‘ಬಿಗ್ ಬಾಸ್’ ಖ್ಯಾತಿಯ ಶೈನ್ ಶೆಟ್ಟಿ (Shine Shetty) ಬಳಿ ಈಗ ಕೈತುಂಬಾ ಸಿನಿಮಾಗಳಿವೆ. ಯಶಸ್ಸಿಗಾಗಿ ಶೈನ್ ದಿಟ್ಟ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಇದನ್ನೂ ಓದಿ:ಮಂತ್ರಾಲಯದಲ್ಲಿ ಉರುಳು ಸೇವೆ ಮಾಡಿ ಹರಕೆ ತೀರಿಸಿದ ನಟ ವಿನೋದ್ ಪ್ರಭಾಕರ್

‘ಜಸ್ಟ್ ಮ್ಯಾರೀಡ್’ ಚಿತ್ರದಲ್ಲಿ ಅಂಕಿತಾ ಅಮರ್‌ಗೆ ನಾಯಕನಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲೂ ಅವರ ಪಾತ್ರ ವಿಭಿನ್ನವಾಗಿದೆ. ಸದ್ಯದಲ್ಲೇ ಈ ಚಿತ್ರದ ರಿಲೀಸ್ ಬಗ್ಗೆ ಮಾಹಿತಿ ಸಿಕ್ಕಿದೆ.
ಅಂದಹಾಗೆ, ಶೈನ್ ಶೆಟ್ಟಿ ಅವರು ಅವರ ಹೆಸರನ್ನು ಬದಲಿಸಿಕೊಂಡಿದ್ದಾರೆ. ನಟನ ತಂದೆಯ ಹೆಸರು ಶರಶ್ಚಂದ್ರ ಶೆಟ್ಟಿ. ಇದನ್ನೇ ಅವರು ‘ಶೈನ್ ಶರಶ್ ಶೆಟ್ಟಿ’ ಎಂದು ಬದಲಿಸಿದ್ದಾರೆ.



