ಬೆಳಗಾವಿ: ಪ್ರತಿವರ್ಷವೂ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ (Belagavi Winter Session) ನಡೆಯುವ ಸಂದರ್ಭದಲ್ಲಿಯೇ ಎಂಇಎಸ್ ಮಹಾಮೇಳಾವ್ (MES Mahamelava) ನಡೆಸಿ ಉದ್ಧಟತನ ಪ್ರದರ್ಶನ ಮಾಡುತ್ತಿದೆ. ಇದನ್ನರಿತ ಬೆಳಗಾವಿ ಜಿಲ್ಲಾಡಳಿತ ಎಂಇಎಸ್ ಪುಂಡರಿಗೆ ಬಿಸಿ ಮುಟ್ಟಿಸಿದ್ದು ಅನುಮತಿ ನೀಡಲು ನಿರಾಕರಿಸಿದೆ.
ನಿರಾಕರಿಸಿದ್ದನ್ನೇ ಕಾರಣವಾಗಿಟ್ಟುಕೊಂಡು ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಬಣದ ಶಿವಸೇನೆ (Shivasena) ಉದ್ಧಟತನ ಪ್ರದರ್ಶನ ಮಾಡಿದೆ. ಇದನ್ನೂ ಓದಿ: ಬಂಗಾಳದಲ್ಲಿಂದು ಬಾಬರಿ ಶೈಲಿಯ ಮಸೀದಿಗೆ ಶಿಲಾನ್ಯಾಸ – ಭದ್ರತೆಗೆ ಬಿಎಸ್‌ಎಫ್ ನಿಯೋಜನೆ
ಬೆಳಗಾವಿಯಲ್ಲಿ ಎಂಇಎಸ್ ಮಹಾಮೇಳಾವ್‌ಗೆ ಅನುಮತಿ ಕೊಡಬೇಕು ಮಹಾರಾಷ್ಟ್ರ ನಾಯಕರಿಗೆ ಬೆಳಗಾವಿ ಪ್ರವೇಶ ನಿರ್ಬಂಧ ಹಾಕಬಾರದು. ಇಲ್ಲವಾದರೆ ಕರ್ನಾಟಕ ಯಾವುದೇ ಮಂತ್ರಿಗಳಿಗೆ ಮಹಾರಾಷ್ಟ್ರದಲ್ಲಿ ಓಡಾಡಲು ಅವಕಾಶ ಕೊಡುವುದಿಲ್ಲ ಎಂದು ಬೆದರಿಕೆ ಹಾಕಿದೆ.
ಮಹಾಮೇಳಾವ್ ಅನುಮತಿ ನೀಡದಿದ್ದರೆ ಅಧಿವೇಶನ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಕರ್ನಾಟಕ ಮಂತ್ರಿಗಳಿಗೆ ಓಡಾಟಕ್ಕೆ ಬ್ರೇಕ್ ಹಾಕುತ್ತೇವೆ ಎಂದು ಮಹಾರಾಷ್ಟ್ರದ ಕೊಲ್ಲಾಪುರ ಡಿಸಿಗೆ ಶಿವಸೇನೆ ಮನವಿ ಪತ್ರದಲ್ಲಿ ತಿಳಿಸಿದೆ.

