ಬೆಂಗಳೂರು: ಬಿಗ್ ಬಾಸ್ ಸೀಸನ್-7ರಲ್ಲಿ ದೀಪಿಕಾ ದಾಸ್ ಜೊತೆಗಿದ್ದ ಸಂಬಂಧದ ಬಗ್ಗೆ ಶೈನ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಶೈನ್, ನನ್ನ ಹಾಗೂ ದೀಪಿಕಾ ನಡುವೆ ಏನೋ ನಡೆಯುತ್ತಿದೆ ಎನ್ನುವ ರೀತಿಯಲ್ಲೇ ಇತ್ತು. ನಾನು ದೀಪಿಕಾ ಅವರನ್ನು ತುಂಬಾನೇ ಅಡ್ಮೇರ್ ಮಾಡುತ್ತೇನೆ. ಹುಡುಗಿಯರು ಒಂದು ಕಡೆ ನಿಂತರೆ, ಹುಡುಗರು ಮತ್ತೊಂದು ಕಡೆ ನಿಂತರೆ, ಏನಪ್ಪಾ ನಾವು ಹುಡುಗಿಯರು ಸ್ವಲ್ಪ ಕಂಪೆನ್ಸಷನ್ ಇರಬೇಕು ಎಂಬ ನೇಚರ್ ದೀಪಿಕಾಗೆ ಇರಲಿಲ್ಲ. ಒಬ್ಬಳು ಹುಡುಗಿಯಾಗಿ ಅವರು ಸ್ಟ್ರಾಂಗ್, ಒಬ್ಬ ಹುಡುಗ ಆಗಿ ಅವನು ಸ್ಟ್ರಾಂಗ್ ಎನ್ನುವ ಕಾನ್ಸೆಪ್ಟ್ ನಲ್ಲಿ ಅವರು ಬಿಗ್ ಬಾಸ್ನಲ್ಲಿ ಆಡಿದ್ದಾರೆ ಎಂದರು.
Advertisement
Advertisement
ದೀಪಿಕಾ ಅವರು ತುಂಬಾನೇ ಸ್ಟ್ರಾಂಗ್ ಸ್ಪರ್ಧಿ ಆಗಿದ್ದರು. ನಾನು ಅವರನ್ನು ತುಂಬಾ ಗೌರವಿಸುತ್ತೇನೆ ಹಾಗೂ ಅಡ್ಮೇರ್ ಮಾಡುತ್ತೇನೆ. ಇಡೀ ಸೀಸನ್ ಯಾರೇ ಏಟು, ಗಾಯ ಮಾಡಿಕೊಳ್ಳಿ ಟಾಸ್ಕ್ ಮುಗಿದ ಮೇಲೆ 113 ದಿನಗಳ ಕಾಲ ದೀಪಿಕಾ ಅವರು ಅಡುಗೆ ಮಾಡಿ ಎಲ್ಲರಿಗೂ ಬಡಿಸುತ್ತಿದ್ದರು. ಮೊದಲು ಸುಜಾತ ಮಾಡುತ್ತಿದ್ದರು. ಬಳಿಕ ಚಂದನಾ ಹಾಗೂ ದೀಪಿಕಾ ಅಡುಗೆ ಮಾಡಿ ಎಲ್ಲರಿಗೂ ಬಡಿಸುತ್ತಿದ್ದರು ಎಂದು ಶೈನ್ ಪ್ರತಿಕ್ರಿಯಿಸಿದ್ದಾರೆ.
Advertisement
ಈ ಹಿಂದೆ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ವೊಂದರಲ್ಲಿ ಶೈನ್ ಕುಂದಾಪುರ ಸ್ಟೈಲ್ನಲ್ಲಿ ದೀಪಿಕಾ ಅವರನ್ನು ಪ್ರಪೋಸ್ ಮಾಡಿದ್ದರು.