ಬೆಂಗಳೂರು: ಬಿಗ್ ಬಾಸ್ ಸ್ಪರ್ಧಿ, ಕಿರುತೆರೆ ನಟ ಶೈನ್ ಶೆಟ್ಟಿ ಅವರಿಗೆ ಅವಕಾಶಗಳು ಸಿಗುತ್ತಿಲ್ಲ ಎಂದು ಫುಡ್ ಟ್ರಕ್ ನಡೆಸುತ್ತಿದ್ದರು. ಫುಡ್ ಟ್ರಕ್ ನಡೆಯುತ್ತಲೇ ಶೈನ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು, ಈಗ ಅದನ್ನು ಅವರ ತಾಯಿ ನೋಡಿಕೊಳ್ಳುತ್ತಿದ್ದಾರೆ.
ಶೈನ್ ಬಿಗ್ ಬಾಸ್ ಮನೆಯಲ್ಲಿ ತಾವು ‘ಗಲ್ಲಿ ಕಿಚನ್’ ಎಂದು ಹೆಸರಿಟ್ಟು ಫುಡ್ ಟ್ರಕ್ ನಡೆಸುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. ನಟನೆಯ ಅವಕಾಶಗಳು ಕಡಿಮೆಯಾದಾಗ ಶೈನ್ ಜೀವನ ನಡೆಸಲು ಫುಡ್ ಟ್ರಕ್ ಶುರು ಮಾಡಿದ್ದರು. ಇದಾದ ಬಳಿಕ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ಅವರ ಗಲ್ಲಿ ಕಿಚನ್ ನಿಂತಿದ್ದೀಯಾ ಅಥವಾ ಯಾರಾದರೂ ನಡೆಸುತ್ತಿದ್ದಾರಾ ಎಂದು ನೋಡಲು ಪಬ್ಲಿಕ್ ಟಿವಿ ಬನಶಂಕರಿಯ ಗಲ್ಲಿ ಕಿಚನ್ಗೆ ಎಂಟ್ರಿ ನೀಡಿತು.
Advertisement
Advertisement
ಗಲ್ಲಿ ಕಿಚನ್ ಫುಡ್ ಟ್ರಕ್ ಅನ್ನು ಶೈನ್ ಅವರ ತಾಯಿ ನೋಡಿಕೊಳ್ಳುತ್ತಿದ್ದಾರೆ. ಮಗ ಶುರು ಮಾಡಿದ ಈ ಟ್ರಕ್ ನಿಲ್ಲಬಾರದು ಹಾಗೂ ಬೇರೆ ಯಾರಿಗೂ ನೋಡಿಕೊಳ್ಳಲು ಕೊಡುವುದು ಏಕೆ ಎಂದು ತಾವೇ ಗಲ್ಲಿ ಕಿಚನ್ಗೆ ಸಾರಥಿಯಾಗಿದ್ದಾರೆ.
Advertisement
ಈ ಬಗ್ಗೆ ಪ್ರತಿಕ್ರಿಯಿಸಿದ ಶೈನ್ ತಾಯಿ, ಮೊದಲು ಆಗಾಗ ಮಗನ ಜೊತೆ ಗಲ್ಲಿ ಕಿಚನ್ಗೆ ಬರುತ್ತಿದ್ದೆ. ಆದರೆ ಈಗ ಆತ ಬಿಗ್ ಬಾಸ್ ಮನೆಗೆ ಹೋಗಿದ್ದು, ನಾನೇ ಬರುತ್ತಿದ್ದೇನೆ. ಮೊದಲಿಗಿಂತ ಈಗ ಗ್ರಾಹಕರು ಹೆಚ್ಚಿಗೆ ಬರುತ್ತಿದ್ದಾರೆ. ಬಂದು ಶೈನ್ ಶೆಟ್ಟಿ ಬಗ್ಗೆ ಮಾತನಾಡುತ್ತಾರೆ. ಇದೇ ವೇಳೆ ಶೈನ್ ಬಿಗ್ ಬಾಸ್ ಗೆಲ್ಲುತ್ತಾರೆ ಎಂದು ಹೇಳುತ್ತಾರೆ. ಗ್ರಾಹಕರ ಮಾತು ಕೇಳಿ ನನಗೆ ತುಂಬಾ ಖುಷಿಯಾಗುತ್ತೆ ಎಂದು ತಿಳಿಸಿದ್ದಾರೆ.
Advertisement
ಗಲ್ಲಿ ಕಿಚನ್ ಹುಡುಕಿ ಬರುವ ಗ್ರಾಹಕರು ಖುಷಿ ವ್ಯಕ್ತಪಡಿಸುತ್ತಾರೆ. ಶೈನ್ ಶೆಟ್ಟಿ ಕಿಚನ್ ಎಂದು ಬಂದರೂ ಇಲ್ಲಿ ಒಳ್ಳೆಯ ಟೇಸ್ಟಿ ಫುಡ್ ಸಿಗುತ್ತದೆ. ಹಾಗೆಯೇ ಶೈನ್ ಶೆಟ್ಟಿ ತಮ್ಮ ನೆಚ್ಚಿನ ಸ್ಪರ್ಧಿ ಎಂದು ಸಂತೋಷ ವ್ಯಕ್ತಪಡಿಸುತ್ತಾರೆ.