ಭೋಪಾಲ್: ಪ್ರೇಮಿಗಳ ದಿನದಂದು ಭೋಪಾಲ್‍ನಲ್ಲಿ ಪ್ರೇಮಿಗಳನ್ನು ತಡೆಯಲು ಶಿವಸೇನೆ ಸಿದ್ಧತೆ ನಡೆಸಿದೆ. ಇದಕ್ಕಾಗಿ ಲಾಠಿಗಳಿಗೆ ಪೂಜೆ ಮಾಡಲಾಗಿದೆ. ವ್ಯಾಲೆಂಟೈನ್ಸ್ ಡೇ ಆಚರಿಸಿದರೆ ಮದುವೆ ಮಾಡಿ ಡೊಳ್ಳು ಕುಣಿತದೊಂದಿಗೆ ಮೆರವಣಿಗೆ ಮಾಡುತ್ತೇವೆ ಎಂದು ಶೀವಸೆನೆ ಕಾರ್ಯಕರ್ತರು ಹೇಳಿದ್ದಾರೆ.
Advertisement
ಯಾರಾದರೂ ಪ್ರೇಮಿಗಳು ಪಾರ್ಕ್‍ನಲ್ಲಿ ಕಂಡುಬಂದರೆ, ಲಾಠಿಯಿಂದ ಅವರನ್ನು ದಂಡಿಸುತ್ತೇವೆ. ಪ್ರೀತಿಯ ಜೋಡಿಗಳಿಗೆ ಪಾಠ ಕಲಿಸಲು ಶಿವಸೇನೆ ಕಾರ್ಯಕರ್ತರು ಕಾಳಿಕಾ ಶಕ್ತಿ ಪೀಠದ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರಲ್ಲದೆ, ಪ್ರೇಮಿಗಳ ದಿನವನ್ನು ಆಚರಿಸುವ ಯುವಕರಿಗೆ ಎಚ್ಚರಿಕೆ ನೀಡಿದರು. ಇದನ್ನು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರತೀಕ ಎಂದು ಕರೆದಿರುವ ಶಿವಸೇನೆ ವ್ಯಾಲೆಂಟೈನ್ಸ್ ಡೇ ವಿರೋಧಿಸುವುದಾಗಿ ಶಿವಸೇನ ಕಾರ್ಯಕರ್ತರು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿಗೆ ಭದ್ರತೆ ನೀಡಲು ಸಾಧ್ಯವಾಗದ ಚನ್ನಿ ಪಂಜಾಬ್‍ನ್ನು ಹೇಗೆ ಕಾಪಾಡಿಕೊಳ್ಳುವರು: ಅಮಿತ್ ಶಾ
Advertisement
Advertisement
ಭೋಪಾಲ್‍ನಲ್ಲಿ ಶಿವಸೇನೆಯು ಪ್ರೇಮಿಗಳ ದಿನದಂದು ಯಾವುದೇ ಕಾರ್ಯಕ್ರಮವನ್ನು ಆಯೋಜಿಸದಂತೆ ಪಬ್, ರೆಸ್ಟೋರೆಂಟ್, ಹೋಟೆಲ್‍ಗಳಿಗೆ ಎಚ್ಚರಿಕೆ ನೀಡಿದೆ. ದೇಶದಲ್ಲಿ ಶಿವಸೇನೆ, ಭಜರಂಗದಳ ಸೇರಿದಂತೆ ಹಲವು ಸಂಘಟನೆಗಳು ವ್ಯಾಲೆಂಟೈನ್ಸ್ ಡೇ ಆಚರಿಸುವುದನ್ನು ವಿರೋಧಿಸುತ್ತಿವೆ ಎಂದು ಹೇಳಿದ್ದಾರೆ.
Advertisement
ಪ್ರೇಮಿಗಳ ದಿನವನ್ನು ವಿರೋಧಿಸಿದ ಶಿವಸೇನೆ ಕಾರ್ಯಕರ್ತರು, ನಾಳೆ ಲಾಠಿಗಳೊಂದಿಗೆ ನಗರದ ವಿವಿಧ ಭಾಗಗಲ್ಲಿ ಸುತ್ತಲಿದ್ದೇವೆ. ಪ್ರೇಮಿಗಳ ದಿನ ಆಚರಿಸುವುದು ಕಂಡು ಬಂದರೆ ಯುವಕ, ಯುವತಿಯರಿಗೆ ಸ್ಥಳದಲ್ಲೇ ಮದುವೆ ಮಾಡಿ ಡೊಳ್ಳು ಕುಣಿತದೊಂದಿಗೆ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.