‘ಶಿಷ್ಯ’ (Shishya Film) ಚಿತ್ರದ ಮೂಲಕ ಜನಪ್ರಿಯತೆ ಗಳಿಸಿದ್ದ ದೀಪಕ್, ಫ್ಯಾಷನ್ ಡಿಸೈನರ್ ಬೃಂದಾ (Brunda Gowda) ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನವಜೋಡಿಗೆ ಆಪ್ತರು, ಗಣ್ಯರು, ಅಭಿಮಾನಿಗಳು ಶುಭಕೋರಿದ್ದಾರೆ.
ಇತ್ತೀಚೆಗೆ ಬೃಂದಾ ಜೊತೆ ದೀಪಕ್ (Actor Deepak) ಸರಳವಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಇದೀಗ ಬೆಂಗಳೂರಿನಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ದೀಪಕ್-ಬೃಂದಾ ಮದುವೆಯಾಗಿದ್ದಾರೆ. ಇದು ಗುರುಹಿರಿಯರು ಸಮ್ಮತಿಸಿದ ಅರೇಂಜ್ ಮ್ಯಾರೇಜ್ ಆಗಿದೆ.
ದೀಪಕ್-ಬೃಂದಾ ಮದುವೆ ಆರತಕ್ಷತೆಗೆ ಹೆಚ್.ಡಿ ಕುಮಾರಸ್ವಾಮಿ, ಪ್ರಜ್ವಲ್ ದೇವರಾಜ್ ಸೇರಿದಂತೆ ಅನೇಕರು ಭಾಗವಹಿಸಿ ನವಜೋಡಿಗೆ ಶುಭಕೋರಿದ್ದರು. ಇದನ್ನೂ ಓದಿ:‘ಯುವರಾಜ’ ನಿಖಿಲ್ ಹುಡುಕಿಕೊಂಡು ಸೆಟ್‌ಗೆ ಬಂದ ‘ಭೀಮ’
ಮಾಗಡಿ, ಬೆಳ್ಳಿ, 18ನೇ ಕ್ರಾಸ್, ಏಕ್ ಲವ್ ಯಾ, ವಿಲನ್, ಶಿಷ್ಯ ಸೇರಿದಂತೆ ಹಲವು ಸಿನಿಮಾಗಳಲ್ಲಿ ದೀಪಕ್ ನಟಿಸಿದ್ದಾರೆ. ನಟನಾಗಿ ಮತ್ತು ಖಳನಾಟನಾಗಿ ಸೈ ಎನಿಸಿಕೊಂಡಿದ್ದಾರೆ.