ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸುತ್ತಿರುವ, ಲೋಹಿತ್ ನಿರ್ದೇಶನದ ಮಾಫಿಯಾ ಸಿನಿಮಾ ತಂಡವನ್ನು ಸೇರಿಕೊಂಡಿದ್ದಾರೆ ಬಿಗ್ ಬಾಸ್ ಸ್ಪರ್ಧಿ ಶೈನ್ ಶೆಟ್ಟಿ. ಈ ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದು, ಅದು ಫುಟ್ಬಾಲ್ ಆಟಗಾರನ ಪಾತ್ರವಂತೆ. ಇದೇ ಜೂನ್ 15ರಿಂದ ಆರಂಭವಾಗಲಿರುವ ಕೊನೆಯ ಹಂತದ ಶೂಟಿಂಗ್ ನಲ್ಲಿ ಶೆಟ್ಟಿ ಪಾಲ್ಗೊಳ್ಳುತ್ತಿದ್ದಾರೆ. ಬೆಂಗಳೂರು ಮತ್ತು ಹೈದರಾಬಾದ್ ನಲ್ಲಿ ಈ ಹಂತದ ಶೂಟಿಂಗ್ ನಡೆಯಲಿದೆ.
ಪ್ರಜ್ವಲ್ ದೇವರಾಜ್ ಗೆಳೆಯನ ಪಾತ್ರ ಅದಾಗಿದ್ದು, ಅದೊಂದು ಮಹತ್ವದ ಪಾತ್ರ ಎಂದಿದ್ದಾರೆ ನಿರ್ದೇಶಕ ಲೋಹಿತ್. ‘ಮಾಫಿಯಾ ಸಿನಿಮಾ ಕಾರಣಾಂತರಗಳಿಂದ ಶೂಟಿಂಗ್ ತಡವಾಗಿದೆ. ಒಂದು ತಿಂಗಳ ಕಾಲ ಕೊನೆಯ ಹಂತದ ಶೂಟಿಂಗ್ ನಡೆಯಲಿದೆ. ಅಲ್ಲದೇ, ಹಾಡೊಂದರ ಚಿತ್ರಿಕರಣಕ್ಕಾಗಿ ಲಡಾಖ್ ಅಥವಾ ಗೋವಾಗೆ ಹೋಗಲು ತಯಾರಿ ಕೂಡ ಮಾಡಿಕೊಳ್ಳಲಾಗುತ್ತಿದೆ’ ಎನ್ನುತ್ತಾರೆ ನಿರ್ದೇಶಕರು. ಇದನ್ನೂ ಓದಿ : ನಯನತಾರಾ ಒಂದಲ್ಲ, ಎರಡೆರಡು ಎಡವಟ್ಟು ತಿರುಪತಿ ದೇವಸ್ಥಾನದಿಂದ ಲೀಗಲ್ ನೋಟಿಸ್
ಪ್ರಜ್ವಲ್ ದೇವರಾಜ್ ಮತ್ತು ಅದಿತಿ ಪ್ರಭುದೇವ್ ಕಾಂಬಿನೇಷನ್ ನ ಸಿನಿಮಾ ಇದಾಗಿದ್ದು, ವಾಸುಕಿ ವೈಭವ್, ಸಾಧು ಕೋಕಿಲಾ, ಪ್ರಕಾಶ್ ಬೆಳವಾಡಿ ಸೇರಿದಂತೆ ಅನೇಕ ಕಲಾವಿದರು ತಾರಾ ಬಳಗದಲ್ಲಿ ಇದ್ದಾರೆ. ಅನೂಪ್ ಸೀಳಿನ್ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬರಲಿದೆ. ಜುಲೈನಲ್ಲಿ ಸಿನಿಮಾದ ಬಹುತೇಕ ಶೂಟಿಂಗ್ ಮುಗಿಯಲಿದೆ.