ಬೆಂಗಳೂರು: ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವಣ್ಣ ಅವರು ಒಟ್ಟಾಗಿ ಅಭಿನಯಿಸುತ್ತಿರುವ `ದಿ ವಿಲನ್’ ಸಿನಿಮಾದ ಶೂಟಿಂಗ್ ಭರ್ಜರಿಯಾಗಿಯೇ ನಡೆಯುತ್ತಿದೆ.
ಇಷ್ಟು ದಿನ ಕಿಚ್ಚನ ಪಾತ್ರವನ್ನು ಚಿತ್ರೀಕರಣ ಮಾಡುತ್ತಿದ್ದ ಚಿತ್ರತಂಡ ಈಗ ಶಿವಣ್ಣ ಅವರ ಪಾತ್ರದ ಶೂಟಿಂಗ್ ಅನ್ನು ಭರದಿಂದಲೇ ಮಾಡುತ್ತಿದೆ. ಚಿತ್ರತಂಡ ಇತ್ತೀಚೆಗಷ್ಟೇ ಹೈದರಾಬಾದ್ ನಲ್ಲಿ ಶಿವಣ್ಣ ಅವರ ಸಾಹಸ ದೃಶ್ಯಗಳನ್ನು ಚಿತ್ರಿಕರಣ ಮಾಡಿ ಮುಗಿಸಿದೆ. ಈಗ ಬ್ಯಾಂಕಾಕ್‍ನಲ್ಲಿ ಶಿವಣ್ಣ ಅವರ ಕಾರ್ ಚೇಸಿಂಗ್ ದೃಶ್ಯವನ್ನು ಚಿತ್ರೀಕರಣವನ್ನು ಮಾಡಿ ಮುಗಿಸಿದೆ.
Advertisement
Advertisement
ಶೂಟಿಂಗ್ ಮುಗಿಸಿ ಅಭಿಮಾನಿಗಳ ಜೊತೆ ಫೋಟೋ ತೆಗೆಸಿಕೊಂಡಿದ್ದು, ಚಿತ್ರತಂಡದೊಂದಿಗೆ ಸೇರಿ ಅಪರೂಪದ ಕ್ಷಣಗಳನ್ನು ಕಳಿಯುತ್ತಿದ್ದಾರೆ. ಕಾರ್ ಚೇಸಿಂಗ್ ಶೂಟಿಂಗ್‍ನಲ್ಲಿ ಚಿತ್ರತಂಡ ಶಿವಣ್ಣ ಅವರನ್ನು ರಸ್ತೆಯ ಮಧ್ಯೆದಲ್ಲಿ ಓಡಾಡುವ ಕಾರು, ಲಾರಿಗಳ ಮೇಲೆ ಜಂಪ್ ಮಾಡಿಸಿ ಫೈಟಿಂಗ್ ಮಾಡಿಸುತ್ತಿದ್ದಾರೆ. ಅವರ ಈ ಫೈಟಿಂಗ್ ನೋಡಿದರೆ ಸಿನಿಮಾದಲ್ಲಿ ಶಿವಣ್ಣ ತಮ್ಮ ಹವವನ್ನು ಸೃಷ್ಟಿಸಿದ್ದಾರೆ ಎನಿಸುತ್ತದೆ.
Advertisement
ಶಿವಣ್ಣ ಅವರ ಸಾಹಸ ದೃಶ್ಯಗಳಿಗೆ ನಿರ್ದೇಶಕ ರವಿವರ್ಮ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅವರಿಗೆ ತಕ್ಕಂತೆ ಕೊರಿಯೋಗ್ರಫಿ ಮಾಡುತ್ತಿದ್ದಾರೆ.
Advertisement
ಸ್ಯಾಂಡಲ್‍ವುಡ್‍ನ ಬಹು ನಿರೀಕ್ಷಿತ `ದಿ ವಿಲನ್’ ಸಿನಿಮಾವು ಪ್ರೇಮ್ ನಿರ್ದೇಶನದಲ್ಲಿ ಮೂಡಿಬರುತ್ತಿದ್ದು, ಇದೊಂದು ಮಲ್ಟಿ ಸ್ಟಾರ್‍ಗಳ ಚಿತ್ರವಾಗಿದೆ. ಇದರಲ್ಲಿ ವಿಶೇಷತೆ ಎಂದರೆ ಕಿಚ್ಚ ಮತ್ತು ಶಿವಣ್ಣ ಒಟ್ಟಾಗಿ ಆಭಿನಯಿಸುತ್ತಿರುವುದು. ಈ ಸಿನಿಮಾದಲ್ಲಿ ಬಹುಭಾಷ ನಟಿ ಆಮಿ ಜಾಕ್ಸನ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅರ್ಜುನ ಜನ್ಯ ಅವರ ಸಂಗೀತದಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಮುಂದಿನ ವರ್ಷ ಫೆ. 14 ರಂದು ತೆರೆಗೆ ಬರುವ ಸಾಧ್ಯತೆಗಳಿವೆ.