ಉಡುಪಿ: ಅಮೆರಿಕದಲ್ಲಿ (America) ಚಿಕಿತ್ಸೆ ಪಡೆದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shiva Rajkumar) ತವರಿಗೆ ವಾಪಸ್ಸಾಗಿದ್ದಾರೆ. ಉಡುಪಿಯಲ್ಲಿ (Udupi) ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಈ ಬೆಳವಣಿಗೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ನಟ ಶಿವರಾಜ್ ಕುಮಾರ್ ನಮ್ಮ ರಾಜ್ಯದ ಆಸ್ತಿ ಎಂದಿದ್ದಾರೆ.
ಶಿವಣ್ಣ ಓರ್ವ ಅಪರೂಪದ ಸರಳ ವ್ಯಕ್ತಿ, ಅಷ್ಟೊಂದು ದೊಡ್ಡ ಕುಟುಂಬದಿಂದ ಬಂದರೂ ಅವರ ಶರೀರದಲ್ಲಿ ಒಂದು ಕಣದಷ್ಟು ಅಹಂ ಇಲ್ಲ. ಜನಪ್ರಿಯತೆ ಶಿವರಾಜ್ ಕುಮಾರ್ ಅವರ ತಲೆಗೆ ಹೋಗಿಲ್ಲ. ಸರಳ ಸ್ನೇಹಜೀವಿ ಮತ್ತು ಒಳ್ಳೆಯ ವ್ಯಕ್ತಿತ್ವದ ನಟ. ಹೊರದೇಶದಲ್ಲಿ ಚಿಕಿತ್ಸೆ ಪಡೆದು ಮರಳಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು. ಇದನ್ನೂ ಓದಿ: ನಿಜವಾದ ಸ್ವಾತಂತ್ರ‍್ಯ ಹೋರಾಟಗಾರರನ್ನು ಮೂಲೆಗೆ ತಳ್ಳಿದ್ದು ಕಾಂಗ್ರೆಸ್: ಛಲವಾದಿ ನಾರಾಯಣಸ್ವಾಮಿ
Advertisement
Advertisement
ಬಹಳ ಗಂಭೀರವಾದ ಕಾಯಿಲೆಯಿಂದ ಅವರು ಬಳಲಿದ್ದರು. ಅವರಿಗೆ ನೀಡಿದ ಚಿಕಿತ್ಸೆ ಫಲಪ್ರದವಾಗಿದೆ. ಸಂಪೂರ್ಣ ಗುಣಮುಖರಾಗುತ್ತಾರೆ. ನಾಡಿನ ಜನತೆಯ ಪರವಾಗಿ ಅವರು ಸಂಪೂರ್ಣ ಗುಣಮುಖರಾಗಲಿ ಎಂದು ಕೋರುತ್ತೇನೆ. ಸಿನಿಮಾ ನಟರು ಅನ್ನುವುದಕ್ಕಿಂತಲೂ ಒಳ್ಳೆ ವ್ಯಕ್ತಿತ್ವದ ಮನುಷ್ಯ. ಶಿವರಾಜ್ ಕುಮಾರ್‌ರಂತಹ ಜನ ನಮ್ಮ ಜೊತೆಗೆ ಬಹಳ ಸಮಯ ಉಳಿಯಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಯಿಂದ ಲಕ್ಷ್ಮಿ ಹೆಬ್ಬಾಳ್ಕರ್ ಡಿಸ್ಚಾರ್ಜ್ – ಸಚಿವೆ ಭಾವುಕ
Advertisement