ಮುಂಬೈ: ಹುಲಿ ಬೇಟೆಯಾಡಿ ಅದರ ಹಲ್ಲನ್ನು ಕುತ್ತಿಗೆಗೆ ಧರಿಸಿದ್ದೇನೆ ಎಂದು ಹೇಳುವ ಮೂಲಕ ಏಕನಾಥ್ ಶಿಂಧೆ (Eknath Shinde) ನೇತೃತ್ವದ ಶಿವಸೇನೆಯ (Shivasene) ಶಾಸಕರೊಬ್ಬರು ಹೇಳಿಕೊಂಡು ಇದೀಗ ವಿವಾದಕ್ಕೀಡಾಗಿದ್ದಾರೆ.
ಮಹಾರಾಷ್ಟ್ರದ ವಿದರ್ಭ ಪ್ರದೇಶದ ಬುಲ್ಧಾನಾ ಕ್ಷೇತ್ರವನ್ನು ಪ್ರತಿನಿಧಿಸುವ ಸಂಜಯ್ ಗಾಯಕ್ವಾಡ್ (Sanjay Gaikwad) ಅವರು ವಿವಾದಕ್ಕೀಡಾಗಿರರುವ ಶಾಸಕರಾಗಿದ್ದಾರೆ. ಗಾಯಕ್ವಾಡ್ ಅವರು 37 ವರ್ಷಗಳ ಹಿಂದೆ ಹುಲಿಯನ್ನು ಬೇಟೆಯಾಡಿರುವ ಬಗ್ಗೆ ನೀಡಿದ್ದ ಹೇಳಿಕೆಯ ವೀಡಿಯೋ ಇದೀಗ ವೈರಲ್ ಆಗಿದೆ.
Advertisement
Advertisement
ವೀಡಿಯೋದಲ್ಲಿ ಗಾಯಕ್ವಾಡ್ ಅವರ ಕುತ್ತಿಗೆಯಲ್ಲಿರುವ ಪೆಂಡೆಂಟ್ ಬಗ್ಗೆ ಕೇಳಲಾಗಿದೆ. ಈ ವೇಳೆ ಅವರು, ಇದು ಹುಲಿ ಹಲ್ಲು. 1987 ರಲ್ಲಿ ನಾನು ಹುಲಿ ಬೇಟೆಯಾಡಿ ಅದರ ಹಲ್ಲು ತೆಗೆದಿದ್ದೆ ಎಂದಿದ್ದಾರೆ. ಸದ್ಯ ಶಾಸಕರ ಈ ಹೇಳಿಕೆ ಭಾರೀ ಟೀಕೆಗೆ ಗುರಿಯಾಗಿದೆ. ಇದನ್ನೂ ಓದಿ: ಹಡಗು ಡಿಕ್ಕಿಯಾಗಿ ಕುಸಿದ ಸೇತುವೆ- ಬಸ್ ನದಿಗೆ ಉರುಳಿ ಇಬ್ಬರ ದುರ್ಮರಣ
Advertisement
ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನವಾದ ಶಿವ ಜಯಂತಿಯಂದು ಶಾಸಕರು ಈ ರೀತಿಯಾಗಿ ಹೇಳಿಕೆ ನೀಡಿದ್ದಾರೆ. ಇದನ್ನು ಶಿವಸೇನೆಯ ಪ್ರತಿಸ್ಪರ್ಧಿ ಉದ್ಧವ್ ಠಾಕ್ರೆ ಬಣದ ಮುಖವಾಣಿ ಸಾಮ್ನಾ ಆನ್‌ಲೈನ್‌ನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ದೇಶದಲ್ಲಿ ಹುಲಿ ಬೇಟೆಯನ್ನು 1987ರ ಹಿಂದೆಯೇ ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಲಾಗಿತ್ತು.