ಮುಂಬೈ: ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡರಿಗೆ ಖಾಸಗಿ ವಿಮಾನಯಾನ ಸಂಸ್ಥೆಗಳು ನಿಷೇಧ ಹೇರಿದೆ. ಗುರುವಾರ ಏರ್ ಇಂಡಿಯಾದ ಸಿಬ್ಬಂದಿಯೊಬ್ಬರಿಗೆ ಚಪ್ಪಲಿಯಿಂದ ಹೊಡೆದು ಅಧಿಕಾರ ದರ್ಪವನ್ನು ತೋರಿದ್ದ ಹಿನ್ನೆಲೆಯಲ್ಲಿ ಇಂಡಿಯನ್ ಏರ್‍ಲೈನ್ಸ್ ಫೆಡರೇಷನ್(ಎಫ್‍ಐಎ) ಅಡಿಯಲ್ಲಿ ಬರುವ ಖಾಸಗಿ ಕಂಪೆನಿಗಳು ಗಾಯಕ್ವಾಡ್ ಅವರಿಗೆ ತಮ್ಮ ಸಂಸ್ಥೆಯಲ್ಲಿ ಟಿಕೆಟ್ ನೀಡದೇ ಇರಲು ನಿರ್ಧಾರವನ್ನು ಕೈಗೊಂಡಿದೆ ಎಂದು ಮೂಲಗಳು ಹೇಳಿವೆ.
ಎಫ್‍ಐಎ ಸದಸ್ಯರಾಗಿರುವ ಜೆಟ್ ಏರ್‍ವೇಸ್, ಗೋ ಏರ್, ಇಂಡಿಗೋ, ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆಗಳು ರವೀಂದ್ರ ಅವರ ಮೇಲೆ ಕಠಿಣ ಕ್ರಮವನ್ನು ತಗೆದುಕೊಂಡಿದೆ ಎಂದು ಎಫ್‍ಐಎ ವಕ್ತಾರರೊಬ್ಬರು ತಿಳಿಸಿದ್ದಾರೆ.
Advertisement
ಸಿಬ್ಬಂದಿಗೆ ಹೊಡೆದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ರವೀಂದ್ರ ಗಾಯಕ್ವಾಡ್ ಅವರ ಹೆಸರನ್ನು ಕಪ್ಪುಪಟ್ಟಿಗೆ ಸೇರಿಸಿದೆ. ಏರ್ ಇಂಡಿಯಾದ ಅಧಿಕಾರಿಯೊಬ್ಬರು ಈ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ ಬ್ಲಾಕ್‍ಲಿಸ್ಟ್ ಅವಧಿ ಎಲ್ಲಿಯವರೆಗೆ ಇರಲಿದೆ ಎನ್ನುವುದು ತಿಳಿದು ಬಂದಿಲ್ಲ.
Advertisement
ಉಸ್ಮನಾ ಬಾದ್ ಲೋಕಸಭಾ ಕ್ಷೇತ್ರದ ಸಂಸದ ರವೀಂದ್ರ ಗಾಯಕ್ವಾಡ್ ಏರ್ ಇಂಡಿಯಾದ ನಿವೃತ್ತ ಅಂಚಿನಲ್ಲಿರೋ ತಮ್ಮ ತಂದೆ ವಯಸ್ಸಿನ ಏರ್ ಇಂಡಿಯಾದ ಸಿಬ್ಬಂದಿ ಸುಕುಮಾರ್ ಅವರಿಗೆ 25 ಬಾರಿ ಚಪ್ಪಲಿಯಿಂದ ಹೊಡೆದಿದ್ದರು. ಬಳಿಕ ವಿಮಾನದಲ್ಲಿ ಸೀಟ್ ಬದಲಾವಣೆ ವಿಚಾರದಲ್ಲಿ ಗಲಾಟೆ ನಡೆದಾಗ ಹೊಡೆದಿದ್ದೇನೆ ಅಂತ ಪೌರುಷ ತೋರಿದ್ದರು.
Advertisement
ರವೀಂದ್ರ ಗಾಯಕ್ವಾಡ್ ಪುಣೆಯಿಂದ ದೆಹಲಿಯತ್ತ ಹೊರಟಿದ್ದರು. ನಾನು ಬಿಸಿನೆಸ್ ಕ್ಲಾಸ್ ಟಿಕೆಟ್ ಬುಕ್ ಮಾಡಿದ್ದು, ಆದ್ರೆ ನನ್ನ ಎಕನಾಮಿ ಕ್ಲಾಸ್ ಸೀಟ್‍ನಲ್ಲಿ ಕೂರಿಸಿದ್ದಾರೆ ಎಂದು ಏರ್ ಇಂಡಿಯಾ ವಿರುದ್ಧ ಆರೋಪ ಮಾಡಿದ್ದರು. ಘಟನೆ ಬಗ್ಗೆ ಮಾತಾನಾಡಿರೋ ಹಲ್ಲೆಗೊಳಗಾದ ಸಿಬ್ಬಂದಿ ಸುಕುಮಾರ್ ಈ ದೇಶವನ್ನು ಆ ದೇವರೇ ಕಾಪಾಡಬೇಕು ಅಂತಾ ಬೇಸರ ವ್ಯಕ್ತಪಡಿಸಿದ್ದರು.
Advertisement
ಏರ್ ಇಂಡಿಯಾ ರವೀಂದ್ರ ಗಾಯಕ್ವಾಡ್ ವಿರುದ್ಧ ಎರಡು ಎಫ್‍ಐಆರ್ ಗಳನ್ನು ದಾಖಲಿಸಿದೆ. ಒಂದು ತಮ್ಮ ಸಿಬ್ಬಂದಿ ಹಲ್ಲೆ ಮಾಡಿದ್ದು ಮತ್ತು 40 ನಿಮಿಷ ವಿಮಾನ ಪ್ರಯಾಣಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ದೂರು ದಾಖಲಿಸಿದೆ.
WATCH: Shiv Sena MP Ravindra Gaikwad admits that he beat an Air India staff member with slippers,remains defiant pic.twitter.com/1ws5nYptkn
— ANI (@ANI_news) March 23, 2017
#WATCH: Sukumar, the Air India staff member who was beaten up by Shiv Sena MP R Gaikwad wants an FIR to be registered against Gaikwad. pic.twitter.com/6liOLOIjMg
— ANI (@ANI_news) March 23, 2017
Want cabin crew to directly inform me and my office about any passenger misbehaviour cases on board: Air India CMD Ashwani Lohani (file pic) pic.twitter.com/34Avn6fi0J
— ANI (@ANI_news) March 23, 2017
2 FIRs have been lodged against him, one by the victim SuKumar and one by Air India:Harinder,Delhi Airport Manager on Shiv Sena MP R Gaikwad pic.twitter.com/AxMkBJGIwA
— ANI (@ANI_news) March 23, 2017