ಮುಂಬೈ: ತೀವ್ರ ಜಿದ್ದಾಜಿದ್ದಿ ಕಣವಾಗಿದ್ದ ಮುಂಬೈ ವಾಯುವ್ಯ ಕ್ಷೇತ್ರದಲ್ಲಿ (Mumbai North West) ಮರು ಮತ ಎಣಿಕೆ ಬಳಿಕ ಶಿವಸೇನೆ ಶಿಂಧೆ ಬಣದ ಅಭ್ಯರ್ಥಿ ರವೀಂದ್ರ ವೈಕರ್ (Ravindra Waikar) ಕೇವಲ 48 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಮರು ಮತ ಎಣಿಕೆ ಬಳಿಕ 4,52,596 ಮತಗಳನ್ನು ಪಡೆದ ವೈಕರ್ 48 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಇದು ಲೋಕಸಭಾ ಚುನಾವಣಾ ಇತಿಹಾಸದಲ್ಲಿ ಕಡಿಮೆ ಮತಗಳ (Votes) ಅಂತರದಲ್ಲಿ ಸಾಧಿಸಿದ ಗೆಲುವುಗಳಲ್ಲಿ ಒಂದಾಗಿದೆ.
ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಅಭ್ಯರ್ಥಿ ಅಮೋಲ್ ಗಜಾನನ್ ಕೀರ್ತಿಕರ್ (Amol Kirtikar) 4,52,596 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. ಇದನ್ನೂ ಓದಿ: ನಾಗಾಲ್ಯಾಂಡ್‍ನಲ್ಲಿ 20 ವರ್ಷಗಳ ಬಳಿಕ ಗೆಲುವು ಸಾಧಿಸಿ ಇತಿಹಾಸ ಬರೆದ ಕಾಂಗ್ರೆಸ್
ಮತ ಎಣಿಕೆ ವೇಳೆ ಭಾರೀ ಹೈಡ್ರಾಮಾ:
ಮೊದಲು ನಡೆದ ಮತ ಎಣಿಕೆ ಪ್ರಕ್ರಿಯೆ ನಂತರ ಅಮೋಲ್ ಕೀರ್ತಿಕರ್ ಅವರು 2,000 ಮತಗಳಿಂದ ಗೆಲುವು ಸಾಧಿಸಿದ್ದಾರೆ ಎಂದು ಘೋಷಿಸಲಾಗಿತ್ತು. ಈ ವೇಳೆ ಪ್ರತಿಸ್ಪರ್ಧಿ ವೈಕರ್ ಮರು ಮತ ಎಣಿಕೆಗೆ ಒತ್ತಾಯಸಿ ಹೈಡ್ರಾಮಾ ಸೃಷ್ಟಿಸಿದರು. ಮರು ಮತ ಎಣಿಕೆ ನಂತರ 48 ಮತಗಳ ಅಂತರದಿಂದ ವೈಕರ್ ಗೆಲುವು ತನ್ನದಾಗಿಸಿಕೊಂಡರು.
2024 ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದ ಎಲ್ಲಾ 48 ಕ್ಷೇತ್ರಗಳಿಗೆ 5 ಹಂತಗಳಲ್ಲಿ ಮತದಾನ ನಡೆಯಿತು. ಮೊದಲ ಹಂತದಲ್ಲಿ ಶೇ.63.71, 2ನೇ ಹಂತದಲ್ಲಿ ಶೇ.62.71, 3ನೇ ಹಂತದಲ್ಲಿ ಶೇ.63.55, 4ನೇ ಹಂತದಲ್ಲಿ ಶೇ.59.64 ಮತ್ತು 5ನೇ ಹಂತದಲ್ಲಿ ಶೇ.54.33 ರಷ್ಟು ಮತದಾನವಾಗಿದೆ. ಇದನ್ನೂ ಓದಿ: ರಾಹುಲ್ ಗಾಂಧಿಗೆ ಡಬಲ್ ಧಮಾಕ – ಕಾಂಗ್ರೆಸ್ ಭದ್ರಕೋಟೆಯಾಗಿಯೇ ಉಳಿದ ರಾಯ್ ಬರೇಲಿ