆದುಕೊಂಡು ಬರಲಾಗಿದೆ. ಚೆನ್ನೈ ಏರ್ ಪೋರ್ಟ್ ನಿಂದ ರೇಲಾ ಆಸ್ಪತ್ರೆಗೆ ಸೇರಿದ ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.
Advertisement
Advertisement
ಸಿದ್ದಗಂಗಾ ಶ್ರೀಗಳಿಗೆ ಇಂದು ರಾತ್ರಿ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ನಾಳೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಮೂರ್ನಾಲ್ಕು ದಿನ ಆಸ್ಪತ್ರೆಯಲ್ಲಿ ಉಳಿಯಲಿದ್ದಾರೆ. ಶ್ರೀಗಳ ನಿತ್ಯದ ಪೂಜೆಗಾಗಿ ಆಸ್ಪತ್ರೆಯಲ್ಲೇ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಶ್ರೀಗಳ ಶಿಷ್ಯ ವೃಂದದವರು ಪೂಜಾ ಸಾಮಾಗ್ರಿ ಸೇರಿದಂತೆ ಅಗತ್ಯ ವಸ್ತುಗಳೊಂದಿಗೆ ಈಗಾಗಲೇ ಚೆನ್ನೈನ ಆಸ್ಪತ್ರೆಗೆ ಬಂದಿದ್ದಾರೆ. ಸ್ವಾಮೀಜಿಗೆ ಈಗಾಗಲೇ 5 ಸ್ಟಂಟ್ ಅಳವಡಿಸಲಾಗಿದ್ದು, ಮತ್ತೆ ಸ್ಟಂಟ್ ಅಳವಡಿಸಲು ಸಾಧ್ಯವಿಲ್ಲ. ಹೀಗಾಗಿ ಶಾಶ್ವತ ಪರಿಹಾರಕ್ಕಾಗಿ ಚೆನ್ನೈನಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತದೆ. ಇದನ್ನೂ ಓದಿ: ಗಿನ್ನೆಸ್ ದಾಖಲೆ ಮಾಡಿದ ವೈದ್ಯರಿಂದ ಇಂದು ಶ್ರೀಗಳಿಗೆ ಚಿಕಿತ್ಸೆ
Advertisement
Advertisement
ಐಸಿಎಟಿ (ಇಂಟರ್ ನ್ಯಾಷನಲ್ ಕ್ರಿಟಿಕಲ್ ಕೇರ್ ಏರ್ ಟ್ರಾನ್ಸ್ ಫರ್ ಟೀಮ್) ಸಂಸ್ಥೆಗೆ ಸೇರಿದ ಏರ್ ಅಂಬುಲೆನ್ಸ್ ನಲ್ಲಿ ಸಿದ್ದಗಂಗಾ ಶ್ರೀಗಳನ್ನು ಚೆನ್ನೈಗೆ ಕರೆದುಕೊಂಡು ಹೋಗಲಾಗಿದೆ. ವೈದ್ಯರು ಸೇರಿದಂತೆ ಒಟ್ಟು 7 ಮಂದಿ ಪ್ರಯಾಣಿಸಬಹುದಾದ ಈ ಏರ್ ಅಂಬುಲೆನ್ಸ್ ನಲ್ಲಿ ಐಸಿಯು ಯುನಿಟ್ ಇರುತ್ತದೆ. ಡಾಕ್ಟರ್ ಶಾಲಿನಿ ನಲ್ವಾಡ್ ಮತ್ತು ರಾಹುಲ್ ಸಿಂಗ್ ನೇತೃತ್ವದ ಐಸಿಎಟಿಯನ್ನ ಏರ್ ಅಂಬುಲೆನ್ಸ್ ಸೇವೆಗಾಗಿ ಗುರುವಾರ ಸಂಪರ್ಕಿಸಲಾಗಿತ್ತು.
https://www.youtube.com/watch?v=aO1mVgHf5ww
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv