ನವದೆಹಲಿ: ಜಪಾನಿನ ಮಾಜಿ ಪ್ರಧಾನಿ ಶಿಂಜೋ ಅಬೆ ಭಾರತದ ಜೊತೆ ಉತ್ತಮ ಸಂಬಂಧ ಹೊದಿದ್ದರು. ಕಳೆದ ವರ್ಷ ಅಬೆ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿಯನ್ನು ಭಾರತ ಸರ್ಕಾರ ಘೋಷಿಸಿತ್ತು.
ಲಿಬರಲ್ ಡೆಮಾಕ್ರಾಟಿಕ್ ಪಕ್ಷದ ಅಧ್ಯಕ್ಷರಾಗಿದ್ದ ಅಬೆ ನಾಲ್ಕು ಬಾರಿ ಸುಧೀರ್ಘ ಕಾಲ ಪ್ರಧಾನಿಯಾಗಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ 2020ರ ಸೆಪ್ಟೆಂಬರ್‌ನಲ್ಲಿ ರಾಜೀನಾಮೆ ನೀಡಿದ್ದರು. ಆರೋಗ್ಯ ಚೇತರಿಕೆಯಾದ ಬೆನ್ನಲ್ಲೇ ಮತ್ತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಗುರುತಿಸಿಕೊಂಡಿದ್ದರು.
Advertisement
Advertisement
ಭಾರತದ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದಅವರು ಜಪಾನ್‌ನಿಂದ ಭಾರತಕ್ಕೆ ಅತಿ ಹೆಚ್ಚು ಬಾರಿ ಭೇಟಿ ನೀಡಿದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು.
Advertisement
2006-07 ಅವಧಿಯಲ್ಲಿ ಮೊದಲ ಬಾರಿ ಭಾರತಕ್ಕೆ ಬಂದಿದ್ದ ಅವರು ಸಂಸತ್ ಉದ್ದೇಶಿಸಿ ಮಾತನಾಡಿದ್ದರು. ಎರಡನೇ ಬಾರಿ ಪ್ರಧಾನಿಯಾದಾಗ ಮೂರು ಬಾರಿ ಭೇಟಿ ನೀಡಿದ್ದರು. 2014 ಜನವರಿ, ಡಿಸೆಂಬರ್ 2015, ಸೆಪ್ಟೆಂಬರ್ 2017 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು.
Advertisement
2014 ರಲ್ಲಿ ಭಾರತದ ಗಣರಾಜೋತ್ಸವ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದರು. ಹೀಗೆ ಅತಿಥಿಯಾದ ಜಪಾನ್ ಮೊದಲ ಪ್ರಧಾನಿ ಇವರಾಗಿದ್ದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಅತ್ಯುತ್ತಮ ಒಡನಾಟ ಹೊಂದಿದ್ದರು. 2001 ರಿಂದ ಭಾರತ ಜಪಾನ್ ಗೆಳೆತನ ಶುರುವಾಗಿದ್ದು 2012 ರಿಂದ ಈ ಸಂಬಂಧ ಗಟ್ಟಿ ಮಾಡುವಲ್ಲಿ ಅಬೆ ಪಾತ್ರ ದೊಡ್ಡದು. ಇದನ್ನೂ ಓದಿ: ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆಗೆ ಗುಂಡೇಟು – ಆಸ್ಪತ್ರೆಯಲ್ಲಿ ನಿಧನ
ಗುಜರಾತ್ ಸಿಎಂ ಆದ ಕಾಲದಿಂದ ಅಬೆ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ನಂಟು ಹೊಂದಿದ್ದರು. ಮೋದಿ ಪ್ರಧಾನಿಯಾದ ಬಳಿಕ ಹಲವು ಒಪ್ಪಂದಗಳು ಭಾರತ ಜಪಾನ್ ನಡುವೆ ನಡೆದಿದ್ದವು. ಬುಲೆಟ್ ರೈಲು ನಿರ್ಮಾಣ ಯೋಜನೆಗೆ ಮೋದಿ ಮತ್ತು ಅಬೆ ಸೇರಿ ಅಹಮದಾಬಾದ್‌ನಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು. ಅಷ್ಟೇ ಅಲ್ಲದೇ ಅಹಮದಾಬಾದ್‌ನಲ್ಲಿ ನಾಯಕರು ರೋಡ್ ಶೋ ನಡೆಸಿದ್ದರು.