ಕಾರವಾರ: ಉಡುಪಿಯ ಶಿರೂರು ಶ್ರೀ ಮೃತಪಟ್ಟ ಐದು ದಿನಗಳಲ್ಲಿ ಮಠದಲ್ಲಿ ನಾಲ್ಕೂವರೆ ಲಕ್ಷ ರೂ. ಮದ್ಯ ಸಿಕ್ಕಿದೆ ಎಂಬುದು ಅಸಂಬದ್ಧ. ನಾಲ್ಕೂವರೆ ಲಕ್ಷದಷ್ಟು ಮದ್ಯ ಇಟ್ಟುಕೊಳ್ಳಲು ಅದೇನು ಬಾರ್ ಆಂಡ್ ರೆಸ್ಟೋರೆಂಟ್ ಅಲ್ಲ. ಇದು ಸಾಧ್ಯವೇ ಇಲ್ಲ ಅಂತ ಬಾರ್ಕೂರು ಮಠದ ಪೀಠಾಧಿಪತಿ ಸಂತೋಷ್ ಗುರೂಜಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಅಂಕೋಲದ ಬಾಸ್ಗೋಡಿನಲ್ಲಿ ಪಹರೆ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉಡುಪಿಯ ಶಿರೂರು ಶ್ರೀ ವಿಧಿವಶರಾದ ಮೇಲೆ ಅವರ ಮೇಲೆ ಇರುವ ಹಗೆತನ ಕಡಿಮೆಯಾಗಿಲ್ಲ. ಶ್ರೀಗಳು ಸತ್ತಮೇಲೂ ಆರೋಪ ನಡೆಯುತ್ತಿದೆ ಎಂದರೆ ಅವರು ಸಾಯುವ ಮುಂಚೆ ಬೇರೆ ಶಕ್ತಿ ಕೆಲಸ ಮಾಡಿದೆ. ಯಾವ ಮಠದವರೂ ಮಾಡಿದ್ದಾರೋ ಅಥವಾ ಬೇರೆಯವರು ಮಾಡಿದ್ದಾರೋ ಗೊತ್ತಿಲ್ಲ. ಒಂದು ಸಮುದಾಯದವರಿಗೆ ಗುರುಗಳಾಗಿರುವ ಸ್ವಾಮೀಜಿ ಅವರ ಹತ್ಯೆಯಾಗಿದೆ. ಪೊಲೀಸರಿಗೆ ಅಷ್ಟ ಮಠಗಳು ಸಹಕಾರ ನೀಡಬೇಕೇ ವಿನಾಃ ಬೇರೆ ರೀತಿ ಮಾಡಬಾರದು ಅಂತ ಹಳಿದ್ರು.
Advertisement
Advertisement
ರಮ್ಯ ಶಟ್ಟಿಯನ್ನು ಅಪರಾಧಿ ಎಂದು ಬಿಂಬಿತ ಮಾಡಲಾಗಿದೆ. ಆಕೆ ಆರೀತಿ ಇಲ್ಲ. ಆಕೆ ಒಂದು ಹೆಣ್ಣುಮಗಳಾಗಿ ಹೇಳಬೇಕೆಂದರೆ ಚಿನ್ನದ ಮೊಟ್ಟೆ ಇಡುವ ಕೋಳಿಯನ್ನ ಕುತ್ತಿಗೆ ಕೊಯ್ದು ಹಾಕುವಷ್ಟು ದಡ್ಡಿಯಲ್ಲ. ಮಠದಲ್ಲಿ ನಾಲ್ಕೂವರೆ ಲಕ್ಷದಷ್ಟು ಮದ್ಯ ಇಟ್ಟುಕೊಳ್ಳಲು ಅದೇನು ಬಾರ್ ಆಂಡ್ ರೆಸ್ಟೋರೆಂಟ್ ಅಲ್ಲ. ಇದು ಸಾಧ್ಯವೇ ಇಲ್ಲ. ಗಡಿಬಿಡಿಯಲ್ಲಿ ಎಲ್ಲರೂ ತಂದು ಅಲ್ಲಿ ಇಟ್ಟಿದ್ದಾರೆ. ಎಲ್ಲರೂ ಅಲ್ಲಿ ಬಾಟಲಿ ಇಡಲು ಹೋಗಿ ಅಸಂಬದ್ಧವಾಗಿದೆ. ಮಠದಲ್ಲಿ ತುಳಸಿದಳ ಬೀಳಿಸುವುದಕ್ಕಿಂತ ಹೆಚ್ಚಾಗಿ ಬಾಟಲಿ ಬೀಳಿಸಿದ್ದು, ಅವರನ್ನು ದೂಷಣೆ ಮಾಡುವುದಕ್ಕಿಂತ ಹೆಚ್ಚಾಗಿ ಹಿಂದೂ ಧರ್ಮದ ಮೇಲೆ ಬಿದ್ದಿರುವ ಆಘಾತ ಎಂದು ಟೀಕಿಸಿದ್ರು.
Advertisement
ಪೇಜಾವರ ಶ್ರೀ ವಿರುದ್ಧ ಕಿಡಿ:
ಪೇಜಾವರ ಶ್ರೀಗಳು ಶಿರೂರು ಶ್ರೀಗಳನ್ನು ಸ್ವಾಮಿಗಳೇ ಅಲ್ಲ ಎಂದಿದ್ದಾರೆ. ಮೊನ್ನೆ ನಡೆದ ಪರ್ಯಾಯದಲ್ಲಿ ಅವರನ್ನು ಯಾಕೆ ಕೂರಿಸಿದ್ದರು? 43 ವರ್ಷ ಪೀಠದಲ್ಲಿ ಶಿರೂರು ಶ್ರೀಗಳಿದ್ದರು ಇಲ್ಲಿವರೆಗೆ ಯಾಕೆ ಪೇಜಾವರ ಶ್ರೀಗಳು ಹೇಳಲಿಲ್ಲ. ಎಲ್ಲರೂ ಒಂದಲ್ಲ ಒಂದು ದಿನ ತಪ್ಪು ಮಾಡಿರಬಹುದು. ಆದರೇ ವಿಧಿವಶರಾದ ಮೇಲೆ ಎತ್ತಿ ಆಡುವುದು ಸೌಜನ್ಯವಲ್ಲ. ಶಿರೂರು ಶ್ರೀಗಳನ್ನು ಮುಂಚೆಯೇ ಸರಿಮಾಡಬೇಕಿತ್ತು. ಪೀಠದಿಂದ ಇಳಿಸಬೇಕಿತ್ತು. ಒತ್ತಡ ಹೇರಬೇಕಿತ್ತು. ಆಜ್ಞೆ ಹೊರಡಿಸಬಹುದಿತ್ತು. ಆದರೇ ಈಗ ಸನ್ಯಾಸಿಯಲ್ಲ ಎನ್ನುವುದು ಸರಿಯಲ್ಲ ಅಂದು ಪೇಜಾವರ ಶ್ರೀ ವಿರುದ್ಧ ಕಿಡಿಕಾರಿದ್ರು.
Advertisement
ಕುಡುಕ ಅಂದ ಇತಿಹಾಸವೇ ಇಲ್ಲ:
ಇಲ್ಲಿಯವರೆಗೆ ಅವರು ಬದುಕಿದ್ದಾಗ ಶಿರೂರು ಶ್ರೀ ಕುಡುಕ ಎಂದು ಹೇಳಿದ ಇತಿಹಾಸ ಉಡುಪಿಯಲ್ಲಿಲ್ಲ. ಶಿರೂರು ಶ್ರೀಗಳಿಗೆ ಆರೋಗ್ಯ ಸರಿಯಿಲ್ಲದ ಕಾರಣ ಪಟ್ಟದ ದೇವರನ್ನು ಬೇರೊಬ್ಬ ಸ್ವಾಮೀಜಿಗೆ ಕೊಟ್ಟದ್ದು ನಿಜ. ಆದರೇ ಮರಳಿ ನೀಡದ್ದಕ್ಕೆ ವಕೀಲ ರವಿ ಕಿರಣ್ ಮುರಡೇಶ್ವ ರನ್ನು ಭೇಟಿ ಮಾಡಿ ಕೇಸ್ ಹಾಕಲು ತೀರ್ಮಾನ ಆಗಿತ್ತು. ಅದು ಮಠಾಧೀಶರಿಗೆ ಸರಿಬರಲಿಲ್ಲ ಅಂತ ಹೇಳಿದ ಅವರು, ಶಿರೂರು ಮಠಕ್ಕೆ ಬಾಲ ಸನ್ಯಾಸಿಗಳನ್ನು ಪೀಠಾಧಿಪತಿ ಮಾಡುವ ಬದಲು ವಯಸ್ಕರನ್ನು ಪೀಠಾಧಿಪತಿ ಮಾಡುವ ಕುರಿತು ಪೇಜಾವರ ಶ್ರೀಗಳ ಮಾತಿಗೆ ಸಹಮತ ವ್ಯಕ್ತಪಡಿಸಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews