ಉಡುಪಿ: ವಿಷಪ್ರಾಶನ ಶಂಕೆ ಹಿನ್ನೆಲೆಯಲ್ಲಿ ಶಿರೂರು ಮಠದ ಲಕ್ಷ್ಮೀವರ ಶ್ರೀಗಳ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಶ್ರೀಗಳ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ ಈ ಬಗ್ಗೆ ದೂರು ನಿಡಿದ್ದು, ಸಾವಿನ ಬಗ್ಗೆ ಸಂಶಯವಿದೆ. ಹೀಗಾಗಿ ಪೊಲೀಸರು ಸಂಪೂರ್ಣ ತನಿಖೆ ನಡೆಸಬೇಕೆಂದು ದೂರಿನಲ್ಲಿ ಆಗ್ರಹಿಸಿದ್ದಾರೆ.
Advertisement
ಸಾವಿಗೆ ಬೇರೆ ಕಾರಣಗಳಿದೆಯಾ? ವಿಷಪ್ರಾಶನ ಆದಂತಹ ಕೆಲವು ಸಂಶಯಗಳನ್ನು ಕೆಎಂಸಿಯ ವೈದ್ಯರು ಹೇಳಿರುತ್ತಾರೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಬೇಕು. ಇದೊಂದು ಅನುಮಾನಸ್ಪದವಾದ ಸಾವಾಗಿದ್ದು, ಹೀಗಾಗಿ ಈ ಸಾವಿಗೆ ನಿಖರ ಕಾರಣವೇನೆಂದು ನಮಗೆ ಪೊಲೀಸ್ ತನಿಖೆಯ ಮೂಲಕ ತಿಳಿದು ಬರಬೇಕು ಅಂತ ದೂರಿನಲ್ಲಿ ತಿಳಿಸಿದ್ದಾರೆ.
Advertisement
ಶ್ರೀಗಳ ಎರಡು ಪರ್ಯಾಗಳಲ್ಲಿ ಲಾತವ್ಯ ಆಚಾರ್ಯ ಅವರೇ ಮಠದ ದಿವಾನರಾಗಿದ್ದರು. ಹೀಗಾಗಿ ಎರಡು ವರ್ಷಗಳ ಕಾಲ ಲಾತವ್ಯ ಅವರೇ ಮಠದ ಎಲ್ಲಾ ವ್ಯವಸ್ಥೆಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಹೊಂದಿದ್ದರು. ಅವರೇ ಈಗ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Advertisement
ಶಿರೂರು ಮೂಲ ಮಠದಲ್ಲಿ ಸ್ವಾಮೀಜಿಗಳು ನೆಲೆಸುತ್ತಿದ್ದರು. ಇದು ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುತ್ತದೆ. ಹೀಗಾಗಿ ಅಲ್ಲಿ ಕೇಸ್ ದಾಖಲು ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ತನಿಖೆ ಮಣಿಪಾಲ ಠಾಣೆಯಲ್ಲಿ ನಡೆದಿದೆ. ಹೀಗಾಗು ಮಣಿಪಾಲ ಮತ್ತು ಹಿರಿಯಡ್ಕ ಪೊಲಿಸರ ಜಂಟಿಯಾಗಿ ಕಾರ್ಯಾಚರಣೆ ಮಾಡುವ ಸಾಧ್ಯತೆಗಳಿವೆ.