ಮುಂಬೈ: ಪತ್ರಾ ಚಾವ್ಲ್ ಭೂಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನಾ ಸಂಸದ ಸಂಜಯ್ ರಾವತ್ ಅವರನ್ನು ಆಗಸ್ಟ್ 22 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಹಿಂದೆ ಇಡಿ ಕಸ್ಟಡಿಯಲ್ಲಿದ್ದ ಶಿವಸೇನಾ ನಾಯಕನಿಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದು, ಅವರಿಗೆ ಅಗತ್ಯ ಔಷಧ ಒದಗಿಸಲು ಸಹ ನ್ಯಾಯಾಲಯವು ಅನುಮತಿಸಿದೆ. ಇದನ್ನೂ ಓದಿ: 725.7 ಕೋಟಿ ಡೀಲ್ – ಗುಜರಾತ್‌ನ ಫೋರ್ಡ್ ಘಟಕ ಖರೀದಿಸಿದ ಟಾಟಾ
Advertisement
Advertisement
ಇದಕ್ಕೂ ಮುನ್ನ ಆಗಸ್ಟ್ 1 ರಂದು ರಾವತ್ ಅವರನ್ನು ಇದೇ ಪ್ರಕರಣದಲ್ಲಿ ಆಗಸ್ಟ್ 4 ರವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಕಳುಹಿಸಲಾಗಿತ್ತು. ಅದೇ ದಿನ, ಬಂಧನದ ನಂತರ ಇಡಿ ಅವರನ್ನು ವಿಶೇಷ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಿತು.
Advertisement
ಇಡಿ ಅಧಿಕಾರಿಗಳು ಜುಲೈ 31 ರಂದು ಶಿವಸೇನಾ ನಾಯಕನ ಮನೆಯ ಮೇಲೆ ದಾಳಿ ನಡೆಸಿದ್ದರು. ಹಲವು ಗಂಟೆಗಳ ಕಾಲ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ನಂತರ ಆಗಸ್ಟ್ 1 ರಂದು ಅವರನ್ನು ಬಂಧಿಸಲಾಯಿತು. ಇದನ್ನೂ ಓದಿ: CWG 2022: ಇಂದು ಕೊನೆಯ ದಿನ – ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರುವ ತವಕದಲ್ಲಿ ಭಾರತ
Advertisement
ಈ ವರ್ಷ ಜೂನ್ 28 ರಂದು, 1,034 ಕೋಟಿ ರೂ. ಪತ್ರಾ ಚಾವ್ಲ್ ಭೂಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಸಂಜಯ್ ರಾವತ್ ಅವರಿಗೆ ಸಮನ್ಸ್ ನೀಡಿತ್ತು.