ಬೆಂಗಳೂರು: ಬಿಗ್‍ಬಾಸ್ ಫಿನಾಲೆಗೆ ಉಳಿದಿರುವುದು ಇನ್ನೂ ಎರಡು ದಿನ ಮಾತ್ರ. ಈ ಸಂದರ್ಭದಲ್ಲಿ ಶೈನ್ ಮತ್ತು ಭೂಮಿ ನಡುವೆ ಮನಸ್ತಾಪ ಉಂಟಾಗಿದೆ.
ಭೂಮಿ ಶೆಟ್ಟಿ ಮತ್ತು ಶೈನ್ ಶೆಟ್ಟಿ ಇಬ್ಬರೂ ಕುಂದಾಪುರದವರು. ಇವರಿಬ್ಬರು ಯಾವಾಗಲೂ ತಮಾಷೆಮಾಡಿಕೊಂಡು, ಹೊಡೆದಾಡಿಕೊಳ್ಳುತ್ತಾ, ತರ್ಲೆ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಇವರಿಬ್ಬರ ಮಧ್ಯೆ ಒಳ್ಳೆಯ ಸ್ನೇಹ-ಬಾಂಧವ್ಯವಿದೆ. ಈ ವಿಚಾರ ಬಿಗ್‍ಬಾಸ್ ಮನೆಯ ಸದಸ್ಯರಿಗೂ ತಿಳಿದಿದೆ. ಆದರೆ ಬಿಗ್‍ಬಾಸ್ ಮುಗಿಯುತ್ತಿರುವ ಸಂದರ್ಭದಲ್ಲಿ ಶೈನ್ ಮತ್ತು ಭೂಮಿ ನಡುವೆ ಮನಸ್ತಾಪ ಉಂಟಾಗಿದೆ.
Advertisement
Advertisement
ಶೈನ್, ದೀಪಿಕಾ, ಭೂಮಿ, ವಾಸುಕಿ, ಮತ್ತು ಕುರಿ ಪ್ರತಾಪ್ ಐವರು ಲಿವಿಂಗ್ ಏರಿಯಾದಲ್ಲಿ ಕುಳಿತುಕೊಂಡು ಮಾತನಾಡುತ್ತಿದ್ದರು. ಈ ವೇಳೆ ಶೈನ್, ಸ್ನಾನ ಆದ ನಂತರ ಬಾತ್‍ರೂಮ್‍ನಿಂದ ಬಟ್ಟೆ ತೆಗೆದುಕೊಂಡು ಬರುವ ಅಭ್ಯಾಸವೇ ಇಲ್ಲವೇ ಎಂದು ಭೂಮಿಯನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಭೂಮಿ, ಯಾವತ್ತಾದ್ರೂ ಈ ರೀತಿ ಆಗಿದೆಯಾ. ಏನೋ ಗಡಿಬಿಡಿಯಲಿ ಮರೆತೆ. ಅದನ್ನ ಹೈ-ಲೈಟ್ ಮಾಡಬೇಡ ಎಂದು ಕೋಪದಿಂದ ಹೇಳಿದರು.
Advertisement
ಆಗ ಗರಂ ಆದ ಶೈನ್, ಹೈ-ಲೈಟ್ ಮಾಡೋದಾ. ಇಲ್ಲಿವರೆಗೂ ನಾನು ಎಲ್ಲಿ ಹೇಳಿದ್ದೀನಿ. ನೀನು ಮತ್ತು ಕಿಶನ್ ಒಂದೇ ರೀತಿ ಹೇಳುತ್ತೀರಾ. ನಾನು ದೀಪಿಕಾಗೆ ನಿಮ್ಮ ಬಟ್ಟೆನಾ ಎಂದು ಕೇಳಿದ್ದೆ. ಅದಾನಂತರ ಈಗಲೇ ಮೊದಲ ಬಾರಿಗೆ ನಿನಗೆ ಹೇಳಿದ್ದು. ಇದರಲ್ಲಿ ಹೈ-ಲೈಟ್ ಮಾಡಿ ನನಗೆ ಏನು ಸಿಗಬೇಕಿಲ್ಲ ಎಂದು ರೇಗಾಡಿದರು. ಅದಕ್ಕೆ ಭೂಮಿಯೂ ಗರಂ ಆಗಿ, ನೀನು ಮೊದಲೂ ಹೇಳಿದ್ದೀಯಾ, ನಾನು ತಪ್ಪು ಮಾಡಿದ್ರೆ ಒಪ್ಪಿಕೊಳ್ಳುತ್ತಿದ್ದೆ. ಆದರೆ ನೀನು ನನಗೆ ಹೇಳಿದಿಯಾ. ಅದನ್ನು ಒಪ್ಪಿಕೋ ಎಂದಿದ್ದಾರೆ.
Advertisement
ಆಗ ಶೈನ್ ಯಾವಾಗ ಹೇಳಿದ್ದೆ? ಯಾರಿಗೆ ಹೇಳಿದ್ದೆ ಎಂದು ಪ್ರಶ್ನೆ ಮಾಡಿದ್ದಾರೆ. ಇದೇ ರೀತಿ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಕೊನೆಗೆ ಇಬ್ಬರೂ ಮಾತನಾಡದೇ ಸುಮ್ಮನಾಗಿದ್ದಾರೆ. ಇದರಿಂದ ಬೇಸರಗೊಂಡ ಶೈನ್ ಹೊರಗಡೆ ಕುಳಿತಿದ್ದರು. ಆಗ ದೀಪಿಕಾ ಬಂದು ಸಮಾಧಾನ ಮಾಡಲು ಪ್ರಯತ್ನ ಮಾಡಿದ್ದಾರೆ.
ನಾವು ಯಾರ ಜೊತೆನೂ ಕ್ಲೋಸ್ ಆಗಬಾರದು. ಅದರಿಂದ ಸಲುಗೆ ಬೆಳೆಯುತ್ತದೆ. ಆದರೆ ನಾನು ತಮಾಷೆಗೆ ಹೇಳಿದ್ದು, ಹೈ-ಲೈಟ್ ಮಾಡಬೇಡಿ ಎಂದಿದ್ದಕ್ಕೆ ಬೇಸರವಾಯಿತು. ಅವರ ಬಟ್ಟೆ ಅಲ್ಲಿದೆ ಎಂದು ಹೇಳಿದರೆ ನನಗೆ ಏನು ಸಿಗುತ್ತದೆ. ನಿಜಾ ಹೈ-ಲೈಟ್ ಮಾಡಬೇಡಿ ಎಂದಾಗ ತುಂಬಾ ಬೇಸರವಾಯಿತು. ಭೂಮಿ ಬಟ್ಟೆ ಅಲ್ಲಿದೆ-ಇಲ್ಲಿದೆ ಎಂದು ಹೇಳಿದರೆ ನನಗೆ ಏನಾಗುತ್ತೆ. ಭೂಮಿ ಆಗಿದ್ದಕ್ಕೆ ಹೇಳಿದ್ದು, ಬೇರೆ ಯಾರಾಗಿದ್ದರೂ ಹೇಳುತ್ತಿರಲಿಲ್ಲ ಎಂದು ಬೇಸರದಿಂದ ಮಾತನಾಡಿದ್ದಾರೆ.
ಕೊನೆಗೆ ದೀಪಿಕಾ ಇರುವುದು ಇನ್ನೂ ಮೂರು ದಿನ ಇಬ್ಬರೂ ಕೋಪ ಮಾಡಿಕೊಳ್ಳಬೇಡಿ ಎಂದು ಸಮಾಧಾನ ಮಾಡಿದ್ದಾರೆ.