ನವದೆಹಲಿ: ಶಿವಸೇನೆ (Shiv Sena) ಹೆಸರು ಮತ್ತು ಚಿನ್ಹೆ ಮೇಲಿನ ಹಕ್ಕುಸ್ವಾಮ್ಯ ಕದನದಲ್ಲಿ ಉದ್ಧವ್ ಠಾಕ್ರೆ (Uddhav Thackeray) ಬಣಕ್ಕೆ ತೀವ್ರ ಹಿನ್ನೆಡೆಯಾಗಿದೆ. ಪಕ್ಷದ ಹೆಸರು ಮತ್ತು ಚಿನ್ಹೆಯನ್ನು ಸಿಎಂ ಏಕ್‍ನಾಥ್ ಶಿಂಧೆಗೆ (Uddhav Thackeray) ನಿಗದಿ ಮಾಡಿ ಕೇಂದ್ರ ಚುನಾವಣಾ ಆಯೋಗ ಆದೇಶ ನೀಡಿದೆ.
2019ರ ಮಹಾರಾಷ್ಟ್ರ (Maharashtra Election) ವಿಧಾನಸಭೆ ಚುನಾವಣೆಯಲ್ಲಿ ಗೆದ್ದ 55 ಅಭ್ಯರ್ಥಿಗಳ ಪೈಕಿ ಶೇ.76 ಮಂದಿ ಏಕನಾಥ್ ಶಿಂಧೆ ಅವರನ್ನು ಬೆಂಬಲಿಸುತ್ತಿದ್ದಾರೆ. ಉದ್ಧವ್ ಠಾಕ್ರೆ ಪರವಾಗಿ ಶೇ. 23.5 ಮಂದಿ ಮಾತ್ರ ಇದ್ದಾರೆ ಎಂದು ಚುನಾವಣಾ ಆಯೋಗ ತನ್ನ 78 ಪುಟಗಳ ತೀರ್ಪಿನಲ್ಲಿ ಉಲ್ಲೇಖಿಸಿದೆ.
ತಮ್ಮ ಬಣವನ್ನೇ ನಿಜವಾದ ಶಿವಸೇನೆ ಎಂದು ಘೋಷಿಸಿದ್ದಕ್ಕೆ ಮುಖ್ಯಮಂತ್ರಿ ಏಕನಾಥ ಶಿಂಧೆ ಹರ್ಷ ವ್ಯಕ್ತಪಡಿಸಿದ್ದಾರೆ. ಇದು ಬಾಳಾಸಾಹೇಬ್ ಠಾಕ್ರೆಯವರ ಸಿದ್ಧಾಂತಕ್ಕೆ ಸಿಕ್ಕ ಜಯ ಎಂದು ಅವರು ಹೇಳಿದ್ದಾರೆ.
ಚುನಾವಣಾ ಆಯೋಗದ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದೆ. ಇತ್ತ ಶಿಂಧೆ ಬಣ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಇದನ್ನೂ ಓದಿ: ನಕಲು ತಡೆಗೆ ಕಠಿಣ ಕ್ರಮ – ವಾರ್ಷಿಕ ಪರೀಕ್ಷೆಯ ಮೊದಲ ದಿನವೇ 4 ಲಕ್ಷ ವಿದ್ಯಾರ್ಥಿಗಳು ಗೈರು
ಕಳೆದ ತಿಂಗಳು, ಶಿಂಧೆ ಮತ್ತು ಶ್ರೀ ಠಾಕ್ರೆ ನೇತೃತ್ವದ ಬಣಗಳು ಚುನಾವಣಾ ಸಂಸ್ಥೆಗೆ ಪಕ್ಷದ ಹೆಸರು ಮತ್ತು ಚಿಹ್ನೆಯ ಬಗ್ಗೆ ತಮ್ಮ ಹಕ್ಕುಗಳನ್ನು ಬೆಂಬಲಿಸುವ ಸಂಬಂಧ ಲಿಖಿತ ಹೇಳಿಕೆಯನ್ನು ನೀಡಿದ್ದವು.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k