ರಾಯಚೂರು: ಉತ್ತರ ಕರ್ನಾಟಕ(North Karnataka) ಭಾಗದ ಸಮಸ್ಯೆಗಳನ್ನು ಈ ಭಾಗದ ಜನ ನಮಗೆ ಹೇಳಿದರೆ ನಾವು ಸ್ಪಂದಿಸುತ್ತೇವೆ. ಎಲ್ಲಾ ನಟರು ಬಂದು ನಿಲ್ಲುತ್ತೇವೆ ಎಂದು ನಟ ಶಿವ ರಾಜ್‌ಕುಮಾರ್(Shivaraj Kumar) ಹೇಳಿದ್ದಾರೆ.
ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದ್ದ ತನ್ನ 125ನೇ ಸಿನಿಮಾ ವೇದ(Vedha) ಚಿತ್ರದ ಎರಡನೇ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಮಾತನಾಡಿದರು. ಇದನ್ನೂ ಓದಿ: ಮಂಗಳಗೌರಿ ಕಾವ್ಯಶ್ರೀ ಆಟಕ್ಕೆ ಬ್ರೇಕ್ ಹಾಕಿದ ಬಿಗ್ ಬಾಸ್
Advertisement
Advertisement
ಇಲ್ಲಿನ ಜನ ನಮ್ಮಲ್ಲಿಗೆ ಬಂದು ಸ್ವೀಟ್ ತಿನ್ನಿಸಿ ಸೆಲ್ಫಿ ತೆಗೆದುಕೊಂಡು ಹೋಗುತ್ತಾರೆ. ಆದರೆ ಸಮಸ್ಯೆ ಹೇಳುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ರಾಯಚೂರಿನ ಏಮ್ಸ್ ಹೋರಾಟದ ಕುರಿತು ಸಿಎಂ ಜೊತೆ ಮಾತನಾಡುತ್ತೇನೆ ಎಂದರು.
Advertisement
ಸಿನಿಮಾ ಟೀಸರ್ ಬಿಡುಗಡೆ ಮಾಡಿ ಅಭಿಮಾನಿಗಳೊಂದಿಗೆ ಶಿವಣ್ಣ ಸಂಭ್ರಮಿಸಿದರು. “ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು ರಾಘವೇಂದ್ರ” ಹಾಡನ್ನ ಹಾಡಿ ಅಭಿಮಾನಿಗಳನ್ನ ರಂಜಿಸಿದರು.
Advertisement
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತಂಡ ಮೈನವಿರೇಳಿಸುವಂತ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿತು. 15 ಸಾವಿರಕ್ಕೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಶಿವಣ್ಣನ ಮೇಲಿನ ಅಭಿಮಾನ ಮೆರೆದರು. ಶಿವಣ್ಣನಿಗೆ ಬೆಳ್ಳಿಗದೆ ನೀಡಿ ಅಭಿಮಾನಿಗಳು ಸನ್ಮಾನಿಸಿದರು.