ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ಶಿವಾಜಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ರಿಜ್ವಾನ್ ಅರ್ಷದ್ ಜಯಭೇರಿ ಗಳಿಸಿದ್ದಾರೆ. 13,520 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಎಂ ಸರವಣ ವಿರುದ್ಧ ಗೆಲುವನ್ನ ದಾಖಲಿಸಿದ್ದಾರೆ.
ಚುನಾವಣೆ ಘೋಷಣೆಯಾದಾಗಿನಿಂದಲೂ ಶಿವಾಜಿನಗರ ಕ್ಷೇತ್ರ ಜಿದ್ದಾಜಿದ್ದಿನ ಕಣವಾಗಿತ್ತು. ಶಿವಾಜಿನಗರದಲ್ಲಿ ಕಾಂಗ್ರೆಸ್ ಕಾರ್ಪೋರೆಟರ್ ಗಳೆಲ್ಲಾ ಬಂಡಾಯ ಎದ್ದು ರಿಜ್ವಾನ್ ಅರ್ಷದ್ ವಿರುದ್ಧ ತೊಡೆತಟ್ಟಿದ್ದರು. ಇದನ್ನು ಚಾಲೆಂಜಿಂಗ್ ಆಗಿ ಸ್ವೀಕರಿಸಿ ಕ್ಷೇತ್ರದಲ್ಲಿ ಭರ್ಜರಿ ಕ್ಯಾಂಪೇನ್ ಮಾಡಿ ರಿಜ್ವಾನ್ ಗೆಲುವು ಸಾಧಿಸಿದ್ದಾರೆ.
ಶಿವಾಜಿನಗರದ ಉಪ ಚುನಾವಣೆ ಕಣದಲ್ಲಿ ಕಾಂಗ್ರೆಸ್‍ನಿಂದ ರಿಜ್ವಾನ್ ಅರ್ಷದ್, ಬಿಜೆಪಿಯಿಂದ ಎಂ.ಸರವಣ ಮತ್ತು ಜೆಡಿಎಸ್ ನಿಂದ ತನ್ವೀತ್ ಅಹಮದ್ ಸ್ಪರ್ಧಿಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಧೂಳಿಪಟ ಆದರೂ ಶಿವಾಜಿನಗರದಲ್ಲಿ ವಿಜಯದ ಪತಾಕೆ ಹಾರಿಸಿದೆ. ರಿಜ್ವಾನ್ ಅರ್ಷದ್ ಒಟ್ಟು 49,887 ಮತಗಳು ತೆಗೆದುಕೊಂಡು 13,520 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಎಂ ಸರವಣ 36,367 ಮತಗಳನ್ನು ಪಡೆದು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟರೆ, ಎಸ್‍ಡಿಪಿಐನಿಂದ ಸ್ಪರ್ಧಿಸಿದ್ದ ಅಬ್ದುಲ್ ಹನಾನ್ 3,141 ಮತಗಳನ್ನು ಪಡೆದು ಮೂರನೇ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಜೆಇಡಿಎಸ್‍ನಿಂದ ಸ್ಪರ್ಧಿಸಿದ್ದ ತನ್ವೀರ್ ಅಹಮದ್ 1,098 ಮತಗಳನ್ನ ಹಾಗೂ ವಾಟಾಳ್ ನಾಗರಾಜು 255 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದಾರೆ.
ಯಾರಿಗೆ ಎಷ್ಟು ಮತ?:
ರಿಜ್ವಾನ್ ಅರ್ಷದ್ (ಕಾಂಗ್ರೆಸ್): 49,887 ಮತಗಳು
ಸರವಣ (ಬಿಜೆಪಿ) : 36,367 ಮತಗಳು
ಅಬ್ದುಲ್ ಹನಾನ್ (ಎಸ್‍ಡಿಪಿಐ): 3,141 ಮತಗಳು
ತನ್ವಿರ್ ಅಹಮದ್ (ಜೆಡಿಎಸ್): 1,098
ವಾಟಾಳ್ ನಾಗರಾಜು: 255