ಶಿವಮೊಗ್ಗ ಟು ಬೆಂಗಳೂರು ರೈಲು ಓಡಾಟ ಸ್ಥಗಿತ – ಡಬ್ಲಿಂಗ್ ಕಾಮಗಾರಿ ಆರಂಭ

Public TV
1 Min Read
railway station

ಶಿವಮೊಗ್ಗ: ತುಮಕೂರಿನಲ್ಲಿ ರೈಲ್ವೇ ಹಳಿ ಡಬ್ಲಿಂಗ್ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆ ಶಿವಮೊಗ್ಗ-ಬೆಂಗಳೂರು ಮಧ್ಯೆ ಒಂದು ವಾರ ರೈಲು ಓಡಾಟ ಸ್ಥಗಿತಗೊಳಿಸುತ್ತಿರುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ತಿಂಗಳ ಮೇ 22ರಿಂದ 29ರವರೆಗೆ ತುಮಕೂರು-ಗುಬ್ಬಿ ಮಾರ್ಗದಲ್ಲಿ ಡಬ್ಲಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೈಲು ಓಡಾಟ ಸ್ಥಗಿತಗೊಳಿಸುತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

railway station 1

ಹಳಿ ಡಬ್ಲಿಂಗ್ ಕಾರ್ಯ ಕೈಗೊಳ್ಳುತ್ತಿರುವ ಹಿನ್ನೆಲೆ ಶಿವಮೊಗ್ಗದಿಂದ ಬೆಂಗಳೂರಿಗೆ ಸಂಚರಿಸುವ ರೈಲುಗಳು ಮತ್ತು ತಾಳಗುಪ್ಪಾದಿಂದ ಬೆಂಗಳೂರಿಗೆ ಪ್ರಯಾಣಿಸುವ ರೈಲುಗಳ ಸೇವೆಯನ್ನು ಸ್ಥಗಿತಗೊಳಿಸಿರುವುದಾಗಿ ತಿಳಿಸಿದ್ದಾರೆ. ಬೆಂಗಳೂರು-ಶಿವಮೊಗ್ಗ ರೈಲು ಮಾರ್ಗ ಅಭಿವೃದ್ಧಿ ಹಿನ್ನೆಲೆಯಲ್ಲಿ ತಾಳಗುಪ್ಪ ಬೆಂಗಳೂರು ಇಂಟರ್ ಸಿಟಿ ರೈಲಿನ ಸಮಯವನ್ನು ಬದಲಾಯಿಸಿ ಬೆಳಗ್ಗೆ 7.40 ಕ್ಕೆ ಹೊರಡುವಂತೆ ಆದೇಶ ನೀಡಲಾಗಿತ್ತು. ಆದರೆ ಈ ಆದೇಶ ಇದೀಗ ಹಿಂಪಡೆಯಲಾಗಿದ್ದು ಎಂದಿನಂತೆ ಈ ರೈಲು ಬೆಳಗ್ಗೆ 6.40ಕ್ಕೆ ಹೊರಡಲಿದ್ದು ಬೆಂಗಳೂರಿಗೆ ಪ್ರಯಾಣ ಬೆಳೆಸಲಿದೆ.

ಸ್ಥಗಿತಗೊಳಿಸಿರುವ ರೈಲುಗಳ ವಿವರ

1. ಗಾಡಿ ನಂ. 56227 – ಬೆಂಗಳೂರು, ಶಿವಮೊಗ್ಗ ಟೌನ್ ಪ್ಯಾಸೇಂಜರ್- ರೈಲು, ಮೇ 23 ರಿಂದ 29 ರವರೆಗೆ ರದ್ದುಗೊಳಿಸಲಾಗಿದೆ.
2. ಗಾಡಿ ನಂ. 56228 – ಶಿವಮೊಗ್ಗ, ಬೆಂಗಳೂರು ಪ್ಯಾಸೆಂಜರ್ ರೈಲು- ಮೇ 23 ರಿಂದ 29 ರವರೆಗೆ ರದ್ದುಗೊಳಿಸಲಾಗಿದೆ.
3. ಗಾಡಿ ನಂ. 20651 – ಬೆಂಗಳೂರು, ತಾಳಗುಪ್ಪ ಎಕ್ಸ್ ಪ್ರೆಸ್ ರೈಲು- ಮೇ 23 ರಿಂದ 29 ರವರೆಗೆ ರದ್ದುಗೊಳಿಸಲಾಗಿದೆ.
4. ಗಾಡಿ ನಂ. 20652 – ತಾಳಗುಪ್ಪ, ಬೆಂಗಳೂರು ಎಕ್ಸ್ ಪ್ರೆಸ್ ರೈಲು- ಮೇ 23 ರಿಂದ 29 ರವರೆಗೆ ರದ್ದುಗೊಳಿಸಲಾಗಿದೆ.
5. ಗಾಡಿ ನಂ. 16579 – ಯಶವಂತಪುರ, ಶಿವಮೊಗ್ಗ ಟೌನ್ ರೈಲು- ಮೇ 25 ರಿಂದ 27 ರವರೆಗೆ ರದ್ದುಗೊಳಿಸಲಾಗಿದೆ.
6. ಗಾಡಿ ನಂ. 16580 – ಶಿವಮೊಗ್ಗ ಟೌನ್, ಯಶವಂತಪುರ ರೈಲು- ಮೇ 25 ರಿಂದ 27 ರವರೆಗೆ ರದ್ದುಗೊಳಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *