– ಘಾಟಿ ದೇವಾಲಯದಲ್ಲೂ ಅಭಿಮಾನಿಗಳಿಂದ ಪೂಜೆ
ರಾಮನಗರ: ಇಂದು (ಮಂಗಳವಾರ) ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shiva Rajkumar) ಶಸ್ತ್ರಚಿಕಿತ್ಸೆ ಯಶಸ್ವಿಯಾಗಲೆಂದು ಶಿವಣ್ಣ ಅಭಿಮಾನಿಗಳು ಪೂಜೆ ನೆರವೇರಿಸಿದ್ದಾರೆ.
ರಾಜ್ಯದ ಹಲವೆಡೆ ಶಿವಣ್ಣನ ಆರೋಗ್ಯಕ್ಕೆ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದು, ಚನ್ನಪಟ್ಟಣದ (Channapatna) ಪ್ರಸಿದ್ಧ ಕೆಂಗಲ್ ಆಂಜನೇಯಸ್ವಾಮಿ ದೇವಾಲಯದಲ್ಲೂ ಅಭಿಮಾನಿಗಳು ಶಿವಣ್ಣನ ಹೆಸರಿನಲ್ಲಿ ಅರ್ಚನೆ ಮಾಡಿಸಿ ಪ್ರಸಾದ ಹಂಚಿಕೆ ಮಾಡಿದ್ದಾರೆ. 101 ಈಡುಗಾಯಿ ಹೊಡೆದು ಶಿವರಾಜ್‌ಕುಮಾರ್ ಪೋಟೋ ಹಿಡಿದು ಶುಭಹಾರೈಸಿದ್ದಾರೆ. ಇದನ್ನೂ ಓದಿ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ, ಸದಸ್ಯರ ಆಯ್ಕೆಗೆ ಕಾಂಗ್ರೆಸ್ ಆಕ್ಷೇಪ
ಮೂತ್ರನಾಳ ಸಮಸ್ಯೆಯಿಂದ ಬಳಲುತ್ತಿರುವ ಶಿವರಾಜ್‌ಕುಮಾರ್ ಇಂದು ಅಮೆರಿಕಾದಲ್ಲಿ ಶಸ್ತçಚಿಕಿತ್ಸೆಗೆ ಒಳಗಾಗುತ್ತಿರುವ ಹಿನ್ನೆಲೆ ಶಿವಣ್ಣ ಆರೋಗ್ಯ ಚೇತರಿಕೆಗೆ ರಾಜ್ಯದ ಹಲವೆಡೆ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾ ರೇಪ್ & ಮರ್ಡರ್ ಕೇಸ್ | ಘಟನಾ ಸ್ಥಳದಲ್ಲಿ ಪ್ರತಿರೋಧದ ಪುರಾವೆ ಇಲ್ಲ – ಸಿಬಿಐಗೆ CFSL ವರದಿ ಸಲ್ಲಿಕೆ
ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲೂ ಶಿವಣ್ಣ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು. ಶಿವರಾಜ್ ಕುಮಾರ್ ಅಭಿಮಾನಿಗಳು ಹಾಗೂ ನವಕರ್ನಾಟಕ ಯುವಶಕ್ತಿ ಸಂಘಟನೆ ವತಿಯಿಂದ ಶಿವರಾಜ್ ಕುಮಾರ್ ಪೋಟೋ ಇಟ್ಟು ಸಂಕಲ್ಪ ಮಾಡಿಸುವ ಮೂಲಕ ದೇವರಲ್ಲಿ ಶಿವರಾಜ್ ಕುಮಾರ್ ಅವರಿಗೆ ಆರೋಗ್ಯ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸಿಕೊಂಡರು. ಬೇಗ ಗುಣಮುಖರಾಗಿ ತವರಿಗೆ ವಾಪಾಸ್ಸಾಗಲಿ ಎಂದು ಅಭಿಮಾನಿಗಳು ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಳ್ಳಾರಿ ಜಿಲ್ಲೆಯಲ್ಲಿ 8 ತಿಂಗಳ ಅವಧಿಯಲ್ಲಿ 23 ಬಾಣಂತಿಯರ ಸಾವು