ಮುಂಬೈ: ಶಿವಸೇನೆಯ (Shiv Sena) ಉದ್ಧವ್ ಠಾಕ್ರೆ ನೇತೃತ್ವ ಬಣದ ಕಾರ್ಯಕರ್ತನೊಬ್ಬ ಸ್ಥಳೀಯ ಶಾಸಕರಿಗೆ (MLA) ಕರೆ ಮಾಡಿ, ಮದುವೆಯಾಗಲು (Marriage) ಹುಡುಗಿಯನ್ನು (Bride) ಹುಡುಕಿಕೊಡುವಂತೆ ಮನವಿ ಮಾಡಿದ ಘಟನೆ ಮಹಾರಾಷ್ಟ್ರದ (Maharashtra) ಔರಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಸ್ಥಳೀಯ ಶಾಸಕ ಉದಯಸಿಂಗ್ ರಜಪೂತ್ ಹಾಗೂ ಪಕ್ಷದ ಕಾರ್ಯಕರ್ತನ ನಡುವೆ ನಡೆದ ಸಂಭಾಷಣೆಯ ಆಡಿಯೋ ಕ್ಲಿಪ್ ಇದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದೀಗ ಹರಿದಾಡುತ್ತಿದೆ.
ಆಡಿಯೋ ಕ್ಲಿಪ್‍ನಲ್ಲಿ ಏನಿದೆ?:
ನೆರೆಯ ಖಲ್ತಾಬಾದ್ ಪ್ರದೇಶದ ಕಾರ್ಯಕರ್ತನೊಬ್ಬ ಶಾಸಕನಿಗೆ ಕರೆ ಮಾಡಿದ್ದಾನೆ. ಕುಶೋಲಪರಿಗಳನ್ನು ಮಾತನಾಡುತ್ತಾ ಆ ಕಾರ್ಯಕರ್ತ ಶಾಸಕರಿಗೆ ತನಗೆ ಮದುವೆ ಹುಡುಕಿಕೊಡಲು ಮನವಿ ಮಾಡಿದ್ದಾನೆ. ನನಗೆ 8-9 ಎಕರೆ ಜಮೀನಿದೆ. ಆದರೂ ಯಾರು ಹೆಣ್ಣು ಕೊಡಲು ಸಿದ್ಧರಿಲ್ಲ. ನಿಮ್ಮ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳಿದ್ದರೇ ಹುಡುಕಿಕೊಡಿ ಎಂದು ತನ್ನ ಅಳಲನ್ನು ವ್ಯಕ್ತಪಡಿಸಿದ್ದಾನೆ.
ಇದಕ್ಕೆ ಶಾಸಕ ರಜಪೂತ್ ಸಕಾರಾತ್ಮಕವಾಗಿಯೇ ಉತ್ತರಿಸಿದ್ದಾರೆ. ನಿಮ್ಮ ಡಿಟೇಲ್ಸ್‌ನ್ನು ನನಗೆ ಕಳುಹಿಸಿಕೊಡಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಯುವ ದೇಹದಾರ್ಢ್ಯ ಪಟು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಇದೀಗ ಈ ಆಡಿಯೋ ವೈರಲ್ ಆಗುತ್ತಿದ್ದು, ಈ ಬಗ್ಗೆ ಶಾಸಕ ಮಾತನಾಡಿ, ಪರಿಸ್ಥಿತಿ ಅಷ್ಟು ಚೆನ್ನಾಗಿಲ್ಲ. 2,000 ನಿವಾಸಿಗಳ ಗ್ರಾಮವಿದ್ದರೆ, ಅಲ್ಲಿ ನೀವು ಸುಮಾರು 100-150 ಅವಿವಾಹಿತ ಯುವಕರನ್ನು ಕಾಣಬಹುದು. 100 ಎಕರೆ ಜಮೀನು ಇದ್ದರೂ ಮದುವೆಗೆ ಹೆಣ್ಣು ಹುಡುಕುವುದು ಕಷ್ಟವಾಗಿದೆ. ನನಗೆ ಅಂತಹ ಅನೇಕ ಕರೆಗಳು ಬರುತ್ತವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸ್ಯಾಂಟ್ರೋ ರವಿಗಾಗಿ 4 ಜಿಲ್ಲೆಯಲ್ಲಿ ಪೊಲೀಸರಿಂದ ಶೋಧ- ಮೈಸೂರಲ್ಲೇ ಎಡಿಜಿಪಿ ಠಿಕಾಣಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k