ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷಿತ ಫಲಿತಾಂಶ ಲಭಿಸಿಲ್ಲ. ಇತ್ತ ಶಿವಸೇನೆ ಹೆಚ್ಚಿನ ಸ್ಥಾನ ಪಡೆದಿದ್ದು, ಪರಿಣಾಮ ಶಿವಸೇನೆ ವರಿಷ್ಠ ಉದ್ಧವ್ ಠಾಕ್ರೆ 50-50ರ ಫಾರ್ಮುಲಾಗೆ ಪಟ್ಟು ಹಿಡಿದಿದ್ದಾರೆ.
ಸಿಎಂ ಬಿಎಸ್ ಯಡಿಯೂರಪ್ಪ ಅವರೊಂದಿಗೆ 2008 ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ನಡೆಸಿದ 50-50 ಫಾರ್ಮುಲಾವನ್ನೇ ಶಿವಸೇನೆಯೂ ಪ್ರಯೋಗಿಸಿದ್ದು, ಮೊದಲಿಗೆ ತಾವೇ ಸಿಎಂ ಆಗಲು ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದಿದೆ.
Advertisement
Shiv Sena chief Uddhav Thackeray: The 50-50 formula was decided. Discussions should be held and then it should be decided that who would be the Chief Minister (of Maharashtra). pic.twitter.com/YuSvKDZfhe
— ANI (@ANI) October 24, 2019
Advertisement
ಚುನಾವಣಾ ಸಮಯದಲ್ಲೇ ಶಿವಸೇನೆ ಪಕ್ಷದ ಅಭ್ಯರ್ಥಿಗೆ ರಾಜ್ಯದ ಉಪಮುಖ್ಯಮಂತ್ರಿ ಅಥವಾ ಮುಖ್ಯಮಂತ್ರಿ ಸ್ಥಾನ ಲಭಿಸುವ ಬಗ್ಗೆ ಹಲವು ಶಿವಸೇನೆ ನಾಯಕರು ಬಹಿರಂಗ ಹೇಳಿಕೆ ನೀಡಿದ್ದರು. ಅಲ್ಲದೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಉದ್ಧವ್ ಠಾಕ್ರೆ, ಭವಿಷ್ಯದಲ್ಲಿ ಶಿವ ಸೈನಿಕನೊಬ್ಬ ಮುಖ್ಯಮಂತ್ರಿಯಾಗಲಿದ್ದಾನೆ ಎಂದು ಹೇಳಿದ್ದರು. ಅಲ್ಲದೇ ಇದೇ ಮೊದಲ ಬಾರಿಗೆ ಠಾಕ್ರೆ ಕುಟುಂಬದ ಕುಡಿ ಆದಿತ್ಯ ರಾಕ್ರೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಪಡೆದಿದ್ದಾರೆ.
Advertisement
ಸದ್ಯದ ಮಹಾರಾಷ್ಟ್ರ ಚುನಾವಣೆಯ ಫಲಿತಾಂಶವನ್ನು ಗಮನಿಸಿದರೆ ಯಾವುದೇ ಪಕ್ಷ ಬಹುಮತ ಗಳಿಸುವ ಸಾಧ್ಯತೆ ಇಲ್ಲ. ಪರಿಣಾಮ ಚುನಾವಣಾ ಪೂರ್ವ ಮೈತ್ರಿಯಂತೆ ಬಿಜೆಪಿ ಹಾಗೂ ಶಿವಸೇನೆ ಸರ್ಕಾರ ರಚಿಸುವ ಹೇಳಿಕೆ ನೀಡುತ್ತಿದ್ದರು ಕೂಡ, ಹೊಸದಾಗಿ 50-50 ಫಾರ್ಮುಲಾಗೆ ಶಿವಸೇನೆ ಬೇಡಿಕೆ ಮುಂದಿಟ್ಟುವುದು ಹೊಸ ಬೆಳವಣಿಗೆಗಳಿಗೆ ಕಾರಣವಾಗುವ ನಿರೀಕ್ಷೆ ಇದೆ. ಈ ಕುರಿತು ಬಿಜೆಪಿಯೊಂದಿಗೆ ಮಾತುಕತೆಗೆ ಮುಂದಾಗಿರುವ ಶಿವಸೇನೆ ಆ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿದೆ.
Advertisement
Shiv Sena chief Uddhav Thackeray: Being his father I am proud of him. I am happy that the people gave him so much love. #MaharashtraAssemblyPolls https://t.co/gjKnl9gFnS pic.twitter.com/K3QEX7AHO5
— ANI (@ANI) October 24, 2019
ಒಂದೊಮ್ಮೆ ಶಿವಸೇನೆಯ ಬೇಡಿಕೆಯನ್ನು ಬಿಜೆಪಿ ಒಪ್ಪದಿದ್ದರೆ, ಶಿವಸೇನೆ ಮತ್ತು ಎನ್‍ಸಿಪಿ ಅಥವಾ ಬಿಜೆಪಿ ಮತ್ತು ಎನ್‍ಸಿಪಿ ಮೈತ್ರಿ ನಡೆಸಿರುವ ಸಾಧ್ಯತೆ ಬಗ್ಗೆಯೂ ರಾಜಕೀಯ ವಲಯದಿಂದ ವಿಶ್ಲೇಷಣೆಗಳು ಕೇಳಿ ಬಂದಿದೆ. ಆದರೆ ಎನ್‍ಸಿಪಿ ನಾಯಕರು ಮಾತ್ರ ತಾವು ವಿರೋಧಿ ಪಕ್ಷದ ಸ್ಥಾನದಲ್ಲೇ ಇರುತ್ತೇವೆ ಎಂದು ಹೇಳಿದ್ದಾರೆ.
ಚುನಾವಣೆಯಲ್ಲಿ 220ಕ್ಕೂ ಹೆಚ್ಚು ಸ್ಥಾನ ಶಿವಸೇನೆ ಹಾಗೂ ಬಿಜೆಪಿ ಮೈತ್ರಿ ಗೆಲುವು ಪಡೆಯಲಿದೆ ಎಂದು ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಈ ನಿರೀಕ್ಷೆ ಸುಳ್ಳಾಗಿದೆ. 2014ರಲ್ಲಿ 122 ಸ್ಥಾನಗಳಲ್ಲಿ ಗೆಲುವು ಪಡೆದಿದ್ದ ಮೈತ್ರಿ ಪಕ್ಷಗಳು ಈ ಬಾರಿ ಅಷ್ಟು ಸ್ಥಾನಗಳನ್ನು ಗೆಲ್ಲುವುದು ಅನುಮಾನ ಮೂಡಿಸಿದೆ.
Maharashtra CM Devendra Fadnavis: 15 independent MLAs have contacted me and they are ready to come with us. Others may also come but these 15 will come with us. Most of them are BJP or Shiv Sena rebels. #MaharashtraAssemblyPolls pic.twitter.com/zHy6iym55s
— ANI (@ANI) October 24, 2019
ಸದ್ಯ ಚುನಾವಣೆಯ ಫಲಿತಾಂಶ ಬಗ್ಗೆ ಉದ್ಧವ್ ಠಾಕ್ರೆ ಮಾತನಾಡಿದ್ದು, ನಮ್ಮ ಮೇಲೆ ಮಹಾರಾಷ್ಟ್ರದ ಜನತೆ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ. ಸರ್ಕಾರ ರಚನೆ ಬಗ್ಗೆ ಯಾವುದೇ ಅನುಮಾನ ಬೇಡ. 50-50ರ ಫಾರ್ಮುಲಾದಲ್ಲಿ ಚುನಾವಣಾ ಪೂರ್ವ ಮೈತ್ರಿಯಂತೆ ಸರ್ಕಾರ ರಚನೆಯಾಗುತ್ತದೆ ಎಂದು ಹೇಳಿದ್ದಾರೆ.