ಪ್ರೀತಿಯ ಅಪ್ಪು ಕರ್ನಾಟಕ ರತ್ನ ಡಾ.ಪುನೀತ್ ರಾಜ್ಕುಮಾರ್ ಅಭಿನಯದ ‘ಜೇಮ್ಸ್’ ಸಿನಿಮಾ ರಿಲೀಸ್ ಆಗಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ರಾಜ್ಯಾದ್ಯಂತ ಅಪ್ಪು ಅಭಿಮಾನಿಗಳು ಹಬ್ಬದಂತೆ ಸಂಭ್ರಮಾಚರಣೆ ಮಾಡ್ತಾ ಇದ್ದಾರೆ. ಅಪ್ಪು ಇಲ್ಲದೇ ರಿಲೀಸ್ ಆಗಿರುವ ಈ ಸಿನಿಮಾವನ್ನು ನೋಡಿ ಅಭಿಮಾನಿಗಳು ಕಣ್ಣೀರಿಟ್ಟು ಭಾವುಕರಾಗಿದ್ದಾರೆ. ಈ ವೇಳೆ ಜೇಮ್ಸ್ ಸಿನಿಮಾದಲ್ಲಿ ಅಪ್ಪು ಸ್ನೇಹಿತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಬಿಗ್ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಇಂದು ಅಪ್ಪು ನೆನೆದು ಕಣ್ಣೀರಿಟ್ಟದ್ದಾರೆ.
Advertisement
ಪುನೀತ್ ರಾಜ್ಕುಮಾರ್ ಜೊತೆ ಶೈನ್ ಶೆಟ್ಟಿ ಚೊಚ್ಚಲ ಸಿನಿಮಾ ಇದಾಗಿದೆ. ತಾನು ಅಭಿನಯಿಸಿರುವ ‘ಜೇಮ್ಸ್’ ಸಿನಿಮಾ ತ್ರೀವೇಣಿ ಚಿತ್ರಮಂದಿರದಲ್ಲಿ ನೋಡಿದ್ದಾರೆ. ಅಭಿಮಾನಿಗಳ ಜೊತೆ ಕುಳಿತು ಸಿನಿಮಾ ವೀಕ್ಷಿಸಿದ ಶೈನ್, ಅಪ್ಪು ನೆನೆದು ಕಣ್ಣೀರು ಇಟ್ಟಿದ್ದಾರೆ. ಇದನ್ನೂ ಓದಿ: ಡಾ.ಪುನೀತ್ ರಾಜ್ಕುಮಾರ್ ನೆನೆದು ಗುಣಗಾನ ಮಾಡಿದ ಪ್ರಿಯಾಂಕ್ ಖರ್ಗೆ
Advertisement
Advertisement
ಸಿನಿಮಾ ವೀಕ್ಷಿಸಿದ ಬಳಿಕ ಮಾತನಾಡಿದ ಶೈನ್ ಶೆಟ್ಟಿ, ಕೈ ಹಿಡಿದು ದಾರಿ ತೋರಿಸಿದ ದೇವರು ಅಪ್ಪು. ಅವರು ಇಲ್ಲ ಅನ್ನೋದು ತುಂಬಾ ನೋವಾಗ್ತಿದೆ. ಅವರು ನಮ್ಮ ಜೊತೆಯಲ್ಲೆ ಇದ್ದಾರೆ. ಎಲ್ಲೂ ಹೋಗಿಲ್ಲ ಅನ್ಸುತ್ತೆ. ಅವರ ಜೊತೆ ಕೆಲಸ ಮಾಡಿದ್ದು ನಮಗೆ ಒಂದು ಗೋಲ್ಡನ್ ಅವಕಾಶ ಅಂತಾ ಹೇಳಬಹುದು. ಹೊಸಬರಿಗೆ ಅವಕಾಶ ಕೊಡುವುದರಲ್ಲಿ ಅವರು ತುಂಬಾ ಸ್ಫೂರ್ತಿ ಹಾಕ್ತಾ ಇದ್ರು ಎಂದು ಅಪ್ಪು ನೆನೆದ ಭಾವುಕರಾಗಿದ್ದಾರೆ.