ಚಿಕ್ಕೋಡಿ: ವೇಷ ಬದಲಿಸಿಕೊಂಡು ಗಡಿ ನುಗ್ಗಲು ಪ್ರಯತ್ನಿಸಿದ್ದ ಶಿವಸೇನೆಯ ನಾಯಕನ ಯೋಜನೆಯನ್ನು ಕರ್ನಾಟಕ ಪೊಲೀಸರು ವಿಫಲಗೊಳಿಸಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕರ್ನಾಟಕ (Karnataka) ಹಾಗೂ ಮಹಾರಾಷ್ಟ್ರದ (Maharashtra) ಗಡಿಯ ಕೋಗನೋಳಿ ಚೆಕ್ ಪೋಸ್ಟ್ ಬಳಿ ನಡೆದಿದೆ.
ಜನಸಾಮಾನ್ಯರಂತೆ ಗೂಡ್ಸ್ ವಾಹನದಲ್ಲಿ ಪ್ರಯಾಣಿಸುವ ಮೂಲಕ ಕೊಲ್ಲಾಪುರ ಉದ್ಧವ್ ಠಾಕ್ರೆ ಬಣದ ಕೊಲ್ಲಾಪುರ ಶಿವಸೇನೆ ಅಧ್ಯಕ್ಷ ವಿಜಯ ದೇವನೆ ಯತ್ನಿಸಿದ್ದ. ಆದರೆ ನಿಪ್ಪಾಣಿ ಬಳಿಯ ಕೋಗನೋಳಿ ಚೆಕ್ ಪೋಸ್ಟ್‌ನಲ್ಲಿ ತಡೆದ ನಿಪ್ಪಾಣಿ ಸಿಪಿಐ ಸಂಗಮೇಶ ಶಿವಯೋಗಿ ಅವರ ತಂಡ ವಾಪಸ್ ಕಳುಹಿಸಿದ್ದಾರೆ. ಇದನ್ನೂ ಓದಿ: ಹೊಸ ವರ್ಷಾಚರಣೆಗೆ ನ್ಯೂ ರೂಲ್ಸ್- ಮಧ್ಯರಾತ್ರಿ 1 ಗಂಟೆವರೆಗಷ್ಟೇ ಸೆಲಬ್ರೇಷನ್!
ಬೆಳಗಾವಿಯಲ್ಲಿ ಎಂಇಎಸ್ ಮಹಾಮೇಳಕ್ಕೆ ಬ್ರೇಕ್ ಹಿನ್ನೆಲೆಯಲ್ಲಿ MESನಿಂದ ಇಂದು ಕೊಲ್ಲಾಪುರವರೆಗೆ ಆಯೋಜಿಸಿದ್ದ ಬೈಕ್ ರ‍್ಯಾಲಿಯಲ್ಲಿ ಭಾಗವಹಿಸಲು ಬೆಳಗಾವಿಗೆ ಬರಲು ವಿಜಯ ದೇವನೆ ಯತ್ನಿಸಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ ಎಂಇಎಸ್ ಪುಂಡರು ಮತ್ತೆ ನಾಡದ್ರೋಹಿ ಘೋಷಣೆ ಕೂಗಿದ್ದಾರೆ. ಬೆಳಗಾವಿಯ ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನವನದಲ್ಲಿ ಇದ್ರೆ ನಾವು ಮಹಾರಾಷ್ಟ್ರದಲ್ಲೇ ಇರ್ತೇವೆ ಇಲ್ಲದಿದ್ದರೆ ಜೈಲ್‍ನಲ್ಲಿ ಇರುತ್ತೇವೆ ಅಂದಿದ್ದಾರೆ. ಇದನ್ನೂ ಓದಿ: ಕೊರೊನಾ ಪಾಸಿಟಿವ್ ಎಂದಾಕ್ಷಣ ನಾವು ಚೀನಾಗೆ ಹೋಲಿಕೆ ಮಾಡೋದು ಬೇಡ: ಸುಧಾಕರ್