ಬೆಂಗಳೂರು: ಶಿವಾಜಿನಗರ ಪೊಲೀಸರು ಪ್ರೇಮಿಗಳಂತೆ ನಟಿಸಿ ಅಪಹರಣಕಾರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಂಧ್ರ ಪ್ರದೇಶದಲ್ಲಿ ಅಪಹರಣಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ತಿಂಗಳ 9 ರಂದು ನಗರದ ಕ್ವೀನ್ಸ್ ರಸ್ತೆಯಲ್ಲಿ ಕಿಡ್ನಾಪ್ ನಡೆದಿತ್ತು. ಡೈರೆಕ್ಟ್ ಸೆಲ್ಲಿಂಗ್ ಟೂರ್ಸ್ ಆಂಡ್ ಟ್ರಾವೆಲ್ಸ್ ಸಿಬ್ಬಂದಿ ಕಾರ್ತಿಕ್ ಎಂಬವರನ್ನು ಕಿಡ್ನಾಪ್ ಮಾಡಲಾಗಿತ್ತು. ಆದರೆ ಈಗ ಪೊಲೀಸರು ಪ್ರೇಮಿಗಳಂತೆ ನಟನೆ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.
Advertisement
ಏನಿದು ಪ್ರಕರಣ?
ಹಫೀಜ್, ಗೌಸ್ ಪೀರ್, ಫಯಾಜ್ ಹಾಗೂ ಶೇಖ್ ಎಂಬವರು ಟ್ರಾವೆಲ್ಸ್ ನಲ್ಲಿ ಪ್ಯಾಕೇಜ್ ಬುಕ್ ಮಾಡಿದ್ದರು. ನಂತರ ಟೂರ್ ಪ್ಯಾಕೇಜ್ ಇಷ್ಟವಿಲ್ಲ ಎಂದು ಹಣ ನೀಡುವಂತೆ ಮಾಲೀಕನಿಗೆ ಬೆದರಿಕೆ ಹಾಕಿದ್ದರು. ಇಲ್ಲವಾದಲ್ಲಿ ಸಿಬ್ಬಂದಿ ಕಾರ್ತಿಕ್ ನನ್ನು ಕಿಡ್ನಾಪ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಅದರಂತೆಯೇ ದಿನಾಂಕ 9ರಂದು ಟೂರ್ಸ್ ಆಂಡ್ ಟ್ರಾವೆಲ್ಸ್ ನ ಮಾಲೀಕ ಸಂಜೀವ್ ಗೆ ಕರೆ ಮಾಡಿ ಕಿಡ್ನಾಪ್ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.
Advertisement
Advertisement
ಇದರಿಂದ ಮಾಲೀಕ ಸಂಜೀವ್ ಭಯದಿಂದ ಶಿವಾಜಿನಗರ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲಿಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಅಷ್ಟೇ ಅಲ್ಲದೇ ಶಿವಾಜಿನಗರದ ಪೊಲೀಸರು ಆರೋಪಿಗಳ ಪತ್ತೆಗೆ ಇನ್ಸ್ ಪೆಕ್ಟರ್ ತಬ್ರೇಜ್ ಹಾಗೂ ಸಬ್ ಇನ್ಸ್ ಪೆಕ್ಟರ್ ಶೀಲಾ ಪ್ರತ್ಯೇಕ ತಂಡಗಳಾಗಿ ತೆರಳಿದ್ದರು. ತನಿಖೆಯಲ್ಲಿ ಆಂಧ್ರ ಪ್ರದೇಶದಲ್ಲಿ ಆರೋಪಿಗಳು ಇರುವುದು ಪತ್ತೆಯಾಗಿತ್ತು.
Advertisement
ಪೊಲೀಸರು ದರೋಡೆಕೋರರಿಗೆ ಅನುಮಾನ ಬಾರದಿರಲಿ ಅಂತ ಪೊಲೀಸರಂತೆ ಹೋಗುವ ಬದಲು ಪ್ರೇಮಿಗಳಂತೆ ಹೋಗಿದ್ದು, ಶಿವಾಜಿನಗರ ಸಬ್ ಇನ್ಸ್ ಪೆಕ್ಟರ್ ಶೀಲಾ ಹಾಗೂ ಕ್ರೈಂ ಸಿಬ್ಬಂದಿ ಪ್ರೇಮಿಗಳಂತೆ ನಟನೆ ಮಾಡಿದ್ದಾರೆ. ಬಳಿಕ ಆರೋಪಿಗಳಿಗೆ ಅನುಮಾನ ಬಾರದಂತೆ ಅವರ ಸಮೀಪ ಹೋಗಿ ಅವರನ್ನು ಬಂಧಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv