ಅಭಿಮಾನಿಗಳಿಗೆ ಬಿಗ್ ಮನೆಯಿಂದ್ಲೇ ಶೈನ್ ಶೆಟ್ಟಿ ಪತ್ರ

Public TV
1 Min Read
SHINE A 1

ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ಕೊನೆಯ ಹಂತ ತಲುಪಿದ್ದು, ಇನ್ನೂ ಒಂದು ವಾರದಲ್ಲಿ ಫಿನಾಲೆ ತಲುಪಲಿದೆ. ಇದೀಗ ಬಿಗ್‍ಮನೆಯಿಂದಲೇ ಶೈನ್ ಶೆಟ್ಟಿ ತಮ್ಮ ಅಭಿಮಾನಿಗಳಿಗೆ ಪತ್ರವನ್ನು ಬರೆದಿದ್ದಾರೆ.

ಶುಕ್ರವಾರ ಬಿಗ್ ಮನೆಗೆ ಅತಿಥಿಯಾಗಿ ‘ಪುಟ್ಟಗೌರಿ ಮದುವೆ’ ಸೀರಿಯಲ್ ಖ್ಯಾತಿಯ ನಟಿ ರಂಜನಿ ಹೋಗಿದ್ದರು. ಅವರು ಬರುವ ಮುನ್ನ ಮನೆಯಲ್ಲಿರುವ ಎಲ್ಲಾ ಸ್ಪರ್ಧಿಗಳಿಗೆ ಒಂದು ಪತ್ರ ಬರೆಯುವಂತೆ ಹೇಳಿದ್ದರು. ಅಂದರೆ 100 ದಿನಗಳನ್ನು ಮುಗಿಸಿದ್ದೀರಿ. ಅಲ್ಲದೇ ಈ ಬಿಗ್‍ಬಾಸ್ ಮನೆಯಲ್ಲಿ ನಿಮ್ಮ ಪಯಣದ ಬಗ್ಗೆ ತಮ್ಮ ಅಭಿಮಾನಿಗಳಿಗೆ ಏನಾದರೂ ಹೇಳಲು ಇಚ್ಛಿಸುವವರು ಈ ಪತ್ರದಲ್ಲಿ ನಿಮ್ಮ ಅನಿಸಿಕೆಯನ್ನು ಬರೆದುಕೊಡಿ. ಅದನ್ನು ನಿಮ್ಮ ಫೇಸ್‍ಬುಕ್, ಇನ್‍ಸ್ಟಾಗ್ರಾಂ ಇತ್ಯಾದಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ತಿಳಿಸಿದ್ದರು.

shine a

ಅದರಂತೆಯೇ ಸ್ಪರ್ಧಿಗಳು ತಮಗೆ ಅನಿಸಿಕೆಯನ್ನು ಪತ್ರದ ಮೂಲಕ ಬರೆದು ತಿಳಿಸಿದ್ದಾರೆ.

ಶೈನ್ ಪತ್ರದಲ್ಲಿ ಏನಿದೆ?
“103 ದಿನಗಳ ಕಳೆದು, 112 ದಿನದತ್ತ ಸಾಗುತ್ತಿದ್ದೇನೆ. ಜೀವನದಲ್ಲಿ ಕಳೆದುಕೊಂಡಿದ್ದು, ಪಡೆದುಕೊಂಡಿದ್ದು ಎರಡು ಇದೆ. ಆದರೆ ಈ ಹೊಸ ತಿರುವಿನಲ್ಲಿ ನಾನು ಕೇವಲ ಗಳಿಸಿದ್ದೇನೆ. ಸ್ನೇಹಿತರು, ಜೀವದ ಗೆಳೆಯ, ಸುಂದರ ನೆನಪುಗಳನ್ನು ಗಳಿಸಿದ್ದೇನೆ. ಬರೀ ಪಾತ್ರವಾಗಿ ಪರಿಚಿತನಾಗಿದ್ದ ನನ್ನನ್ನು ಎಲ್ಲಾ ಕಲಾಭಿಮಾನಿಗಳಿಗೆ ಶೈನ್ ಶೆಟ್ಟಿಯಾಗಿ ಪರಿಚಿತನಾಗಲು ಅವಕಾಶವಾಗಿದ್ದೇ ಈ ‘ಬಿಗ್‍ಬಾಸ್’ ವೇದಿಕೆಯಿಂದ”

shineshetty

“ಈ ಸುಂದರವಾದ ಅನುಭವವನ್ನು ಅನುಭವಿಸಿ, ನನ್ನ ಪಯಣವನ್ನು ಸಾಧನೆಯತ್ತ ಕೊಂಡ್ಯೊಯಲು ಸಾಧ್ಯವಾಗಿದೆ ಎಂದರೆ ಅದಕ್ಕೆ ಕಾರಣ ನೀವು, ನಿಮ್ಮ ಪ್ರೀತಿ, ನಿಮ್ಮ ಬೆಂಬಲ, ನಿನ್ನ ವೋಟುಗಳು. ಉಸಿರಿರುವವರೆಗೂ ನಿಮ್ಮನ್ನೆಲ್ಲಾ ಕಲಾ ಸೇವೆಯ ಮೂಲಕ ರಂಜಿಸುತ್ತೇನೆ. ನಿಮ್ಮ ಅಗಾಧವಾದ ಪ್ರೀತಿ, ಹಾರೈಕೆ ಹಾಗೂ ಅಭಿಮಾನಕ್ಕೆ ಸದಾ ಚಿರಋಣಿಯಾಗಿರುವ ನಿಮ್ಮ ನಲ್ಮೆಯ ಶೈನ್ ಶೆಟ್ಟಿ” ಎಂದು ಪತ್ರದಲ್ಲಿ ಬರೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *