ಮುಂಬೈ: ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರ ನಿಷ್ಠಾವಂತ ಅಧಿಕಾರಿ ಮಾಜಿ ಸಚಿವ ಉದಯ್ ಸಮಂತ್ ಅವರ ಕಾರಿನ ಮೇಲೆ ಕೆಲವು ಶಿವಸೈನಿಕರು ದಾಳಿ ಮಾಡಿರುವ ಘಟನೆ ಪುಣೆಯ ಕತ್ರಾಜ್ ಚೌಕ್ ಬಳಿ ನಡೆದಿದೆ.
ಏಕನಾಥ್ ಶಿಂಧೆ ಅವರ ಬಣದ 40 ಬಂಡಾಯ ಶಿವಸೇನೆ ಶಾಸಕರಲ್ಲಿ ಸಮಂತ್ ಅವರು ಒಬ್ಬರು. ಮಂಗಳವಾರ ರಾತ್ರಿ ಗುಂಪೊಂದು ಸಮಂತ್ ಅವರ ವಾಹನವನ್ನು ಸುತ್ತುವರಿಯಲು ಪ್ರಯತ್ನಿಸಿದ್ದು, ಘೋಷಣೆಗಳನ್ನು ಕೂಗುಲು ಪ್ರಾರಂಭಿಸಿದ್ದಾರೆ.
Advertisement
Advertisement
ಉದಯ್ ಸಮಂತ್ ಅವರ ಬೆಂಗಾವಲು ಪಡೆ ಶಿಂಧೆ ಅವರು ನಡೆಸುತ್ತಿದ್ದ ಕಾರ್ಯಕ್ರಮ ನಡೆಯುತ್ತಿರುವ ಸ್ಥಳದ ಬಳಿ ಹಾದು ಹೋಗುತ್ತಿರುವ ವೇಳೆ ಶಿವಸೈನಿಕರು ಅವರ ಕಾರನ್ನು ನೋಡಿ ಘೋಷಣೆಗಳನ್ನು ಕೂಗಲಾರಂಭಿಸಿದರು. ಕೆಲವರು ಕಾರಿನ ಗಾಜುಗಳನ್ನು ಹೊಡೆಯಲು ಪ್ರಾರಂಭ ಮಾಡಿದರು. ಇದನ್ನೂ ಓದಿ: ಹಿಜಬ್ ನಿಷೇಧದ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ವಿಳಂಬ: ಸಿಜೆಐ
Advertisement
Advertisement
ದಾಳಿಯ ನಂತರ, ಸಮಂತ್ ಅವರು ಪೊಲೀಸ್ ಠಾಣೆಗೆ ದೂರು ದಾಖಲಿಸಲು ಕೊತ್ರುಡ್‍ಗೆ ತೆರಳಿದ್ದು, ಕೆಲವು ಶಿವಸೈನಿಕರು ನನ್ನ ಕಾರಿನ ಮೇಲೆ ದಾಳಿ ಮಾಡಿದರು. ನೀವು ಅವರನ್ನು ಪತ್ತೆ ಮಾಡಿ ಎಂದು ದೂರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಇದನ್ನೂ ಓದಿ: ಕೋವಿಡ್-19 ಲಸಿಕಾಕರಣದ ಬಳಿಕ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ: ಅಮಿತ್ ಶಾ
ಈ ಘಟನೆ ಕುರಿತು ಏಕನಾಥ್ ಶಿಂಧೆ ಅವರನ್ನು ಪ್ರಶ್ನಿಸಿದಾಗ, ಇಂತಹ ಹೇಡಿಗಳ ದಾಳಿ ಮತ್ತು ಕಲ್ಲು ತೂರಾಟದಿಂದ ಓಡಿಹೋಗುವುದು ಮಾನವ ಸಹಜವಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಎಲ್ಲ ನಿಯಮಗಳನ್ನು ಪಾಲಿಸುವುದು ನಮ್ಮ ಜವಾಬ್ದಾರಿಯಾಗಿದೆ. ಯಾರಾದರೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಯತ್ನಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ಕೊಟ್ಟಿದ್ದಾರೆ.