ಮುಂಬೈ: ಮಹಾರಾಷ್ಟ್ರ ಫಲಿತಾಂಶದಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಮುನ್ನಡೆ ಸಿಗುತ್ತಿದ್ದಂತೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿದ್ದ ಶಿವಸೇನಾ ಹಾಗೂ ಬಿಜೆಪಿ ನಡುವೆ ಸಿಎಂ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದೆ.
ಚುನಾವಣೆಯಲ್ಲಿ ಶಿವಸೇನಾ ಕಿಂಗ್ ಮೇಕರ್ ಆಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಮಾತನಾಡಿರುವ ಪಕ್ಷದ ವಕ್ತಾರ ಸಂಜಯ್ ರವಾತ್, ನಾವು ಮತ್ತು ಮಹಾರಾಷ್ಟ್ರದ ಜನತೆ ಆದಿತ್ಯ ಠಾಕ್ರೆ ಅವರನ್ನು ಮುಖ್ಯಮಂತ್ರಿಯಾಗಲು ಬಯಸುತ್ತೇವೆ ಎಂದು ಹೇಳಿದ್ದಾರೆ.
Advertisement
Sanjay Raut, Shiv Sena: I am going to meet Uddhav Ji. Number itne bure bhi nahi hain, aisa hota hai kabhi kabhi. Yes, we will definitely continue with the alliance. We have agreed upon a 50-50 formula. #MaharashtraAssemblyPolls2019 pic.twitter.com/WpLhJkmq8r
— ANI (@ANI) October 24, 2019
Advertisement
ಮಹಾರಾಷ್ಟ್ರದ ವೊರ್ಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಆದಿತ್ಯ ಠಾಕ್ರೆ ಮತ ಎಣಿಕೆಯಲ್ಲಿ ಮುಂದಿದ್ದು, ಗೆಲುವು ಪಡೆಯುವ ಸಾಧ್ಯತೆ ಹೆಚ್ಚಿದೆ. ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ರಾವತ್, ಮಹಾರಾಷ್ಟ್ರದಲ್ಲಿ ಶಿವಸೇನಾ ಹಾಗೂ ಬಿಜೆಪಿ ಮೈತ್ರಿ ಪಕ್ಷಗಳು ಸರ್ಕಾರ ರಚನೆ ಮಾಡಲಿದೆ. ಆದರೆ ಕಾಂಗ್ರೆಸ್ ಮತ್ತು ಎನ್‍ಸಿಪಿ ಮೈತ್ರಿಯೂ ಉತ್ತಮ ಫಲಿತಾಂಶವನ್ನು ಪಡೆಯುವ ನಿರೀಕ್ಷೆ ಇದೆ. ಇದು ನಮಗೆ ಸಂತಸ ತಂದಿದ್ದು, ಮೈತ್ರಿ 50-50 ಫಾರ್ಮುಲಾದೊಂದಿಗೆ ಮುಂದುವರಿಯಲಿದೆ. ರಾಜ್ಯದಲ್ಲೂ ಉತ್ತಮ ವಿರೋಧ ಪಕ್ಷದ ಇರುವುದು ಅಗತ್ಯವಿದ್ದು, ಖಂಡಿತ ಶಿವಸೇನಾ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಸ್ಪಷ್ಟಪಡಿಸಿದರು.
Advertisement
ಇತ್ತ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಕೂಡ ಮುನ್ನಡೆ ಸಾಧಿಸಿದ್ದು, ವಾರ್ಲಿ ಕ್ಷೇತ್ರದಲ್ಲಿಯೂ ಶಿವಸೇನೆಯ ಆದಿತ್ಯ ಠಾಕ್ರೆ ಭಾರೀ ಮುನ್ನಡೆ ಸಾಧಿಸಿದ್ದಾರೆ.
Advertisement
#WATCH Sanjay Raut, Shiv Sena: I am going to meet Uddhav Ji. Number itne bure bhi nahi hain, aisa hota hai kabhi kabhi. Yes, we will definitely continue with the alliance. We have agreed upon a 50-50 formula. #MaharashtraAssemblyPolls2019 pic.twitter.com/ae0bJUNI8q
— ANI (@ANI) October 24, 2019