ಚಂಡೀಗಢ: ಪಂಜಾಬ್‌ನ (Punjab) ಮಾಜಿ ಮುಖ್ಯಮಂತ್ರಿ ಹಾಗೂ ಶಿರೋಮಣಿ ಅಕಾಳಿದಳದ (Shiromani Akali Dal) ಮುಖ್ಯಸ್ಥ ಪ್ರಕಾಶ್ ಸಿಂಗ್ ಬಾದಲ್ (Parkash Singh Badal) ಅವರು ಪಂಜಾಬ್‌ನ ಮೊಹಾಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
5 ಬಾರಿ ಮುಖ್ಯಮಂತ್ರಿಯಾಗಿದ್ದ 95 ವರ್ಷದ ಬಾದಲ್ ಅವರನ್ನು ಉಸಿರಾಟದ ತೊಂದರೆಯ ಹಿನ್ನೆಲೆಯಲ್ಲಿ ಭಾನುವಾರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಪ್ರಕಾಶ್ ಸಿಂಗ್ ಬಾದಲ್ ಅವರು ಅಸುನಿಗಿದ್ದಾರೆ. ಇದನ್ನೂ ಓದಿ: ಶೆಟ್ಟರ್, ಸವದಿ ಸೋಲಿಸಲು ಬೊಮ್ಮಾಯಿ, ಬಿಎಸ್‌ವೈಗೆ ಟಾಸ್ಕ್
ಬಾದಲ್ ಅವರ ಅಂತಿಮ ಸಂಸ್ಕಾರ ಭಟಿಂಡದ ಬಾದಲ್ ಗ್ರಾಮದಲ್ಲಿ ನಡೆಯಲಿದೆ. ಬುಧವಾರ ಬೆಳಗ್ಗೆ ಅವರ ಪಾರ್ಥಿವ ಶರೀರವನ್ನು ಮೊಹಾಲಿಯಿಂದ ಬಾದಲ್ ಗ್ರಾಮಕ್ಕೆ ಸ್ಥಳಾಂತರಿಸಲಾಗುವುದು ಎಂದು ಅವರ ಮಗ, ಪಕ್ಷದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ಜೂನ್‌ನಲ್ಲಿ ಆಸ್ತಮಾದಿಂದಾಗಿ ಬಾದಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ವರ್ಷ ಫೆಬ್ರವರಿಯಲ್ಲಿ ಅವರನ್ನು ಕೋವಿಡ್ ನಂತರದ ಆರೋಗ್ಯ ತಪಾಸಣೆಗಾಗಿ ಮೊಹಾಲಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಈ ಸಮಯದಲ್ಲೂ ಅವರು ಹೃದಯ ಮತ್ತು ಶ್ವಾಸಕೋಶದ ತಪಾಸಣೆಗೆ ಒಳಗಾಗಿದ್ದರು. ಇದನ್ನೂ ಓದಿ: ಮೋಸ ಮಾಡಿದ್ದಕ್ಕೆ ಮದ್ವೆ ಮಂಟಪಕ್ಕೆ ಬಂದು ವರನಿಗೆ ಆ್ಯಸಿಡ್ ಎರಚಿದ ಮಾಜಿ ಗೆಳತಿ