ಬೆಳಗಾವಿ: ಮಹಾರಾಷ್ಟ್ರದಲ್ಲಿ (Maharashtra) ಕನ್ನಡ ಭವನ (Kannada Bhavan) ನಿರ್ಮಾಣಕ್ಕೆ ಶಿವಸೇನೆಯ ಠಾಕ್ರೆ ಬಣ ಆಕ್ಷೇಪ ವ್ಯಕ್ತಪಡಿಸಿದ್ದು, ಮೊದಲು ಕರ್ನಾಟಕದಲ್ಲಿ (Karnataka) ನೀವು ನಮಗೆ ಮರಾಠಿ ಭವನ ಕಟ್ಟಲು ಅವಕಾಶ ನೀಡಬೇಕು. ಆಮೇಲೆ ಕರ್ನಾಟಕ ಭವನ ನಿರ್ಮಾಣ ಮಾಡಿಕೊಳ್ಳುವಂತೆ ಕ್ಯಾತೆ ತೆಗೆದಿದ್ದಾರೆ.
Advertisement
ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವಸೇನೆಯ ಠಾಕ್ರೆ ಬಣದ ಕೊಲ್ಲಾಪುರ ಜಿಲ್ಲಾಧ್ಯಕ್ಷ ರವಿಕಿರಣ ಇಂಗವಳ್ಳಿ, ಮಹಾರಾಷ್ಟ್ರ ಏಕೀಕರಣ ಸಮಿತಿ ಹೋರಾಟದಲ್ಲಿ ಸಾಕಷ್ಟು ನಮ್ಮ ಜನರು ಮೃತರಾಗಿದ್ದಾರೆ. ಆದ್ರೆ, ಅವರಿಗೆ ನ್ಯಾಯ ಕೊಡಿಸುವಂತಹ ಕೆಲಸವನ್ನು ಕರ್ನಾಟಕ ಸರ್ಕಾರ ಮಾಡಿಲ್ಲ. ಈಗ ಕರ್ನಾಟಕದ ಸಿಎಂ (CM) ಮಹಾರಾಷ್ಟ್ರದಲ್ಲಿ ಬಂದು ಕರ್ನಾಟಕ ಭವನ ಕಟ್ಟಿದ್ರೆ, ನಮಗೂ ಕರ್ನಾಟಕದಲ್ಲಿ ಮಹಾರಾಷ್ಟ್ರ ಭವನ ಕಟ್ಟಲು ಅವಕಾಶ ನೀಡಬೇಕು. ಮೊದಲು ನೀವು ನಮಗೆ ಭವನ ಕಟ್ಟಲು ಅವಕಾಶ ನೀಡಿ. ಆಮೇಲೆ ನಿಮ್ಮ ಭವನ ಇಲ್ಲಿ ನಿರ್ಮಾಣ ಮಾಡಿಕೊಳ್ಳಿ. ಒಂದು ವೇಳೆ ನೀವು ಕರ್ನಾಟಕ ಭವನ ಕಟ್ಟಿದ್ದೆ ಆದ್ರೆ ನಾವು ಕರ್ನಾಟಕದ ಹೆಸರು ತೆಗೆದು ಹಾಕುತ್ತೇವೆ ಎಂದು ಕರ್ನಾಟಕದ ಸಿಎಂಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿಗೆ ಯಾವುದೇ ದೂರದೃಷ್ಟಿ ಇಲ್ಲ: ಅರುಣ್ ಸಿಂಗ್
Advertisement
Advertisement
ಕಳೆದ ಅ.10ರಂದು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕನ್ನೇರಿಮಠದಲ್ಲಿ ನಡೆದಿದ್ದ ಸಂತ ಸಮಾವೇಶದಲ್ಲಿ ಭಾಗಿಯಾಗಿದ್ದ ಬಸವರಾಜ ಬೊಮ್ಮಾಯಿ (Basavaraj Bommai) ಕನ್ನೇರಿ ಮಠದಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ಮೂರು ಕೋಟಿ ನೀಡುತ್ತೇನೆ. ಈಗಾಗಲೇ ಒಂದು ಕೋಟಿ ಅನುದಾನ ಕರ್ನಾಟಕ ಭವನ ನಿರ್ಮಾಣಕ್ಕೆ ನೀಡಲಾಗುತ್ತಿದ್ದು, ಕೆಲಸವನ್ನು ಪ್ರಾರಂಭ ಮಾಡಬೇಕು. ಮುಂಬರುವ ದಿನಗಳಲ್ಲಿ ಕರ್ನಾಟಕ ಭವನದೊಳಗಿನ ಕೆಲಸ ಕಾರ್ಯಕ್ಕೆ ಎರಡು ಕೋಟಿ ನೀಡುತ್ತೇನೆ ಎಂದು ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಹಲಾಲ್ ಮುಕ್ತ ದೀಪಾವಳಿ ಅಭಿಯಾನಕ್ಕೆ ಮುತಾಲಿಕ್ ಕರೆ