ಶಿವನಸಮುದ್ರಕ್ಕೆ ಶಿವಣ್ಣ ದಂಪತಿ ಭೇಟಿ – ಕಾವೇರಿ ನದಿಗೆ ಬಾಗಿನ ಅರ್ಪಣೆ

Public TV
1 Min Read
Shiva Rajkumar Shivanasamudra visit

– ಆದಿಶಕ್ತಿ ಮಾರಮ್ಮ ದೇವಾಲಯಕ್ಕೆ ಸೀರೆ ಕಾಣಿಕೆ

ಚಾಮರಾಜನಗರ: ಅನಾರೋಗ್ಯದ ನಿಮಿತ್ತ ಚಿಕಿತ್ಸೆಗೆ ಡಿಸೆಂಬರ್ 18 ರಂದು ವಿದೇಶಕ್ಕೆ ತೆರಳುತ್ತಿರುವ ನಟ ಡಾ.ಶಿವರಾಜ್ ಕುಮಾರ್ (Dr Shiva Rajkumar) ತಮ್ಮ ಪತ್ನಿ ಗೀತಾ ಅವರೊಂದಿಗೆ ಚಾಮರಾಜನಗರ (Chamarajanagara) ಜಿಲ್ಲೆಯ ಕೊಳ್ಳೇಗಾಲ (Kollegala) ತಾಲೂಕಿನ ಶಿವನಸಮುದ್ರಕ್ಕೆ (Shivanasamudra) ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಕಾವೇರಿ ನದಿಗೆ ಬಾಗಿನ ಅರ್ಪಿಸಿದ ಅವರು ಗಣಪತಿ ದೇವಸ್ಥಾನ, ಮಧ್ಯರಂಗ ಹಾಗೂ ಮೀನಾಕ್ಷಿ ಸಮೇತ ಸೋಮೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಶ್ರೀಚಕ್ರ ದರ್ಶನ ಮಾಡಿ ಆದಿಶಕ್ತಿ ಮಾರಮ್ಮ ದೇವಾಲಯಕ್ಕೆ ಸೀರೆ ಕಾಣಿಕೆ ಅರ್ಪಿಸಿದರು. ಇದನ್ನೂ ಓದಿ: ಸಿಂಗ್‌ ಬದಲು ಪ್ರಣಬ್‌ರನ್ನು ಪ್ರಧಾನಿ ಮಾಡುತ್ತಿದ್ದರೆ ಯುಪಿಎ-3 ಅಧಿಕಾರಕ್ಕೆ ಬರುತ್ತಿತ್ತು: ಮಣಿಶಂಕರ್‌ ಅಯ್ಯರ್‌

ಈ ಮೊದಲು ನಟ ಶಿವರಾಜ್‌ಕುಮಾರ್ ಹಾಗೂ ಅವರ ಕುಟುಂಬಸ್ಥರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದರು. ಅಲ್ಲದೇ ಶಿವಣ್ಣ ಹಾಗೂ ಪತ್ನಿ ಗೀತಾ ಶಿವರಾಜ್ ಕುಮಾರ್ ತಿಮ್ಮಪ್ಪನಿಗೆ ಮುಡಿಕೊಟ್ಟಿದ್ದರು. ಶಿವಣ್ಣ ಕುಟುಂಬದ ಜೊತೆ ಭೈರತಿ ರಣಗಲ್ ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಹಾಗೂ ಶಿವಣ್ಣ ಪುತ್ರಿ ನಿವೇದಿತಾ ಸಹ ತಿಮ್ಮಪ್ಪನ ದರ್ಶನ ಪಡೆದಿದ್ದರು. ಇದನ್ನೂ ಓದಿ: ಶುಕ್ರ ಗ್ರಹ ಮಾನವ ವಾಸಕ್ಕೆ ಯೋಗ್ಯವೇ? ವಿಜ್ಞಾನಿಗಳು ಹೇಳೋದೇನು?

Share This Article