ಲೂಧಿಯಾನ: ಶಿವಸೇನಾ ಮುಖಂಡರೊಬ್ಬರ (Shivsena Leader) ಮೇಲೆ ನಾಲ್ವರು ಕತ್ತಿಗಳಿಂದ ಹಲ್ಲೆ ನಡೆಸಿ, ಗಂಭೀರವಾಗಿ ಗಾಯಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡಿರುವ ಶಿವಸೇನಾ ಮುಖಂಡರನ್ನು ಸಂದೀಪ್ ಥಾಪರ್ (Sandeep Thapar) ಎಂದು ಗುರುತಿಸಲಾಗಿದೆ. ಸಂದೀಪ್ ಥಾಪರ್ ಅವರು ಟ್ರಸ್ಟ್‌ನ ಸಂಸ್ಥಾಪಕ-ಅಧ್ಯಕ್ಷ ರವೀಂದರ್ ಅರೋರಾ ಅವರ ನಾಲ್ಕನೇ ಪುಣ್ಯಸ್ಮರಣೆಯ ಸಮಾರಂಭದಲ್ಲಿ ಭಾಗವಹಿಸಿ ವಾಪಸ್ ಆಗುತ್ತಿದ್ದರು. ಈ ವೇಳೆ ನಡುರಸ್ತೆಯಲ್ಲಿಯೇ ನಾಲ್ವರು ನಿಹಾಂಗ್ ಗಳು ಕತ್ತಿಗಳಿಂದ ಹಲ್ಲೆ ನಡೆಸಿದ್ದಾರೆ.
ಮಾರಾಣಾಂತಿಕ ಹಲ್ಲೆಯಿಂದಾಗಿ ಥಾಪರ್ ಅವರ ತಲೆಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ದಾಳಿ ನಡೆದಾಗ ಥಾಪರ್ ಅವರ ಭದ್ರತಾ ಸಿಬ್ಬಂದಿ ಸ್ಥಳದಲ್ಲಿಯೇ ಇದ್ದರು. ಇದನ್ನೂ ಓದಿ: ತನಗೆ ಕಚ್ಚಿದ ಹಾವಿಗೆ ತಾನೂ ಮೂರು ಬಾರಿ ಕಚ್ಚಿ ನಂತ್ರ ಸಾಯಿಸಿದ!
ದಾಳಿಯ ಬಳಿಕ ನಿಹಾಂಗ್‌ಗಳು ಸ್ಥಳದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಇನ್ಸ್‌ಪೆಕ್ಟರ್ ಗುರ್ಜಿತ್ ಸಿಂಗ್ ತಿಳಿಸಿದ್ದಾರೆ. ಘಟನೆಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಸದ್ಯ ಮಾರಣಾಂತಿಕ ಹಲ್ಲೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸಂವೇದನಾ ಟ್ರಸ್ಟ್ ರೋಗಿಗಳಿಗೆ ಮತ್ತು ಸ್ಮಶಾನಕ್ಕೆ ಶವಗಳನ್ನು ಸಾಗಿಸಲು ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ಒದಗಿಸುತ್ತದೆ. ನಿಹಾಂಗ್‌ಗಳು ಯೋಧ ಸಿಖ್ ಪಂಥಕ್ಕೆ ಸೇರಿದವರಾಗಿದ್ದು, ಅವರು ಸಾಮಾನ್ಯವಾಗಿ ನೀಲಿ ನಿಲುವಂಗಿಯಲ್ಲಿ ಸಾಂಪ್ರದಾಯಿಕ ಆಯುಧಗಳನ್ನು ಹೊತ್ತಿರುತ್ತಾರೆ.